ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯವಾಣಿ- ಈಟಿವಿ ಸಮೀಕ್ಷೆ: ಕಾಂಗ್ರೆಸ್ ಸೆಂಚುರಿ, ಬಿಜೆಪಿಗೆ ವರಿ!

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 23: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಮತದಾನ ಕಡಿಮೆಯಾಗಿರುವುದರಿಂದ ಯಾವ ಪಕ್ಷಕ್ಕೆ ಲಾಭ? ಯಾವ ಪಕ್ಷಕ್ಕೆ ನಷ್ಟ? ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತದೆ ಎಂಬ ಲೆಕ್ಕಾಚಾರ ಆರಂಭಗೊಂಡಿದೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷ ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲೂ ಮೇಲುಗೈ ಸಾಧಿಸಲಿದೆ ಎಂದು ವಿಜಯವಾಣಿ ಹಾಗೂ ಈಟಿವಿ ಕನ್ನಡ ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.[ವಿಜಯವಾಣಿ-ಈಟಿವಿ ಚುನಾವಣಾ ಪೂರ್ವ ಸಮೀಕ್ಷೆ]

ಮತದಾರರ ನಿರುತ್ಸಾಹದ ನಡುವೆ ವಿವಿಧ ಮಾಧ್ಯಮಗಳ ಸಮೀಕ್ಷೆ ವರದಿಗಳು ಬರುತ್ತಿವೆ, ಮತದಾನ ಪ್ರಮಾಣ ಕಡಿಮೆಯಾಗಿದ್ದಕ್ಕೆ ವಿವಿಧ ಪಕ್ಷಗಳು ಚುನಾವಣಾ ಆಯೋಗಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಲೆಕೆಡಿಸಿಕೊಂಡಿದೆ. ಮತಯಂತ್ರದಲ್ಲಿ ಭದ್ರವಾಗಿರುವ ಜನಾದೇಶ ತಿಳಿಯಲು ಆಗಸ್ಟ್ .25ರ ತನಕ ಕಾಯಬೇಕು. [ಸುದ್ದಿವಾಹಿನಿಗಳ ಸಮೀಕ್ಷೆಗಳ ಸಂಗ್ರಹ]

ಬಿಬಿಎಂಪಿಯ ಒಟ್ಟು 198 ವಾರ್ಡ್‌ಗಳ ಪೈಕಿ 197 ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.. ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ 197, ಕಾಂಗ್ರೆಸ್‌ನ 197, ಜೆಡಿಎಸ್‌ನ 187, 399 ಪಕ್ಷೇತರರು ಸೇರಿ ಒಟ್ಟು 1,121 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಾಂಗ್ರೆಸ್ ಸೆಂಚುರಿ, ಬಿಜೆಪಿಗೆ ವರಿ!

ಕಾಂಗ್ರೆಸ್ ಸೆಂಚುರಿ, ಬಿಜೆಪಿಗೆ ವರಿ!

ವಿಜಯವಾಣಿ- ಈಟಿವಿ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ಗೆ 101 ಸ್ಥಾನಗಳ ನಿರೀಕ್ಷೆಯಿದ್ದು, ಬಿಜೆಪಿ ಬಲ 75 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಯಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿದ್ದ ಜೆಡಿಎಸ್ ಬಲ 20 ಸ್ಥಾನಗಳಿಗೆ ವೃದ್ಧಿಸಲಿದೆ. 3 ಪಕ್ಷಗಳ ತ್ರಿಕೋನ ಸ್ಪರ್ಧೆಯಲ್ಲಿ ಇತರೆ ಅಭ್ಯರ್ಥಿಗಳ ಗೆಲುವು 2ಕ್ಕೆ ಸೀಮಿತವಾಗಲಿದೆ.

ಕಾಂಗ್ರೆಸ್ ಫಲಿತಾಂಶ ನಿರೀಕ್ಷಿತವಾಗಿದೆ

ಕಾಂಗ್ರೆಸ್ ಫಲಿತಾಂಶ ನಿರೀಕ್ಷಿತವಾಗಿದೆ

ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲದಿರುವುದು, ಹಲವು ಭಾಗ್ಯ ಯೋಜನೆಗಳ ನೇರ ಫಲಾನುಭವಿಗಳು ಹಾಗೂ ಅಹಿಂದ ವರ್ಗ ಕೈ ಹಿಡಿದಿದ್ದು, ಅಲ್ಪಸಂಖ್ಯಾತ ಮತಗಳು, ಸಿದ್ದರಾಮಯ್ಯ ಅವರ ಆಡಳಿತದ ಮೇಲೆ ಇನ್ನೂ ಜನತೆ ಭರವಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಆಡಳಿತ ಪಕ್ಷದ ಪರ ಹೆಚ್ಚಿನ ಪ್ರಮಾಣದಲ್ಲಿ ಮತಗಳು ಬಂದಿವೆ.

ಕಮಲದಲ್ಲಿ ಮೂಡಿದ ಒಡಕು ಮತ ವಿಭಜನೆ

ಕಮಲದಲ್ಲಿ ಮೂಡಿದ ಒಡಕು ಮತ ವಿಭಜನೆ

ನಗರ ಪ್ರದೇಶದ ಮತದಾರರನ್ನು ಸೆಳೆಯಲು ಆರ್ ಅಶೋಕ್ ಅವರು ಮಾಡಿದ ತಂತ್ರಗಳು ಕೊನೆ ಕ್ಷಣದಲ್ಲಿ ಮುಳುವಾಯಿತು. ನಾಯಕತ್ವದಲ್ಲಿ ಭಿನ್ನಮತ, ವ್ಯಾಪಕ ಭ್ರಷ್ಟಾಚಾರದ ಆರೋಪ, ಮತ ಸೆಳೆಯುವ ಸ್ಥಳೀಯ ನಾಯಕತ್ವದ ಕೊರತೆ, ನಾಯಕರ ಮಧ್ಯೆ ಸಮನ್ವಯದ ಕೊರತೆ , ಲಿಂಗಾಯಿತ ಮತ್ತು ಒಕ್ಕಲಿಗ ನಾಯಕತ್ವದ ತಿಕ್ಕಾಟ, ಯಡಿಯೂರಪ್ಪ ಅವರ ಗೈರು, ತಂತ್ರಜ್ಞಾನಕ್ಕೆ ಮೊರೆ ಘಾಕಿದ್ದು ಎಲ್ಲವೂ ಕೈಕೊಟ್ಟಿತು.

ಗೊತ್ತು ಗುರಿ ಇಲ್ಲದ ಜೆಡಿಎಸ್ ಕಿಂಗ್ ಮೇಕರ್

ಗೊತ್ತು ಗುರಿ ಇಲ್ಲದ ಜೆಡಿಎಸ್ ಕಿಂಗ್ ಮೇಕರ್

ಗೊತ್ತು ಗುರಿ ಇಲ್ಲದ ಪ್ರಚಾರದ ಭರಾಟೆಯಲ್ಲಿ ಕಳೆದು ಹೊದ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದೆ. ಅದರೆ, 20ಕ್ಕಿಂತ ಕಡಿಮೆ ಸ್ಥಾನ ಪಡೆಯುವ ಆತಂಕ ಇರುವುದರಿಂದ ಜೆಡಿಎಸ್ ತನ್ನ ಅಸ್ತಿತ್ವದ ಬಗ್ಗೆ ಪ್ರಶ್ನಿಸಿಕೊಳ್ಳಬೇಕಿದೆ. ಕಾಂಗ್ರೆಸ್ ನಿಂದ ಅಹಿಂದ, ಅಲ್ಪಸಂಖ್ಯಾತರ ಮತಗಳನ್ನು ಕಿತ್ತುಕೊಂಡರೂ ಬಿಜೆಪಿ ಭಿನ್ನಮತದ ಲಾಭ ಪಡೆಯಲು ಜೆಡಿಎಸ್ ಗೆ ಸಾಧ್ಯವಾಗಿಲ್ಲ. ಇಲ್ಲದಿದ್ದರೆ ಒಕ್ಕಲಿಗರ ಓಟೆಲ್ಲ ಜೆಡಿಎಸ್ ಪಾಲಾಗುತ್ತಿತ್ತು.

ಅಧಿಕಾರ ಹಿಡಿಯಲು 130 ಸದಸ್ಯ ಬಲ ಬೇಕು

ಅಧಿಕಾರ ಹಿಡಿಯಲು 130 ಸದಸ್ಯ ಬಲ ಬೇಕು

198 ವಾರ್ಡ್​ಗಳ ಜತೆಗೆ, 61 ಶಾಸಕರು, ಮೇಲ್ಮನೆ ಸದಸ್ಯರು, ಸಂಸದರು ಸೇರಿ ಒಟ್ಟು 259 ಸದಸ್ಯ ಬಲದ ಪಾಲಿಕೆಯಲ್ಲಿ ಯಾರೇ ಅಧಿಕಾರ ಹಿಡಿಯಲು 130 ಸದಸ್ಯ ಬಲ ಬೇಕೇಬೇಕು. ಅದಕ್ಕಾಗಿ ಕಾಂಗ್ರೆಸ್ 104 ಸ್ಥಾನ ಗೆಲ್ಲುವುದು ಅನಿವಾರ್ಯವಾಗಿದೆ. 28 ಶಾಸಕರು, ಸಂಸದರ ಬಲ ಹೊಂದಿರುವ ಬಿಜೆಪಿಗೆ 102 ಸ್ಥಾನ ಗೆಲ್ಲಬೇಕು.

English summary
BBMP Election 2015 : Vijayavani- ETV kannada Poll Survey after the voting is out. According to survey Congress will get more than 100 seats and BJP will sinks to 75 and JDS 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X