Hyder Ali: ರೌಡಿಶೀಟರ್ ಹೈದರ್‌ ಅಲಿ ಕೊಲೆ ಹಿಂದಿನ ಕಾರಣ ಬಿಬಿಎಂಪಿ ಎಲೆಕ್ಷನ್?

ಬೆಂಗಳೂರು ಫೆಬ್ರವರಿ 25: ಕಳೆದೆರೆಡು ದಿನಗಳ ಹಿಂದೆ ಕಾಂಗ್ರೆಸ್ ಮುಖಂಡ ಹೈದರ್‌ ಅಲಿಯನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಆದರೀಗ ಕೊಲೆ ಹಿಂದಿನ ಸತ್ಯ ಬಯಲಾಗಿದೆ. ಬಿಬಿಎಂಪಿ ಚುನಾವಣೆ ಕಾರಣಕ್ಕೆ ಹೈದರ್ ಅಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಬಿಬಿಎಂಪಿ ಚುನಾವಣೆಗೂ ಹೈದರ್ ಅಲಿ ಕೊಲೆಗೂ ಏನು ಸಂಬಂಧ? ಇದರ ವಿವರಣೆ ಇಲ್ಲಿದೆ.

ರೌಡಿಶೀಟರ್ ಹೈದರ್ ಅಲಿ ಹತ್ಯೆಯ ಹಿಂದೆ ಕಾಣದ ಕೈಗಳು ಕೈಚಳಕ ತೋರಿಸಿವೆ. ಬಿಬಿಎಂಪಿ ಚುನಾವಣೆಗಾಗಿ ಹೈದರ್ ಅಲಿಯ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೌದು.. ಮೊನ್ನೆ ರಾತ್ರಿ ಶಾಂತಿ ನಗರ ಕಾಂಗ್ರೆಸ್ ಲೀಡರ್ ಜೊತೆಗೆ ರೌಡಿ ಶೀಟರ್ ಆಗಿದ್ದ ಹೈದರ್ ಅಲಿಯ ಬರ್ಬರ ಕೊಲೆ ಆಗಿತ್ತು. ಇದೀಗ ಕೊಲೆ ಹಿಂದೆ ಕೈ ನಾಯಕರ ಕೈವಾಡ ಇರುವ ಶಂಕೆ ವ್ಯಕ್ತವಾಗುತ್ತಿದೆ.

BBMP Elections Rowdy Sheeter and Congress Leader Hyder Ali s Murder Reason

ಶನಿವಾರ (22.ಫೆ) ಮಧ್ಯರಾತ್ರಿ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಬಾಲ್ ಗ್ರೌಂಡ್ ಬಳಿ ಕಾಂಗ್ರೆಸ್ ಮುಖಂಡ ಹೈದರ್ ಅಲಿ ಕೊಲೆ ನಡೆದಿತ್ತು. ಶಾಂತಿನಗರ ಶಾಸಕ ಹ್ಯಾರಿಸ್ ಆಪ್ತನಾಗಿದ್ದ ಹೈದರ್ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡನಾಗಿದ್ದರು. ಬಿಬಿಎಂಪಿ ಚುನಾವಣೆ ನಡೆಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಬೆನ್ನಲ್ಲೆ ಕೈ ಕಲಿಗಳು ಕಸರತ್ತು ಆರಂಭಿಸಿದ್ದರು.

ಈ ಬಾರಿ ಬಿಬಿಎಂಪಿ ಚುನಾವಣೆಗೆ ಹೈದರ್ ಸಹೋದರ ಸಲೀಮ್‌ಗೆ ಟಿಕೆಟ್ ಖಚಿತ ಎಂದು ಏರಿಯಾದಲ್ಲಿ ಚರ್ಚೆ ಆಗುತ್ತಿತ್ತಂತೆ. ಈ ವಿಚಾರ ಕೆಲ ಕಾಂಗ್ರೆಸ್‌ ಮುಖಂಡರಿಗೆ ನುಂಗಲಾಗದ ತುತ್ತಾಗಿದೆ. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಶಾಸಕ ಹ್ಯಾರಿಸ್ ಹಾಗೂ ಪುತ್ರ ನಲಪಾಡ್ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಿಂದಲೇ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ.

ಕೊನೆ ನಡೆದಿದ್ದು ಎಲ್ಲಿ?

ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಬಾರ್‌ನಲ್ಲಿ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದ ಹೈದರ್‌ ಅಲಿ, ಸ್ನೇಹಿತನ ಜತೆ ಕಾರಿನಲ್ಲಿಆನೆಪಾಳ್ಯದ ತನ್ನ ಮನೆಗೆ ಹೋಗುತ್ತಿದ್ದಾಗ ನಾಲ್ಕೈದು ದುಷ್ಕರ್ಮಿಗಳು ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿ ಬಂದು ಫುಟ್ಬಾಲ್‌ ಸ್ಟೇಡಿಯಂ ಬಳಿ ಅಡ್ಡಗಟ್ಟಿದ್ದಾರೆ. ಆಗ ಕಾರಿನಿಂದ ಕೆಳಗಿಳಿದು ತಪ್ಪಿಸಿಕೊಳ್ಳಲು ಮುಂದಾದ ಹೈದರ್‌ ಅಲಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿದ್ದಾರೆ. ಈ ವೇಳೆ ಹೈದರ್‌ ಅಲಿಯನ್ನು ರಕ್ಷಿಸಲು ಮುಂದಾದ ಆತನ ಸ್ನೇಹಿತನ ಮೇಲೂ ದುಷ್ಕರ್ಮಿಗಳು ಹಲ್ಲೆನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಕರಣ ದಾಖಲಿಸಿಕೊಂಡ ಅಶೋಕನಗರ ಪೊಲೀಸರು ನಲಪಾಡ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾಝ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಈ ನಾಝ್‌ಗೆ ಶಾಂತಿ ನಗರದ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಸಾಥ್ ನೀಡಿದ್ದಾನೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಬಿಬಿಎಂಪಿ ಚುನಾವಣೆ ಆರಂಭಕ್ಕೂ ಮೊದಲೇ ಹೆಣ ಬಿದ್ದಿದೆ. ಟಿಕೆಟ್‌ಗಾಗಿ ಇನ್ನೆಷ್ಟು ಹೊಡೆದಾಟ ಬಡಿದಾಟ ಆಗುತ್ತೋ ಏನೋ ಅನ್ನೋ ಪ್ರಶ್ನೆಗಳು ಉದ್ಬವಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+