ಹೊಂಗಸಂದ್ರ ವಾರ್ಡ್ ಗೆದ್ದ ಬಿಜೆಪಿ ಅಭ್ಯರ್ಥಿ ಭಾರತಿ

ಬೆಂಗಳೂರು, ಆಗಸ್ಟ್ 13: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಆರಂಭಕ್ಕೂ ಮುನ್ನವೇ ಬಿಜೆಪಿ ತನ್ನ ವಿಜಯ ಪತಾಕೆ ಹಾರಿಸಿದೆ. ಹೊಂಗಸಂದ್ರ ವಾರ್ಡಿನ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಬುಧವಾರ ತಿರಸ್ಕೃತಗೊಂಡಿತ್ತು. ಜಾತಿ ಪ್ರಮಾಣ ಪತ್ರ ಸಲ್ಲಿಸುವಾಗ ಆದ ಗೊಂದಲದಿಂದಾಗಿ ನಾಮಪತ್ರ ಸ್ವೀಕಾರಗೊಂಡಿರಲಿಲ್ಲ. [ಕನ್ನಡದ ತಿಂಡಿಯಲ್ಲಿ ಮತದಾನ ಜಾಗೃತಿ ಘಮ]

Bharathi Ramachandra

ಈ ವಾರ್ಡಿನಲ್ಲಿ ಜೆಡಿಎಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲಿಲ್ಲ. ಹಿಂದುಳಿದ ವರ್ಗದ (ಎ) ಮಹಿಳೆಗೆ ಮೀಸಲಾಗಿದ್ದ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವಾಗ ಮಹೇಶ್ವರಿ ಅವರು ಪತಿಯ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಬಿಜೆಪಿ ಮುಖಂಡ ಸತೀಶ್ ರೆಡ್ಡಿ ಅವರು ಈ ಬಗ್ಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ದೂರನ್ನು ಪರಿಶೀಲನೆ ನಡೆಸಿದ ಚುನಾವಣಾಧಿಕಾರಿಗಳು ನಾಮಪತ್ರವನ್ನು ತಿರಸ್ಕರಿಸಿದ್ದಾರೆ.[ಬಿಬಿಎಂಪಿ ಕದನ : 2 ಕಾಂಗ್ರೆಸ್, 1 ಜೆಡಿಎಸ್ ನಾಮಪತ್ರ ತಿರಸ್ಕೃತ]

ಜೆಡಿಎಸ್ ಸ್ಪರ್ಧಿಸಿದ ಮೂರು ವಾರ್ಡ್‌ಗಳ ಪೈಕಿ ಹೊಂಗಸಂದ್ರವು ಸೇರಿತ್ತು. ಆ.22ರ ಶನಿವಾರ ಮತದಾನ ನಡೆಯಬೇಕಿತ್ತು. ಉಳಿದಂತೆ ಕಣದಲ್ಲಿ ಶ್ವೇತಾ ಹಾಗೂ ಶಹೀನಾ ಹೆಸರಿನ ಇಬ್ಬರು ಪಕ್ಷೇತರ ಅಭ್ಯರ್ಥಿಗಳಿದ್ದರು. ಈ ಇಬ್ಬರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+