ನಮ್ಮ ಗ್ರಾಮ ಪಂಚಾಯಿತಿಯಲ್ಲೇ ಹೆಚ್ಚು ವೋಟ್ ಆಗಿತ್ತು!

ಬೆಂಗಳೂರು, ಆ.22 : ಬೆಂಗಳೂರಿನ ಜನರು ಮತದಾನ ಮಾಡದಿರಲು ಕಾರಣವೇನು? ಎಂಬ ಬಗ್ಗೆ ಸಂಶೋಧನೆ ನಡೆಯಬೇಕು. ಕಳೆದ ಹಲವು ಚುನಾವಣೆಗಳಂತೆ ವೋಟ್ ಹಾಕುವ ವಿಚಾರದಲ್ಲಿ ಬೆಂಗಳೂರಿಗರು ಮತ್ತೊಮ್ಮೆ ನಿರ್ಲಕ್ಷ್ಯ ತೋರಿಸಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ಶೇ 50ರಷ್ಟು ಮತದಾನವಾಗದಿರುವುದು ಇದಕ್ಕೆ ತಾಜಾ ಉದಾಹರಣೆ.

ಶನಿವಾರ ಬೆಳಗ್ಗೆ ಜಿಟಿ-ಜಿಟಿ ಮಳೆಯ ನಡುವೆ ನಿಧಾನವಾಗಿ ಆರಂಭವಾದ ಮತದಾನ ಬಿರುಸುಪಡೆಯಲೇ ಇಲ್ಲ. ಸಿಕ್ಕ ಎರಡು ದಿನಗಳ ರಜೆಯನ್ನು ಉಪಯೋಗಿಸಿಕೊಂಡ ಬೆಂಗಳೂರಿನ ಜನರು ಕಾರು ಹತ್ತಿ ಪ್ರವಾಸ ಹೊರಟರು. ಇಲ್ಲೇ ಉಳಿದವರು ಟಿವಿ ಮುಂದೆ ಕೂತರು. ಮತದಾನ ಕೇಂದ್ರ ಬೆಳಗ್ಗೆಯಿಂದ ಸಂಜೆ ತನಕ ಖಾಲಿ-ಖಾಲಿ ಇತ್ತು. [ಮತದಾನ ಕಡಿಮೆ ಆಗಲು 7 ಕಾರಣಗಳು]

voting

ಬೆಂಗಳೂರಿನ ಚುನಾವಣೆಗೆ 20 ಸಾವಿರ ಪೊಲೀಸರನ್ನು ಕರೆಸಿ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಪೊಲೀಸರಿಗೆ ಲಾಠಿ ಬೀಸಲು ಅವಕಾಶ ಸಿಗಲಿಲ್ಲ. ಏಕೆಂದರೆ, ಮತ ಕೇಂದ್ರದ ಬಳಿ ಜನರೇ ಇರಲಿಲ್ಲ. ಇದನ್ನು ಶಾಂತಿಯುತ ಚುನಾವಣೆ ಎಂದು ಕರೆದು ನಾವು ಸಮಾಧಾನಪಡಬಹುದೇನೋ?. [ಮತದಾನದ ಚಿತ್ರಗಳನ್ನು ನೋಡಿ]

ಸಂಜೆ 5 ಗಂಟೆಗೆ ಲಭ್ಯವಾದ ಮಾಹಿತಿ ಪ್ರಕಾರ 2015ರ ಬಿಬಿಎಂಪಿ ಚುನಾವಣೆಯಲ್ಲಿ ಶೇ 38ರಷ್ಟು ಮತದಾನವಾಗಿದೆ. 2010ರಲ್ಲಿ ಶೇ 44 ರಷ್ಟು ಮತದಾನವಾಗಿತ್ತು. ಈ ದಾಖಲೆಯನ್ನು ಮುರಿಯಲು ಬೆಂಗಳೂರಿಗರು ವಿಫಲವಾಗಿದ್ದಾರೆ. [ಬಿಬಿಎಂಪಿ ಮತದಾನ : ಕ್ಷಣ-ಕ್ಷಣದ ಮಾಹಿತಿ]

ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಮತದಾನ ಕೇಂದ್ರದತ್ತ ಬರಲು ಹಿಂದೇಟು ಹಾಕಿದ್ದ ಉದ್ಯಾನನಗರಿಯ ಜನರು, ತಮ್ಮ ಮನೆ ಮುಂದಿನ ಚುನಾವಣೆಯಲ್ಲೂ ಅದೇ ತಂತ್ರ ಅನುಸರಿಸಿದರು. ಭಾರೀ ಕಾರ್ಯತಂತ್ರ ರೂಪಿಸಿ ವಿವಿಧ ರೀತಿಯಲ್ಲಿ ಪ್ರಚಾರ ನಡೆಸಿದ್ದ ರಾಜಕೀಯ ಪಕ್ಷಗಳಿಗೆ ಕೈ ಕೊಟ್ಟರು.

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ ? : ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತದಾನ ಶೇ 50ರ ಗಡಿದಾಟಿಲ್ಲ. ಬೊಮ್ಮನಹಳ್ಳಿಯಲ್ಲಿ 34.36, ಮಹದೇವಪುರದಲ್ಲಿ 36.75, ಜಯನಗರದಲ್ಲಿ 35.75, ಬಿಟಿಎಂ ಲೇಔಟ್‌ನಲ್ಲಿ 37.95, ಪದ್ಮನಾಭನಗರದಲ್ಲಿ 38.65, ಬಸವನಗುಡಿಯಲ್ಲಿ 34.13, ಚಿಕ್ಕಪೇಟೆಯಲ್ಲಿ 30.57, ಚಾಮರಾಜಪೇಟೆಯಲ್ಲಿ 31.84, ವಿಜಯನಗರದಲ್ಲಿ 40.27, ಗೋವಿಂದರಾಜನಗರದಲ್ಲಿ 39.29 ರಷ್ಟು ಮತದಾನವಾಗಿದೆ.

ರಾಜಾಜಿನಗರದಲ್ಲಿ 31.98, ಗಾಂಧಿನಗರದಲ್ಲಿ 31.47, ಶಾಂತಿನಗರದಲ್ಲಿ 32.21, ಶಿವಾಜಿನಗರದಲ್ಲಿ 23.36, ಸಿ.ವಿ.ರಾಮನ್ ನಗರದಲ್ಲಿ 30.83, ಸರ್ವಜ್ಞ ನಗರದಲ್ಲಿ 22.67, ಪುಲಿಕೇಶಿ ನಗರದಲ್ಲಿ 26.62, ಹೆಬ್ಬಾಳದಲ್ಲಿ 35.55, ಮಲ್ಲೇಶರಂನಲ್ಲಿ 29.48, ಮಹಾಲಕ್ಷ್ಮೀ ಲೇಔಟ್‌ ಕೇತ್ರದಲ್ಲಿ 36.29ರಷ್ಟು ಮತದಾನವಾಗಿದೆ.

198 ವಾರ್ಡ್‌ಗಳ ಅವಿಭಜಿತ ಬಿಬಿಎಂಪಿಯ 197 ವಾರ್ಡ್‌ಗಳಿಗೆ ಚುನಾವಣೆ ನಡೆಯಿತು. ಹೊಂಗಸಂದ್ರದಲ್ಲಿ ಅವಿರೋಧವಾಗಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಎಂಬ ರಹಸ್ಯ ಇಬಿಎಂನಲ್ಲಿ ಸಂಗ್ರಹವಾಗಿದೆ. ಆ.25ರ ಮಂಗಳವಾರ ಮತ ಎಣಿಕೆ ನಡೆಯಲಿದ್ದು, ಪಾಲಿಕೆ ಅಧಿಕಾರ ಯಾರ ಕೈಗೆ ಎಂಬುದು ಸ್ಪಷ್ಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+