ಕಾಂಗ್ರೆಸ್‌ ಅನಧಿಕೃತ ಬ್ಯಾನರ್: ಬಿಬಿಎಂಪಿಯಿಂದ ಬಿತ್ತು ಭರ್ಜರಿ 50,000 ರೂ. ದಂಡ

ಬೆಂಗಳೂರು, ಆಗಸ್ಟ್ 21: ಬೆಂಗಳೂರಿನ ಸೌಂದರ್ಯ ಹಾಳಾದಂತೆ ತಡೆಗೆ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಕದಂತೆ ಅದೆಷ್ಟೋ ನಿಯಮ ರೂಪಿಸಿದರೂ ಸಹಿತ ಉಲ್ಲಂಘನೆ ಆಗುತ್ತಲೇ ಇದೆ. ಇದೀಗ ಕಾಂಗ್ರೆಸ್‌ ಅಳವಡಿಸಿದ್ದ ಬ್ಯಾನರ್ ತೆರವುಗೊಳಿಸಿರುವ ಬಿಬಿಎಂಪಿ 50,000 ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ.

ಬೆಂಗಳೂರಿನ ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾದಲ್ಲಿ (ಕ್ವೀನ್ಸ್ ರಸ್ತೆ) ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಅಳವಡಿಸಿದ್ದ ಅನಧಿಕೃತ ಬ್ಯಾನರ್ ಅನ್ನು ಬಿಬಿಎಂಪಿ ಸಿಬ್ಬಂದಿ ಸೋಮವಾರ ತೆರವುಗೊಳಿಸಿದರು. ನಿಯಮ ಮೀರಿ ಬ್ಯಾನರ್ ಹಾಕಿದ್ದಕ್ಕೆ 50,000/- ರೂ. ದಂಡ ವಿಧಿಸಲಾಯಿತು.

bbmp-imposes-50000-fine

ವಸಂತನಗರ ವಾರ್ಡ್-93 ವ್ಯಾಪ್ತಿಯ ಕ್ಲೀನ್ಸ್ ರಸ್ತೆಯ ಸ್ವತ್ತಿನ (ಸಂಖ್ಯೆ:12/1) ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗ, ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಹಾಗೂ ರಾಜ್ಯದ ಎಲ್ಲಾ ಪಧಾಧಿಕಾರಿಗಳು ಸೇರಿ ಮಾಜಿ ಪ್ರಧಾನಿ ಆಧುನಿಕ ಭಾರತದ ಹರಿಕಾರ ದಿ. ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ದಿ‌. ಡಿ. ದೇವರಾಜ ಅರಸು ರವರ ಜನ್ಮ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್ ಕಛೇರಿಯ ಮುಂಭಾಗದಲ್ಲಿ ಅನಧಿಕೃತವಾಗಿ ಬ್ಯಾನರ್ ಅಳವಡಿಸಿರುವುದು ಕಂಡು ಬಂದಿದೆ.

ಪಾಲಿಕೆ ಆಯುಕ್ತರ ಖಾತೆಗೆ ದಂಡ ಹಣ ಜಮೆಗೆ ಸೂಚನೆ

ಸದರಿ ಸ್ವತ್ತಿನಲ್ಲಿ ಅನಧಿಕೃತವಾಗಿ ಬ್ಯಾನರ್ ಅಳವಡಿಸಿರುವ ಬಗ್ಗೆ ಪಾಲಿಕೆವತಿಯಿಂದ ಅಧಿಕೃತವಾಗಿ ಪರವಾನಿಗೆ/ಅನುಮತಿ ಪಡೆದಿರುವುದಿಲ್ಲ. ಈ ಸಂಬಂಧ ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಬೆಂಗಳೂರು ರವರಿಗೆ 50,000/- ರೂಪಾಯಿ ದಂಡವನ್ನು ವಿಧಿಸಲಾಗಿದೆ.

bbmp-imposes-50000-fine

ದಂಡದ ಹಣವನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಅಧಿಕೃತ ತುಷಾರ್ ಗಿರಿನಾಥ್ ಅವರ ಖಾತೆಗೆ ದಂಡದ ಮೊತ್ತ 50,000 ಪಾವತಿಸುವಂತೆ ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಒಂದು ಹಂತದಲ್ಲಿ ಫ್ಲೆಕ್ಸ್, ಬ್ಯಾನರ್, ಪೋಸ್ಟರ್‌ಗಳನ್ನು ಹಾಕುವುದನ್ನು ತಡೆಯಲಾಗಿದೆ. ಹೀಗಿದ್ದರೂ ಸಹಿತ ಆಗಾಗ ಬ್ಯಾನರ್,ಪೋಸ್ಟರ್‌ಗಳು ರಾರಾಜಿಸುತ್ತಲೇ ಇವೆ. ಕೇಂದ್ರ ನಾಯಕರು ರಾಜ್ಯಕ್ಕೆ ಬಂದಾಗ, ಬೃಹತ್ ಕಾರ್ಯಕ್ರಮ, ಮೆರವಣಿಗೆ ಆಯೋಜನೆಗೊಂಡಾಗ ಇಂತಹ ಘಟನೆಗಳು ಮರುಕಳಿಸುತ್ತಲೇ ಇದೆ. ಬಿಬಿಎಂಪಿ ಸಿಬ್ಬಂದಿ ಫ್ಲೆಕ್ಸ್ ತೆರವು ಜೊತೆಗೆ ದಂಡ ಪ್ರಕ್ರಿಯೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+