• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಲಿಕೆ ಸಮೀಕ್ಷೆ: ಟಿವಿ ಮಾಧ್ಯಮಗಳ ಭವಿಷ್ಯ ಸುಳ್ಳಾಗಿದ್ದೇಕೆ?

By Mahesh
|

ಬೆಂಗಳೂರು, ಆಗಸ್ಟ್ 26: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗದ್ದುಗೆ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಪಾಲಿಕೆ ಚುನಾವಣೆ ಫಲಿತಾಂಶಕ್ಕೂ ಬಂದ ಚುನವಣೋತ್ತರ ಸಮೀಕ್ಷೆಗಳು ಬಹುತೇಕ ಸತ್ಯಕ್ಕೆ ದೂರವಾಗಿತ್ತು. ಒಂದೆರಡು ಸುದ್ದಿ ವಾಹಿನಿಗಳು ಮಾತ್ರ ನಾವು ನೀಡಿದ ಸಮೀಕ್ಷೆ ಸತ್ಯ, ನಿಖರ ಎಂದು ಘೋಷಿಸಿಕೊಂಡಿವೆ.

ಬಿಜೆಪಿಗೆ ಮತದಾರ ಪ್ರಭು ಮತ್ತೊಮ್ಮೆ ಮನ್ನಣೆ ನೀಡಿದ್ದು ಏಕೆ ಎಂಬ ಪ್ರಶ್ನೆಗೆ ಮಾಧ್ಯಮಗಳಿಗೂ ಥಟ್ ಅಂಥಾ ಒಂದೇ ಉತ್ತರ ಹೇಳಲು ಸಿಗುತ್ತಿಲ್ಲ. ಬಿಜೆಪಿ ಗೆಲುವಿ ಮತದಾರರಲ್ಲಿ ಹೆಚ್ಚಿನ ಗೊಂದಲ ಮೂಡಿದ್ದೆ ಕಾರಣ ಎನ್ನಬಹುದು. ಕಾಂಗ್ರೆಸ್ ಹೆಚ್ಚಿನ ಗೊಂದಲ ಮೂಡಿಸಿದ್ದರಿಂದ ಸೋಲಬೇಕಾಯಿತು. [ಸುದ್ದಿವಾಹಿನಿಗಳ ಸಮೀಕ್ಷೆಗಳ ಸಂಗ್ರಹ]

BBMP Election 2015

ಬಿಬಿಎಂಪಿಯ ಒಟ್ಟು 198 ವಾರ್ಡ್‌ಗಳ ಪೈಕಿ 197 ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು. ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ 197, ಕಾಂಗ್ರೆಸ್‌ನ 197, ಜೆಡಿಎಸ್‌ನ 187, 399 ಪಕ್ಷೇತರರು ಸೇರಿ ಒಟ್ಟು 1,121 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲರ ಭವಿಷ್ಯ ಆಗಸ್ಟ್ 25ರಂದು ಬಹಿರಂಗಗೊಂಡಿತ್ತು. ಬಿಜೆಪಿ 100,ಕಾಂಗ್ರೆಸ್ 76, ಜೆಡಿಎಸ್ 14 ಹಾಗೂ ಇತರೆ 8 ಫಲಿತಾಂಶ ಬಂದಿದೆ. [ಕೋಡಿಶ್ರೀಗಳೇ ಭವಿಷ್ಯ ಉಲ್ಟಾ ಹೊಡೀತಲ್ವೇ?]

ಸುವರ್ಣ ಸುದ್ದಿ ವಾಹಿನಿ ಹಾಗೂ ಜನಶ್ರೀ ಸುದ್ದಿ ವಾಹಿನಿಗಳು ಮಾತ್ರ ಬಿಜೆಪಿ ಶತಕದ ಕನಸು ಕಾಣಬಹುದು ಎಂದು ಹೇಳಿ ನೇರ ದಿಟ್ಟ ನಿರಂತರ ಸುದ್ದಿ ನೀಡಿದೆವು ಎಂದು ಘೋಷಿಸಿಕೊಂಡಿವೆ. ಉಳಿದ ವಾಹಿನಿಗಳ ಸಮೀಕ್ಷೆ ವರದಿ ಹೀಗಿತ್ತು:

ವಿಜಯವಾಣಿ- ಈಟಿವಿ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ಗೆ 101 ಸ್ಥಾನಗಳ ನಿರೀಕ್ಷೆಯಿದ್ದು, ಬಿಜೆಪಿ ಬಲ 75 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಯಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್ ಬಲ 20 ಸ್ಥಾನಗಳಿಗೆ ವೃದ್ಧಿಸಲಿದೆ ಎಂದು ಹೇಳಲಾಗಿತ್ತು. [ಬಿಜೆಪಿ ಗೆಲುವಿನ ರಹಸ್ಯ ಬಿಚ್ಚಿಟ್ಟ ವಕ್ತಾರ ಪ್ರಕಾಶ್]

BBMP election

ಟಿವಿ9-ಸಿ ವೋಟರ್ ಸಮೀಕ್ಷೆಯಂತೆ
ಕಾಂಗ್ರೆಸ್‌- 90 ರಿಂದ 98 ಸ್ಥಾನ
ಬಿಜೆಪಿ - 83 ರಿಂದ 91
ಜೆಡಿಎಸ್‌- 9 ರಿಂದ 17
ಇತರೆ- 0-8

ಪಬ್ಲಿಕ್‌ ಟಿವಿ
ಕಾಂಗ್ರೆಸ್‌- 85 ರಿಂದ 95
ಬಿಜೆಪಿ- 80 ರಿಂದ 90
ಜೆಡಿಎಸ್‌- 15 ರಿಂದ 17
ಚುನಾವಣಾ ಪೂರ್ವ ಸಮೀಕ್ಷೆ
* ಬಿಜೆಪಿ - 80 ರಿಂದ 90
* ಕಾಂಗ್ರೆಸ್ 85 ರಿಂದ 95
* ಜೆಡಿಎಸ್ 12 ರಿಂದ 17
* ಇತರರು 01 ರಿಂದ 05

ಬಿ ಟಿವಿ ಸಮೀಕ್ಷೆ
ಕಾಂಗ್ರೆಸ್‌- 82 ರಿಂದ 90
ಬಿಜೆಪಿ-75 ರಿಂದ 84
ಜೆಡಿಎಸ್‌- 10 ರಿಂದ 16
ಇತರೆ- 5 ರಿಂದ 6

ಪ್ರಜಾ ಟಿವಿ
ಕಾಂಗ್ರೆಸ್‌- 95 ರಿಂದ 107
ಬಿಜೆಪಿ- 76 ರಿಂದ 84
ಜೆಡಿಎಸ್‌- 14 ರಿಂದ 18
ಇತರೆ- 5

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BBMP Election 2015 : Post Voting Exit Poll Survey by various Kannada news Channels by TV9 Kannada, Public TV, BTV, Praja TV and private institution like C-voters failed to project the actual number.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more