ಬಿಬಿಎಂಪಿ: ಕ್ಲೀನ್ ಬೆಂಗಳೂರು ಅಭಿಯಾನ, ನೀವೂ ಪಾಲ್ಗೊಳ್ಳಿ

ಬೆಂಗಳೂರು, ಫೆಬ್ರವರಿ 21 : ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯು ಕ್ಲೀನ್ ಬೆಂಗಳೂರು ಅಭಿಯಾನವನ್ನು ಹಮ್ಮಿಕೊಂಡಿದೆ.

ಬೆಂಗಳೂರು ಸ್ವಚ್ಛತೆಯಲ್ಲಿ ಉತ್ತಮ ರ‍್ಯಾಂಕಿಂಗ್‌ ಪಡೆಯುವ ಉದ್ದೇಶದಿಂದ ಬಿಬಿಎಂಪಿಯು ಫೆ.24ರಿಂದ ಮಾರ್ಚ್ 4ರವರೆಗೆ ಕ್ಲೀನ್ ಬೆಂಗಳೂರು ಅಭಿಯಾನವನ್ನು ಹಮ್ಮಿಕೊಂಡಿದ್ದು, ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನಾಗರಿಕರಿಗೆ ಆಹ್ವಾನ ನೀಡಿದೆ.

ಅಭಿಯಾನಕ್ಕೆ ಕೈಜೋಡಿಸುವ ನಾಗರಿಕರು, ಸಂಘ ಸಂಸ್ಥೆಗಳು, ಸ್ವಯಂ ಸೇವಕರು, ಸ್ವಯಂ ಸೇವಾ ಸಂಘಗಳಿಗೆ ಬಿಬಿಎಂಪಿಯೇ ಸ್ವಚ್ಛತಾ ಕಾರ್ಯಕ್ಕಾಗಿ ಅಗತ್ಯ ಉಪಕರಣಗಳು, ಯಂತ್ರಗಳನ್ನು ಒದಗಿಸಲಿದೆ.

BBMP holds clean Bengaluru campaign for create awareness

ನಗರದ ಆರ್ಟಿರಿಯಲ್ , ಸಬ್ ಆರ್ಟಿರಿಯಲ್ ರಸ್ತೆಗಳು, ಮೇಲ್ಸೇತುವೆಗಳು, ಕೆಳಸೇತುವೆಗಳು, ಮಳೆನೀರು ಕಾಲುವೆಗಳು, ಹೊರವರ್ತುಲ ರಸ್ತೆಗಳು, ಕೆರೆ, ಉದ್ಯಾನ ಆಟದ ಮೈದಾನ ಸೇರಿ ಪ್ರಮುಖ ಭಾಗಗಳಲ್ಲಿ ಸುರಿಯಲಾಗಿರುವ ಘನತ್ಯಾಜ್ಯ,ಕಟ್ಟಡ ತ್ಯಾಜ್ಯ, ಪೋಸ್ಟರ್ ಗಳು, ಭಿತ್ತಿಪತ್ರಗಳನ್ನು ತೆರವುಗೊಳಿಸುವುದು ಅಭಿಯಾನದ ಉದ್ದೇಶವಾಗಿದೆ.

ಬಿಬಿಎಂಪಿ ಅಧಿಕಾರಿಗಳು ಒಂದು ವಾರ ಕಾಲ ನಾಗರಿಕರ ಸಹಯೋಗದೊಂದಿಗೆ ಬೆಂಗಳೂರನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಲಿದ್ದಾರೆ. ಅಭಿಯಾನದಲ್ಲಿ ಪಾಲ್ಗೊಳ್ಳುವ ನಾಗರಿಕರಿಗೆ, ಸಂಘ ಸಂಸ್ಥಗೆಳಿಗೆ ಸ್ವಚ್ಛತಾ ಕಾರ್ಯಕ್ಕೆ ಅಗತ್ಯ ಪರಿಕರಗಳು, ಟ್ರ್ಯಾಕ್ಟರ್, ಜೆಸಿಬಿ, ನೀರಿನ ಟ್ಯಾಂಕರ್, ತಳ್ಳುವ ಗಾಡಿ, ಯಂತ್ರೋಪಕರಣಗಳು ಹಾಗೂ ಸುರಕ್ಷತಾ ಪರಿಕರಗಳನ್ನು ಪಾಲಿಕೆ ಬಿಲ್ಡರ್ ಗಳ ಸಹಕಾರದೊಂದಿಗೆ ನೀಡಲಿದೆ.

ಕ್ಲೀನ್ ಬೆಂಗಳೂರು ಅಭಿಯಾನಕ್ಕೆ ಪಾಲ್ಗೊಳ್ಳುವವರು ಬಿಬಿಎಂಪಿ ರಸ್ತೆ ಮೂಲ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಎಸ್. ಸೋಮಶೇಖರ್ (9480684990) ಅಥವಾ ಪೂರ್ವ ವಲಯದ ಮುಖ್ಯ ಎಂಜಿನಿಯರ್ ಬಿ.ಎಸ್. ಪ್ರಸಾದ್ (9480684531) ಅವರನ್ನು ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+