ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಚುನಾವಣೆ: ವಿಜಯವಾಣಿ-ಈಟಿವಿ ಸಮೀಕ್ಷೆ ರಿಸಲ್ಟ್

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಮತದಾನಕ್ಕೆ ಸಜ್ಜಾಗುವ ಸಮಯಕ್ಕೂ ಮುನ್ನ ವಿವಿಧ ಮಾಧ್ಯಮಗಳು ಪೂರ್ವ ಸಮೀಕ್ಷೆಗಳು ಹೊರ ಬರುತ್ತಿವೆ.

ಎಲ್ಲಾ ಚುನಾವಣೆಗಳಂತೆ ಈ ಚುನಾವಣೆಯ ಮತದಾನಕ್ಕೂ ಮುನ್ನ ಕ್ಷೇತ್ರದ ಸಮಸ್ಯೆ, ಕ್ಷೇತ್ರದ ಜನತೆಯ ಬೇಡಿಕೆ, ಅಲ್ಲಿರುವ ಹಾಲಿ ಕಾರ್ಪೊರೇಟರ್ಸ್ ಕಾರ್ಯಕ್ಷಮತೆಯ ವರದಿ ಆಧಾರಿಸಿ ಸಮೀಕ್ಷೆಯನ್ನು ನೀಡಲಾಗಿದೆ. [ಪಬ್ಲಿಕ್ ಟಿವಿ ಸಮೀಕ್ಷೆ ಫಲಿತಾಂಶ]

ಬಿಬಿಎಂಪಿಯ ಒಟ್ಟು 198 ವಾರ್ಡ್‌ಗಳ ಪೈಕಿ 197 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ 197, ಕಾಂಗ್ರೆಸ್‌ನ 197, ಜೆಡಿಎಸ್‌ನ 187, 399 ಪಕ್ಷೇತರರು ಸೇರಿ ಒಟ್ಟು 1,121 ಅಭ್ಯರ್ಥಿಗಳು ಕಣದಲ್ಲಿದ್ದಾರೆ. [ಬಿಬಿಎಂಪಿ ಚುನಾವಣೆ, ಅಂಕಿ-ಸಂಖ್ಯೆಗಳ ವಿವರ]

ಆಡಳಿತಾರೂಢ ಕಾಂಗ್ರೆಸ್ ಪಕ್ಷ ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲೂ ಮೇಲುಗೈ ಸಾಧಿಸಲಿದೆ ಎಂದು ವಿಜಯವಾಣಿ ಹಾಗೂ ಈಟಿವಿ ಕನ್ನಡ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಹೇಳುತ್ತಿದೆ.[ವಿಜಯವಾಣಿ- ಈಟಿವಿ ಸಮೀಕ್ಷೆ: ಕಾಂಗ್ರೆಸ್ ಸೆಂಚುರಿ, ಬಿಜೆಪಿಗೆ ವರಿ!]

ಹೊಸ ವಾರ್ಡ್ ಗಳಲ್ಲಿ ಪ್ರಬಲ ಪೈಪೋಟಿ

ಹೊಸ ವಾರ್ಡ್ ಗಳಲ್ಲಿ ಪ್ರಬಲ ಪೈಪೋಟಿ

ನಗರದ 40 ವಾರ್ಡ್ ಗಳಿಗಿಂತ ಹೊರವಲಯದ ಹೊಸ ವಾರ್ಡ್ ಗಳಲ್ಲಿ ಪ್ರಬಲ ಪೈಪೋಟಿ ಕಂಡು ಬಂದಿದ್ದು, ಜೆಡಿಎಸ್ 19ರಿಂದ 25 ಸ್ಥಾನ ಗೆದ್ದು ಕೊಳ್ಳುವ ಸಾಧ್ಯತೆಯಿದೆ

ಅಧಿಕಾರ ಹಿಡಿಯಲು 130 ಸದಸ್ಯ ಬಲ ಬೇಕೇಬೇಕು

ಅಧಿಕಾರ ಹಿಡಿಯಲು 130 ಸದಸ್ಯ ಬಲ ಬೇಕೇಬೇಕು

198 ವಾರ್ಡ್​ಗಳ ಜತೆಗೆ, 61 ಶಾಸಕರು, ಮೇಲ್ಮನೆ ಸದಸ್ಯರು, ಸಂಸದರು ಸೇರಿ ಒಟ್ಟು 259 ಸದಸ್ಯ ಬಲದ ಪಾಲಿಕೆಯಲ್ಲಿ ಯಾರೇ ಅಧಿಕಾರ ಹಿಡಿಯಲು 130 ಸದಸ್ಯ ಬಲ ಬೇಕೇಬೇಕು. ಅದಕ್ಕಾಗಿ ಕಾಂಗ್ರೆಸ್ 104 ಸ್ಥಾನ ಗೆಲ್ಲುವುದು ಅನಿವಾರ್ಯವಾಗಿದೆ. 28 ಶಾಸಕರು, ಸಂಸದರ ಬಲ ಹೊಂದಿರುವ ಬಿಜೆಪಿಗೆ 102 ಸ್ಥಾನ ಗೆಲ್ಲಬೇಕು.

ಜೆಡಿಎಸ್ ನಿರ್ಣಾಯಕ ಪಾತ್ರ

ಜೆಡಿಎಸ್ ನಿರ್ಣಾಯಕ ಪಾತ್ರ

80 ರಿಂದ 90 ಸೀಟುಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮುನ್ಸೂಚನೆ ಲಭ್ಯವಾಗಿದೆ. ನಗರ ಕೇಂದ್ರೀಕೃತ, ಸುಶಿಕ್ಷಿತ ಮತದಾರರ ಪಕ್ಷ ಎಂಬ ಹೆಗ್ಗಳಿಕೆಯ ಬಿಜೆಪಿ, ಕಳೆದ ಬಾರಿ 111 ವಾರ್ಡ್ ಗೆದ್ದಿತ್ತು. ಈ ಸಲ 75- 80 ಸ್ಥಾನಕ್ಕೆ ಸೀಮಿತವಾಗುವ ಸಾಧ್ಯತೆಯಿದೆ.ಬಿಬಿಎಂಪಿಯಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಆಡಳಿತ ಸಾಕಾರಗೊಳ್ಳಬಹುದು.

ಸೀಟು ಹೆಚ್ಚಿಸಿಕೊಳ್ಳಲಿದೆ ದಳ, ಕಾಂಗ್ರೆಸ್

ಸೀಟು ಹೆಚ್ಚಿಸಿಕೊಳ್ಳಲಿದೆ ದಳ, ಕಾಂಗ್ರೆಸ್

ಬಿಬಿಎಂಪಿಯಲ್ಲಿ 15 ಸದಸ್ಯ ಬಲಕ್ಕೆ ಸೀಮಿತವಾಗಿದ್ದ ಜೆಡಿಎಸ್ ಈ ಬಾರಿ ಗರಿಷ್ಠ 25 ಸ್ಥಾನ ತಲುಪುವ ಲಕ್ಷಣಗಳಿವೆ. ಮೂವರು ಶಾಸಕರನ್ನು ಬಿಟ್ಟರೆ ನಗರ ಪ್ರದೇಶಗಳಲ್ಲಿ ಈ ಪಕ್ಷಕ್ಕೆ ನೆಲೆ ಇಲ್ಲ. ಆಡಳಿತಾರೂಢ ಕಾಂಗ್ರೆಸ್ ನಿರೀಕ್ಷೆಗಿಂತ ಹೆಚ್ಚು ಸ್ಥಾನ ಗೆಲ್ಲದಿದ್ದರೆ, ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಳ್ಳುವ ಸದಾವಕಾಶ ಜೆಡಿಎಸ್​ಗೆ ಇದ್ದೇ ಇದೆ.

ಕಾಂಗ್ರೆಸ್ ಬಲವರ್ಧನೆ

ಕಾಂಗ್ರೆಸ್ ಬಲವರ್ಧನೆ

ಈ ಹಿಂದಿನ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಕಾಂಗ್ರೆಸ್ 65 ಸದಸ್ಯ ಬಲ ಹೊಂದಿತ್ತು.ಬಿಬಿಎಂಪಿಯಲ್ಲಿ ರಾಜ್ಯಭಾರ ನಡೆಸಿದ್ದ ಬಿಜೆಪಿ 111 ಸದಸ್ಯ ಬಲ ಹೊಂದಿತ್ತು. ಈ ಹಿಂದಿನ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಕಾಂಗ್ರೆಸ್ 65 ಸದಸ್ಯ ಬಲ ಹೊಂದಿತ್ತು.ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದರೆ ಗದ್ದುಗೆ ಅವಕಾಶ ಕಾಂಗ್ರೆಸ್​ಗೆ ಸಿಗುವ ನಿರೀಕ್ಷೆಯಿದೆ.

ನಿರೀಕ್ಷಿತ ಫಲಿತಾಂಶ

ನಿರೀಕ್ಷಿತ ಫಲಿತಾಂಶ

ಕಾಂಗ್ರೆಸ್ 80-90
ಬಿಜೆಪಿ 75-80
ಜೆಡಿಎಸ್ 19-25
ಇತರೆ 5-8

English summary
BBMP Election 2015 : Vijayavani- ETV kannada Pre-poll Survey is out. According to Congress will get 80-90, BJP 75-80, and JDS 19-25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X