ಬಿಬಿಎಂಪಿ ಚುನಾವಣೆ, ಬಿಜೆಪಿ 96 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಬೆಂಗಳೂರು, ಆಗಸ್ಟ್ 5 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ 96 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವುದೇ ಮಾಜಿ ಮೇಯರ್‌ಗಳಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿಲ್ಲ. ಹಿಂದಿನ ಬಾರಿ ಆಯ್ಕೆಯಾಗಿದ್ದ ಹಲವು ಸದಸ್ಯರು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಬಿಎಂಪಿ ಚುನಾವಣೆ ಉಸ್ತುವಾರಿ ಹೊತ್ತಿರುವ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ. 198 ವಾರ್ಡ್‌ಗಳ ಪೈಕಿ ಮೊದಲ ಪಟ್ಟಿಯಲ್ಲಿ 96 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. [ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಫೋಟೋ ತೆಗೆಯಿರಿ]

ಈ ಬಾರಿಯ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಶೇ 50ಕ್ಕಿಂತ ಹೆಚ್ಚಾಗಿರುವ ಕಾರಣ ಮೊದಲ ಪಟ್ಟಿಯಲ್ಲಿ ಹಲವಾರು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಪದ್ಮಭಾಭ ರೆಡ್ಡಿ, ಉಮೇಶ್ ಶೆಟ್ಟಿ, ಎ.ಎಚ್.ಬಸವರಾಜು ಸೇರಿದಂತೆ ಹಿಂದೆ ಆಯ್ಕೆಯಾಗಿದ್ದ ಕೆಲವು ಸದಸ್ಯರು ಮೊದಲ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. [ಬಿಬಿಎಂಪಿ ಚುನಾವಣಾ ವೇಳಾಪಟ್ಟಿ]
ನಂದಿನಿ ಲೇಔಟ್, ಸಂಜಯನಗರ, ಹೆಬ್ಬಾಳ, ಹಲಸೂರು, ಜಯಮಹಲ್, ಶಿವಾಜಿನಗರ, ಕಾಟನ್ ಪೇಟೆ, ರಾಜಾಜಿನಗರ, ಬಸವೇಶ್ವರ ನಗರ, ಕಾಮಾಕ್ಷಿ ಪಾಳ್ಯ, ಮೂಡಲಪಾಳ್ಯ, ಚಾಮರಾಜಪೇಟೆ, ಸುಧಾಮನಗರ ಸೇರಿದಂತೆ 96 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
| ವಾರ್ಡ್ ಸಂಖ್ಯೆ | ವಾರ್ಡ್ ಹೆಸರು | ಅಭ್ಯರ್ಥಿಗಳ ಹೆಸರು |
| 43 | ನಂದಿನಿ ಲೇಔಟ್ | ಕೆ.ವಿ.ರಾಜೇಂದ್ರ ಕುಮಾರ್ |
| 67 | ನಾಗಾಪುರ | ಎಸ್.ಹರೀಶ್ |
| 68 | ಮಹಾಲಕ್ಷ್ಮೀಪುರ | ಶಿವಾನಂದಮೂರ್ತಿ |
| 35 | ಅರಮನೆ ನಗರ | ಸುಮಂಗಲಾ ಕೇಶವ |
| 65 | ಕಾಡು ಮಲ್ಲೇಶ್ವರ | ಮಂಜುನಾಥ ರಾಜು |
| 18 | ರಾಧಾಕೃಷ್ಣ ದೇವಾಲಯ | ಆರ್.ಕೃಷ್ಣದೇವರಾಯ |
| 19 | ಸಂಜಯನಗರ | ಇಂದಿರಾ ಸುಭಾಷ್ |
| 21 | ಹೆಬ್ಬಾಳ | ಜಯಪ್ಪ ರೆಡ್ಡಿ |
| 22 | ವಿಶ್ವನಾಥ ನಾಗೇನಹಳ್ಳಿ | ವೆಂಕಟೇಶ್ |
| 33 | ಮನೋರಾಯನಪಾಳ್ಯ | ಚಾಂದ್ ಪಾಷಾ |
| 46 | ಜಯಚಾಮರಾಜೇಂದ್ರ ನಗರ | ಗಣೇಶ್ ರಾವ್ ಮಾನೆ |
| 62 | ರಾಮಸ್ವಾಮಿ ಪಾಳ್ಯ | ಗಿರಿಜಾ ಪ್ರಕಾಶ್ |
| 63 | ಜಯಮಹಲ್ | ಬಾಲಕೃಷ್ಣ |
| 90 | ಹಲಸೂರು | ಸಿ.ಜಿ.ಸುಮತಿ ರವಿ |
| 91 | ಭಾರತಿ ನಗರ | ಉಮಾ ಮಹೇಶ್ವರ |
| 92 | ಶಿವಾಜಿ ನಗರ | ಸರಳಾ |
| 89 | ಜೋಗುಪಾಳ್ಯ | ಗೌತಮಗ ಕುಮಾರ್ |
| 111 | ಶಾಂತಲಾನಗರ | ಎಂ.ಬಿ.ದ್ವಾರಕಾನಾಥ್ |
| 96 | ಓಕಳಿಪುರ | ವಿ.ಶಿವಪ್ರಕಾಶ್ |
| 109 | ಚಿಕ್ಕಪೇಟೆ | ಎಸ್.ಲೀಲಾ ಶಿವಕುಮಾರ್ |
| 120 | ಕಾಟನ್ ಪೇಟೆ | ಪಿ.ಪಳನಿ |
| 97 | ದಯಾನಂದ ಸಾಗರ | ಕುಮಾರಿ ಪಳನಿಕಾಂತ್ |
| 98 | ಪ್ರಕಾಶ ನಗರ | ದೇವಿಕಾರಾಜ್ |
| 99 | ರಾಜಾಜಿನಗರ | ಎಚ್.ಆರ್.ಕೃಷ್ಣಪ್ಪ |
| 100 | ಬಸವೇಶ್ವರ ನಗರ | ಉಮಾಪತಿ ಪದ್ಮರಾಜ್ |
| 101 | ಕಾಮಾಕ್ಷಿ ಪಾಳ್ಯ | ಪ್ರತಿಮಾ ಕೆ.ಎಸ್.ರಮೇಶ್ |
| 107 | ಶಿವನಗರ | ಪುಟ್ಟಲಕ್ಷ್ಮೀ |
| 108 | ಶ್ರೀರಾಮಮಂದಿರ | ದೀಪಾ ನಾಗೇಶ್ |
| 104 | ಗೋವಿಂದರಾಜನಗರ | ಉಮೇಶ್ ಶೆಟ್ಟಿ |
| 125 | ಮಾರೇನಹಳ್ಳಿ | ಮಧುಕುಮಾರಿ ನಾಗೇಶ್ |
| 127 | ಮೂಡಲಪಾಳ್ಯ | ದಾಸೇಗೌಡ |
| 128 | ನಾಗರಬಾವಿ | ಮೋಹನ್ ಕುಮಾರ್ |
| 131 | ನಾಯಂಡಹಳ್ಳಿ | ಶಕುಂತಲಾ ಲಕ್ಕಪ್ಪ |
| 122 | ಕೆಂಪಾಪುರ ಅಗ್ರಹಾರ | ಶೋಭಾ ಬಸವರಾಜ |
| 124 | ಹೊಸಳ್ಳಿ | ಆರ್.ಮಹಾಲಕ್ಷ್ಮೀ |
| 133 | ಹಂಪಿನಗರ | ಆನಂದ ಹೊಸೂರು |
| 158 | ದೀಪಾಂಜಲಿ ನಗರ | ಅನುಪಮಾ ಧನಪಾಲ್ |
| 136 | ಪಾದರಾಯನ ನಗರ | ಅಪ್ರೋಜ್ ಪಾಷಾ |
| 137 | ರಾಯಪುರ | ಶಶಿಕಲಾ ಕೇಶವ |
| 138 | ಚಲವಾದಿ ಪಾಳ್ಯ | ರೇಖಾ ಕದಿರೇಶ್ |
| 139 | ಕೆ.ಆರ್.ಮಾರುಕಟ್ಟೆ | ರೇಖಾ ಕೆ.ಗೋವಿಂದ |
| 140 | ಚಾಮರಾಜಪೇಟೆ | ಕೋಮಲಾ ಎಂ.ಗಣೇಶ್ |
| 118 | ಸುಧಾಮ ನಗರ | ಶ್ರೀನಿವಾಸ್ |
| 119 | ಧರ್ಮರಾಯ ದೇವಸ್ಥಾನ | ಪ್ರತಿಭಾ ಧನರಾಜ್ |
| 145 | ಹೊಂಬೇಗೌಡ ನಗರ | ಸುರೇಶ್ ಬಾಬು |
| 153 | ಜಯನಗರ | ಕವಿತಾ ಜೈನ್ |
| 161 | ಹೊಸಕೆರೆಹಳ್ಳಿ | ರಾಜೇಶ್ವರಿ ಚೋಳರಾಜ್ |
| 167 | ಯಡಿಯೂರು | ಪೂರ್ಣಿಮಾ ರಮೇಶ್ |
| 180 | ಬನಶಂಕರಿ ದೇವಸ್ಥಾನ | ಎ.ಎಚ್.ಬಸವರಾಜ್ |
| 168 | ಪಟ್ಟಾಭಿರಾಮನಗರ | ಎಚ್.ಸಿ.ನಾಗರತ್ನ ರಾಮಮೂರ್ತಿ |
| 169 | ಬೈರಸಂದ್ರ | ಎನ್.ನಾಗರಾಜ್ |
| 170 | ಜಯನಗರ ಪೂರ್ವ | ಆರ್.ಗೋವಿಂದನಾಯ್ಡ |
| 177 | ಜೆ.ಪಿ.ನಗರ | ಕೆ.ಎನ್.ಲಕ್ಷ್ಮೀ ನಟರಾಜ್ |
| 178 | ಸಾರಕ್ಕಿ | ದೀಪಿಕಾ ಎಲ್. ಮಂಜುನಾಥ ರೆಡ್ಡಿ |
| 179 | ಶಾಕಾಂಬರಿ ನಗರ | ಎಂ.ಮಾಲತಿ ಶೇಖರ್ |
| 26 | ರಾಮಮೂರ್ತಿನಗರ | ಎಂ.ಪದ್ಮಾವತಿ ಶ್ರೀನಿವಾಸ್ |
| 52 | ಕೆ.ಆರ್.ಪುರ | ಪೂರ್ಣಿಮಾ ಶ್ರೀನಿವಾಸ್ |
| 55 | ದೇವಸಂದ್ರ | ಆರ್.ಮಂಜುಳಾದೇವಿ ಶ್ರೀನಿವಾಸ್ |
| 81 | ವಿಜ್ಞಾನ ನಗರ | ವಿ.ಮೋಹನ್ ಮೂರ್ತಿ |
| 16 | ಜಾಲಹಳ್ಳಿ | ರಾಕೇಶ್ |
| 38 | ಎಚ್‌ಎಂಟಿ | ಮಂಜುಳಾ ಮಂಜುನಾಥಬಾಬು |
| 42 | ಲಕ್ಷಿದೇವಿ ನಗರ | ಮಾಕಳಿ ಪರಮೇಶ್ |
| 73 | ಕೊಟ್ಟಿಗೆಪಾಳ್ಯ | ತಿಮ್ಮರಾಜು |
| 129 | ಜ್ಞಾನಭಾರತಿ | ತೇಜಸ್ವಿನಿ ಸೀತಾರಾಮಯ್ಯ |
| 160 | ರಾಜರಾಜೇಶ್ವರಿ ನಗರ | ನಳಿನಿ ಮಂಜುನಾಥ್ |
| 12 | ಶೆಟ್ಟಿಹಳ್ಳಿ | ಕೆ.ಸಿ.ವೆಂಕಟೇಶ್ |
| 39 | ಚೊಕ್ಕಸಂದ್ರ | ಸರ್ವಮಂಗಳಾ ನಾಗರಾಜ್ |
| 70 | ರಾಜಗೋಪಾಲನಗರ | ಅನಿತಾ ಸುರೇಶ್ |
| 71 | ಹೆಗ್ಗನಳ್ಳಿ | ಭಾಗ್ಯಮ್ಮ ಕೃಷ್ಣಯ್ಯ |
| 24 | ಎಚ್‌ಬಿಆರ್ ಲೇಔಟ್ | ಆರ್.ಪ್ರಕಾಶ್ |
| 27 | ಬಾಣಸವಾಡಿ | ಎ.ಕೋದಂಡ ರೆಡ್ಡಿ |
| 29 | ಕಾಚರಕನಹಳ್ಳಿ | ಪದ್ಮನಾಭ ರೆಡ್ಡಿ |
| 30 | ಕಾಡುಗೊಂಡನಹಳ್ಳಿ | ಆನಂದ್ |
| 49 | ಲಿಂಗರಾಜಪುರ | ಸಾವಿತ್ರಿ |
| 50 | ಬೆನ್ನಿಗಾನಹಳ್ಳಿ | ಆರ್.ವಿಜಯಲಕ್ಷ್ಮೀ ಕೃಷ್ಣಾ |
| 57 | ಸಿ.ವಿ.ರಾಮನ್ ನಗರ | ಅರುಣಾ ದೇವಿ |
| 58 | ನ್ಯೂ ತಿಪ್ಪಸಂದ್ರ | ಸುಮಿತ್ರಾ ವಿಜಯಕುಮಾರ್ |
| 79 | ಸರ್ವಜ್ಞ ನಗರ | ಶಶಿರೇಖಾ ಮುಕುಂದ |
| 80 | ಹೊಯ್ಸಳ ನಗರ | ಬಿ.ಎಂ.ಸೋಮು |
| 88 | ಜೀವನ್ ಭಿಮಾ ನಗರ | ವೀಣಾ ಕುಮಾರಿ ರಾಮಕೃಷ್ಣ |
| 113 | ಕೋನೇನ ಅಗ್ರಹಾರ | ಸುರೇಂದ್ರನಾಥ ರೆಡ್ಡಿ |
| 146 | ಲಕ್ಕಸಂದ್ರ | ಮಹೇಶಬಾಬು |
| 151 | ಕೋರಮಂಗಲ | ಎಚ್.ಎಂ.ಗೋವಿಂದರಾಜು |
| 176 | ಬಿಟಿಎಂ ಲೇಔಟ್ | ಎಚ್.ಕೆ.ಮುತ್ತಪ್ಪ |
| 187 | ಪುಟ್ಟೇನಹಳ್ಳಿ | ಆರ್.ಪ್ರಭಾವತಿ ರಮೇಶ್ |
| 190 | ಮಂಗಮ್ಮನಪಾಳ್ಯ | ಮಾಲಾ ಶ್ರೀನಿವಾಸ ರೆಡ್ಡಿ |
| 193 | ಅರಕೆರೆ | ಆರ್.ಭಾಗ್ಯಲಕ್ಷ್ಮೀ |
| 194 | ಗೊಟ್ಟಿಗೆರೆ | ಲಲಿತಾ ಟಿ.ನಾರಾಯಣ್ |
| 195 | ಕೋಣನಕುಂಟೆ | ಶಶಿರೇಖಾ ಜಯರಾಮ್ |
| 196 | ಅಂಜನಾಪುರ | ಕೆ.ಸೋಮಶೇಖರ್ |
| 54 | ಹೂಡಿ | ಎಚ್.ವಿ.ಮಂಜುನಾಥ್ |
| 86 | ಮಾರತಹಳ್ಳಿ | ಪಿ.ಎ.ವೆಂಕಟಸ್ವಾಮಿ |
| 83 | ಕಾಡುಗೋಡಿ | ಎಸ್.ಮುನಿಸ್ವಾಮಿ |
| 149 | ವರ್ತೂರು | ಪುಷ್ಪಾ ಮಂಜುನಾಥ್ |
| 150 | ಬೆಳ್ಳಂದೂರು | ಎನ್.ಆಶಾ ಸುರೇಶ್ |
| 84 | ಹಗದೂರು | ಶ್ರೀಧರ್ ರೆಡ್ಡಿ |











Click it and Unblock the Notifications