BBMP Fire Incident: ಯಾರೋ ಮಾಡಿದ ತಪ್ಪು, ಏನೂ ಮಾಡದವರಿಗೆ ನೋವು

ಬೆಂಗಳೂರು, ಆಗಸ್ಟ್ 14: ಯಾರದ್ದೋ ನಿರ್ಲಕ್ಷ್ಯಕ್ಕೆ ಇನ್ಯಾರದ್ದೋ ಬದುಕು ಬಲಿಯಾಗುತ್ತಿದೆ. ಬಿಬಿಎಂಪಿ ಅಗ್ನಿ ಅವಘಡದಲ್ಲಿ ಸಾಕಷ್ಟು ಜನರ ಬದುಕು ಹಾಳಾಗುತ್ತಾ ಇರುವುದು ಗೊತ್ತಿರುವ ವಿಚಾರ. ಶುಕ್ರವಾರ ನಡೆದ ಘಟನೆ ಅನೇಕರ ನಿದ್ದೆ ಕೆಡಿಸುತ್ತಿದೆ. ಸದ್ಯ ಗಾಯಾಳುಗಳ ಆರೋಗ್ಯ ಸ್ಥಿತಿ ಬಗ್ಗೆ ಅಪ್ಡೇಟ್ಸ್ ಹೀಗಿದೆ:

ಕೆಟ್ಟ ಮೇಲೆ ಬುದ್ದಿ ಬಂತು ಅನ್ನುವ ಹಾಗೇ ಬಿಬಿಎಂಪಿ ಈಗ ಸುರಕ್ಷತೆಯ ಬಗ್ಗೆ ಮಾತನಾಡುತ್ತಿದೆ. ಬಿಬಿಎಂಪಿಯ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಮೊನ್ನೆ (ಆಗಸ್ಟ್ 11) ನಡೆದ ಅಗ್ನಿ ಅವಘಢದಿಂದ ಒಂಬತ್ತು ಜನ ಆಸ್ಪತ್ರೆ ಸೇರಿದ್ದರು. ಸದ್ಯ ಅವರ ಪೈಕಿ ಚೀಫ್ ಎಂಜಿನಿಯರ್ ಶಿವಕುಮಾರ್, ಇಇ ಕಿರಣ್, ಆಪರೇಟರ್ ಜ್ಯೋತಿ ಈ ಮೂವರ ಜನರ ಕಂಡಿಷನ್ ಸ್ವಲ್ಪ ಕ್ರಿಟಿಕಲ್ ಆಗಿದೆ.

BBMP Fire Incident, Health Updates Of Those Injured In Fire Incident

25 - 40% ಅವರ ದೇಹದ ಭಾಗ ಸುಟ್ಟು ಹೋಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿರುವ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಇನ್ನು ಬಹುತೇಕ ತನಿಖೆಯಲ್ಲಿ ಬಿಬಿಎಂಪಿ ಲ್ಯಾಪ್ ವಿಚಾರದಲ್ಲಿ ದೊಡ್ಡ ಪ್ರಮಾಣದಲ್ಲೆ ನಿರ್ಲಕ್ಷ್ಯ ವಹಿಸಿರುವುದು ಬೆಳಕಿಗೆ ಬಂದಿದೆ.

ಕ್ವಾಲಿಟಿ ಚೆಕ್ ಮಾಡೋವಾಗ ಬೆನ್ಸಿನ್ ಅನ್ನೋ ಕೆಮಿಕಲ್ ನಿಂದ ಬೆಂಕಿ ಹೊತ್ತಿದ್ದ ಪರಿಣಾಮ ದೊಡ್ಡ ಅವಘಡ ಸಂಭವಿಸಿತ್ತು. ಆದರೆ ಜವಾಬ್ದಾರಿ ಅರಿತು ಲ್ಯಾಬ್ ಗೆ ಟಿಕ್ನಿಷಿಯನ್ ಗಳನ್ನ ನೇಮಿಸಬೇಕಿದ್ದ ಬಿಬಿಎಂಪಿ ಡಿ ಗ್ರೂಪ್ ನೌಕರರ ಕೈಲಿ ಟೆಸ್ಟಿಂಗ್ ಮಾಡಿಸಿದ್ದು, ಅವಘಡಕ್ಕೆ ಕಾರಣ ಅನ್ನೋದು ಬೆಳಕಿಗೆ ಬಂದಿದೆ.

ಬಿಬಿಎಂಪಿ ಅಧಿಕಾರಿಗಳಿಗೆ ನೋಟಿಸ್

ಈ ಬಗ್ಗೆ ಸ್ಪಷ್ಠೀಕರಣ ಕೇಳಿ ಬಿಬಿಎಂಪಿ ಅಧಿಕಾರಿಗಳಿಗೆ ನೋಟಿಸ್ ನೀಡಲು‌ ಮುಂದಾಗಿದ್ದಾರೆ. ಮತ್ತೊಂದೆಡೆ ಅವಘಡದಲ್ಲಿ ಬಿಬಿಎಂಪಿ‌ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದನ್ನು ಒಪ್ಪಿಕೊಂಡಿರೋ ಬಿಬಿಎಂಪಿ‌ ಆಯುಕ್ತ ತುಷಾರ್ ಗಿರಿನಾಥ್ ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ರೀತಿ, ದುರಂತ ನಡೆದ ಮೇಲೆ ಲ್ಯಾಬ್‌ ಶಿಫ್ಟ್ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಆಡಿಟ್ ಮಾಡಿ ಕ್ರಮಕೈಗೊಳ್ಳಲಾಗುತ್ತೆ ಎಂದಿದ್ದಾರೆ.

ಅಗ್ನಿ ಅವಘಡದಿಂದ ಆಸ್ಪತ್ರೆ ಸೇರಿರುವ ಗಾಯಾಳಗಳ ಮೇಲೆ ನಿಗಾ

ಇತ್ತ ಅಗ್ನಿ ಅವಘಡದಿಂದ ಆಸ್ಪತ್ರೆ ಸೇರಿರುವ ಗಾಯಾಳಗಳ ಮೇಲೆ ನಿಗಾ ಇಡಲಾಗಿದ್ದು, ಇನ್ನೂ ನಾಲ್ಕೈದು ದಿನಗಳ ಕಾಲ ಚಿಕಿತ್ಸೆ ಮುಂದುವರಿಯುವ ಸಾಧ್ಯತೆಗಳಿವೆ. ಲ್ಯಾಬ್‌ನಲ್ಲಿ ಅಗ್ನಿ ದುರಂತದಿಂದ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೊಂದೆಡೆ ಗಾಯಾಳುಗಳ ಸಂಬಂಧಿಕರು ಆದಷ್ಟು ಬೇಗ ಗುಣ ಆದರೆ ಸಾಕು ಅಂತಾ ಪ್ರಾರ್ಥಿಸುತ್ತಿದ್ದಾರೆ.

ಒಟ್ಟಾರೆ ಆ ಒಂದು ಅಗ್ನಿ ಅವಘಡ ಬಿಬಿಎಂಪಿಗೆ ಎಚ್ಚರಿಕೆಯ ಕರೆಗಂಟೆ ನೀಡಿದರೆ, ಮತ್ತೊಂದೆಡೆ ಯಾರೋ ಮಾಡಿದ ತಪ್ಪಿಗೆ ಏನೂ ಮಾಡದ 9 ಜನರು ಶಿಕ್ಷೆ ಅನುಭವಿಸುವಂತಾಗಿದೆ. ಸದ್ಯ ತನಿಖೆ ಕೂಡ ವೇಗಪಡೆದುಕೊಂಡಿದ್ದು, ಅಗ್ನಿ ಅವಘಡದ ಹೊಣೆ ಯಾರ ತಲೆದಂಡ ಮಾಡುತ್ತದೆತ್ತೆ ಅನ್ನುವುದನ್ನು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+