ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ : ಟ್ವೀಟ್ ಅಭಿಮತ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 25 ; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಮತ ಎಣಿಕೆ ಆರಂಭವಾಗಿದೆ. ಮಂಗಳವಾರ ಸುಮಾರು 1,12೦ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ವರೆಗಿನ ಟ್ರೆಂಡ್ ನೋಡಿದರೆ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದು, ಇದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ವಿರುದ್ಧ ಟ್ವೀಟ್ಸ್ ದಾಳಿ ಶುರುವಾಗಿದೆ.

197 ವಾರ್ಡ್‌ಗಳಿಗೆ ನಡೆದ ಬಿಬಿಎಂಪಿ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದೆ. 27 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ.[ಬಿಬಿಎಂಪಿ ಚುನಾವಣಾ ಫಲಿತಾಂಶ 2015 Live]

ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ, 198 ವಾರ್ಡ್‌ನ ಪಾಲಿಕೆಯಲ್ಲಿ 197 ವಾರ್ಡ್‌ಗಳಿಗೆ ಆ.22ರ ಶನಿವಾರ ಚುನಾವಣೆ ನಡೆದಿತ್ತು. ಶೇ 49ರಷ್ಟು ಮತದಾನವಾಗಿತ್ತು

ಫಲಿತಾಂಶ: ಬೆಂಗಳೂರು ದಕ್ಷಿಣ ಜಿಲ್ಲೆ | ಬೆಂಗಳೂರು ನಗರ ಜಿಲ್ಲೆ

ಸಮೀಕ್ಷೆಗಳ ಫಲಿತಾಂಶವೆಲ್ಲ ಉಲ್ಟಾ ಹೊಡೆಯುತ್ತಿರುವುದಕ್ಕೆ ಕಾಂಗ್ರೆಸ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರೆ, ಬಿಜೆಪಿ ಕಚೇರಿಗಳಲ್ಲಿ ಈಗಾಗಲೇ ಸಂಭ್ರಮಾಚರಣೆಗೆ ಸಿದ್ಧತೆ ನಡೆಯುತ್ತಿದೆ. ಸಕತ್ ಟೆನ್ಶನ್ ಕೊಡ್ತಾ ಇದೆ ಎಂದು #BBMPResults ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಶುರುವಾಗಿದೆ. [ಸುದ್ದಿವಾಹಿನಿಗಳ ಸಮೀಕ್ಷೆಗಳ ಸಂಗ್ರಹ]

ಈಗಲೇ ಪಟಾಕಿ ಹೊಡೆಬೇಡರಪ್ಪ ತಡೀರಿ

ಈಗಲೇ ಪಟಾಕಿ ಹೊಡೆಬೇಡರಪ್ಪ ತಡೀರಿ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಆಮೇಲೆ ಪಟಾಕಿ ಹೊಡೆಯಿರಿ ಎಂಬ ಟ್ವೀಟ್ ಗಳು ಬಂದಿವೆ. ಸಿದ್ದರಾಮಯ್ಯ ಅವರ ಮೇಲೆ ಸೋಲಿನ ಹೊಣೆ ಹೊರೆಸಲು ಟ್ವೀಟ್ ಲೋಕ ಸಿದ್ಧವಾಗಿದೆ.

ನನಗಂತೂ ಅಚ್ಚರಿಯಾಗುತ್ತಿದೆ

ಕಾಂಗ್ರೆಸ್ ಗೆ ಹಿನ್ನಡೆ ಉಂಟಾಗಿರುವುದು ನನಗಂತೂ ಅಚ್ಚರಿಯಾಗುತ್ತಿದೆ

ಬಿಜೆಪಿ ಗೆಲುವು ಸಾಧಿಸುತ್ತದೆಯೇ?

ಬಿಜೆಪಿ ಗೆಲುವು ಸಾಧಿಸುತ್ತದೆಯೇ?, ಬೆಂಗಳೂರು ಮತ್ತೆ ಅಭಿವೃದ್ಧಿ ಪಥಕ್ಕೆ ಮರಳುತ್ತದೆಯೆ?

ಕಾಂಗ್ರೆಸ್ ಗೆಲ್ಲುವುದು ಕಷ್ಟವಾಗುತ್ತದೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ, ಕಾಂಗ್ರೆಸ್ ಗೆಲ್ಲುವುದು ಕಷ್ಟವಾಗುತ್ತದೆ.

ಆರಂಭವಾದ ಟ್ರೆಂಡಿಂಗ್ ಹೀಗಿದೆ

ಆರಂಭವಾದ ಟ್ರೆಂಡಿಂಗ್ ಹೀಗಿದೆ, ಸಕತ್ ಬಿರುಸಿನ ಪೈಪೋಟಿ ಇದೆ.

ಬಿಜೆಪಿ ಟ್ರೆಂಡಿಂಗ್ ಅಂಕಿ ಸಂಖ್ಯೆ ಲೆಕ್ಕಾಚಾರ

ಬಿಜೆಪಿ ಟ್ರೆಂಡಿಂಗ್ ಅಂಕಿ ಸಂಖ್ಯೆ ಲೆಕ್ಕಾಚಾರ ಶುರುವಾಗಿದೆ

ಬಿಜೆಪಿ ಗೆದ್ದರೆ ನಮೋ ಕಾರಣ

ಬಿಜೆಪಿ ಗೆದ್ದರೆ ನಮೋ ಕಾರಣ ಇಲ್ಲದಿದ್ದರೆ ಅನಂತ್ ಕುಮಾರ್, ಅಶೋಕ್ ಗೆ ಬೈಯಿರಿ.

English summary
Counting of votes to elect representatives of the Bengaluru civic corporation, Bruhat Bengaluru Mahanagara Palike (BBMP) began on Tuesday, Aug 25. Twitter has been flooded with comments, updates on BBMP vote counting as #BBMPresults hash tag has been trending since Tuesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X