Get Updates
Get notified of breaking news, exclusive insights, and must-see stories!

ಬಿಬಿಎಂಪಿ ಚುನಾವಣೆ 2015, ಪಬ್ಲಿಕ್ ಟಿವಿ ಸಮೀಕ್ಷೆ ಫಲಿತಾಂಶ

ಬೆಂಗಳೂರು, ಆಗಸ್ಟ್ 20 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ಕೈಗೊಂಡಿದ್ದಾರೆ. ಆ.22ರಂದು ಮತದಾನ ನಡೆಯಲಿದ್ದು, ಗೆಲುವು ಯಾರಿಗೆ? ಎಂಬ ಲೆಕ್ಕಾಚಾರ ಆರಂಭವಾಗಿದೆ. [ಬಿಬಿಎಂಪಿ ಚುನಾವಣೆ 2015, ಪಬ್ಲಿಕ್ ಟಿವಿ ಸಮೀಕ್ಷೆ ಫಲಿತಾಂಶ]

ಬಿಬಿಎಂಪಿಯ ಒಟ್ಟು 198 ವಾರ್ಡ್‌ಗಳ ಪೈಕಿ 197 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ 197, ಕಾಂಗ್ರೆಸ್‌ನ 197, ಜೆಡಿಎಸ್‌ನ 187, 399 ಪಕ್ಷೇತರರು ಸೇರಿ ಒಟ್ಟು 1,121 ಅಭ್ಯರ್ಥಿಗಳು ಕಣದಲ್ಲಿದ್ದಾರೆ. [ಬೆಂಗಳೂರು ಅಭಿವೃದ್ಧಿಗೊಂದು ಖಾತೆ, ಸಚಿವರ ನೇಮಕ]

ಪಬ್ಲಿಕ್ ಟಿವಿ 198 ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಿದ್ದು ಚುನಾವಣಾ ಫಲಿತಾಂಶ ಏನಾಗಬಹುದು? ಎಂಬ ಲೆಕ್ಕಾಚಾರವನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯ ಪ್ರಕಾರ ಜನರು ಕಾಂಗ್ರೆಸ್‌ಗೆ ಜೈ ಅಂದಿದ್ದು ಪಕ್ಷ 85-95 ಸ್ಥಾನಗಳಲ್ಲಿ ಜಯಗಳಿಸಲಿದೆ. ಬಿಜೆಪಿಯು 80-90, ಜೆಡಿಎಸ್ 12-17 ಸ್ಥಾನಗಳಲ್ಲಿ ಜಯಗಳಿಸಬಹುದು ಎಂಬ ಫಲಿತಾಂಶ ಬಂದಿದೆ. [ಬಿಬಿಎಂಪಿ ಚುನಾವಣೆ, ಪ್ರಚಾರದ ಚಿತ್ರಗಳು]

ಅಂದಹಾಗೆ 2010ರ ಚುನಾವಣೆಯಲ್ಲಿ ಬಿಜೆಪಿ 112, ಕಾಂಗ್ರೆಸ್ 65, ಜೆಡಿಎಸ್ 14, ಪಕ್ಷೇತರರು 7 ಸ್ಥಾನಗಳಲ್ಲಿ ಜಯಗಳಿಸಿದ್ದರು. 2015ರ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪಾಲಿಕೆಯಲ್ಲಿ ಮತ್ತೆ ನಮ್ಮದೇ ಅಧಿಕಾರ ಎಂಬ ವಿಶ್ವಾಸದಲ್ಲಿ ಕಮಲಪಾಳಯವಿದೆ. ಅತಂತ್ರವಾದರೆ ಅಧಿಕಾರ ಹಂಚಿಕೊಳ್ಳುವ ಆಸೆ ಜೆಡಿಎಸ್‌ ಪಕ್ಷಕ್ಕಿದೆ. ಪಬ್ಲಿಕ್ ಟಿವಿ ಸಮೀಕ್ಷೆ ಫಲಿತಾಂಶ ಚಿತ್ರಗಳಲ್ಲಿ ನೋಡಿ...... [ಮಾಹಿತಿ ಕೃಪೆ : ಪಬ್ಲಿಕ್ ಟಿವಿ]

ಸಮೀಕ್ಷೆ ನಡೆದಿದ್ದು ಹೇಗೆ?

ಸಮೀಕ್ಷೆ ನಡೆದಿದ್ದು ಹೇಗೆ?

ಪಬ್ಲಿಕ್ ಟಿವಿಯ ವರದಿಗಾರರು 198 ವಾರ್ಡ್‌ಗಳಲ್ಲಿ ಸಂಗ್ರಹಿಸಿದ ಮಾಹಿತಿ, ಪಕ್ಷಗಳ ಆಂತರಿಕ ಲೆಕ್ಕಾಚಾರ, ರಾಜ್ಯ ಮತ್ತು ಕೇಂದ್ರ ಗುಪ್ತದಳದ ಸಮೀಕ್ಷೆಯ ಮಾಹಿತಿ, ರಾಜಕೀಯ ಬದಲಾವಣೆ, ಬಂಡಾಯ ಮುಂತಾದ ಹಲವಾರು ಅಂಶಗಳನ್ನು ಸೇರಿಸಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.

ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಪ್ರತಿಷ್ಠೆಯ ಪ್ರಶ್ನೆ

ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಪ್ರತಿಷ್ಠೆಯ ಪ್ರಶ್ನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆ ಪ್ರತಿಷ್ಠಯ ಪ್ರಶ್ನೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ರಾಜ್ಯ ರಾಜಧಾನಿಯಲ್ಲೂ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ. ಬೆಂಗಳೂರು ನಗರದ ಐದು ಜನ ಸಚಿವರಿಗೂ ಈ ಫಲಿತಾಂಶ ಅಳಿವು-ಉಳಿವಿನ ಪ್ರಶ್ನೆಯಾಗಿದೆ.

ಬಿಜೆಪಿಗೆ ಮತ್ತೆ ಅಧಿಕಾರ ಹಿಡಿಯುವ ವಿಶ್ವಾಸ

ಬಿಜೆಪಿಗೆ ಮತ್ತೆ ಅಧಿಕಾರ ಹಿಡಿಯುವ ವಿಶ್ವಾಸ

2010ರ ಚುನಾವಣೆಯಲ್ಲಿ ಜಯಗಳಿಸಿ ಮೇಯರ್ ಗೌನ್ ಧರಿಸಿದ್ದ ಬಿಜೆಪಿಗೆ ಈ ಬಾರಿಯೂ ಗೆಲ್ಲುವ ವಿಶ್ವಾಸವಿದೆ. ಒಂದು ವೇಳೆ ಬಿಜೆಪಿ ಪರವಾಗಿ ಫಲಿತಾಂಶ ಬಂದರೆ, ಇದು ಸರ್ಕಾರದ ಕಾರ್ಯವೈಖರಿಗೆ ಸಾಕ್ಷಿ ಎಂದು ಬಿಜೆಪಿ ಟೀಕೆ ಮಾಡಲಿದೆ. ಆರ್.ಅಶೋಕ್-ಬಿ.ಎಸ್.ಯಡಿಯೂಪರಪ್ಪ ನಡುವಿನ ವಿವಾದ ಬಿಜೆಪಿಗೆ ಹಿನ್ನಡೆ ಉಂಟುಮಾಡುವುದು ಕಾದು ನೋಡಬೇಕು.

ಕಾಂಗ್ರೆಸ್ ಸೋಲು ಜೆಡಿಎಸ್ ಗುರಿ

ಕಾಂಗ್ರೆಸ್ ಸೋಲು ಜೆಡಿಎಸ್ ಗುರಿ

ಯಾವುದೇ ಪಕ್ಷಕ್ಕೆ ಸ್ಪಷ್ಟ ಫಲಿತಾಂಶ ಬರದೇ ಅತಂತ್ರ ಸೃಷ್ಟಿಯಾದರೆ ಜೆಡಿಎಸ್ ಅಧಿಕಾರ ಹಂಚಿಕೊಳ್ಳಬಹುದು. ತನ್ನ ಗೆಲುವಿಗಿಂತ ಕಾಂಗ್ರೆಸ್ ಪಕ್ಷದ ಸೋಲೇ ಮುಖ್ಯ ಎಂಬಂತೆ ಜೆಡಿಎಸ್ ಚುನಾವಣಾ ಕಣಕ್ಕಿಳಿದಿದೆ.

ಸಮೀಕ್ಷೆಯ ಫಲಿತಾಂಶ ಹೀಗಿದೆ

ಸಮೀಕ್ಷೆಯ ಫಲಿತಾಂಶ ಹೀಗಿದೆ

* ಬಿಜೆಪಿ - 80 ರಿಂದ 90
* ಕಾಂಗ್ರೆಸ್ 85 ರಿಂದ 95
* ಜೆಡಿಎಸ್ 12 ರಿಂದ 17
* ಇತರರು 01 ರಿಂದ 05

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+