ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಮ್ ಆದ್ಮಿ ಪಕ್ಷದಿಂದ 'ಬೊಂಬಾಟ್ ಬೆಂಗಳೂರು' ಪ್ರಣಾಳಿಕೆ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 17: ಆಮ್ ಆದ್ಮಿ ಪಕ್ಷ ಮತ್ತೊಮ್ಮೆ 'ಬೊಂಬಾಬ್ ಬೆಂಗಳೂರು' ಪ್ರಣಾಳಿಕೆ ಹಿಡಿದು ಜನತೆ ಮುಂದೆ ನಿಂತಿದೆ. ಬಿಬಿಎಂಪಿ ಚುನಾವಣೆ ಘೋಷಣೆಗೂ ಎಷ್ಟೋ ಕಾಲ ಮುಂಚೆ ಬೊಂಬಾಬ್ ಬೆಂಗಳೂರು ಭರವಸೆ ಹುಟ್ಟಿಸಿ ಬಿಬಿಎಂಪಿ ಚುನಾವಣೆ ಕಣಕ್ಕಿಳಿಯುವುದಾಗಿ ಹೇಳಿದ್ದ ಎಎಪಿ ಈ ಬಾರಿ ಕದನದಿಂದ ಹಿಂದೆ ಸರಿದಿರುವುದು ಎಲ್ಲರಿಗೂ ಗೊತ್ತಿದೆ. ಚುನಾವಣೆ ಕಣದಲ್ಲಿಲ್ಲದಿದ್ದರೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಈ ಚುನಾವಣೆಯಿಂದ ಯಾವುದೇ ಪ್ರಯೋಜನವಿಲ್ಲ, ಸಾರ್ವಜನಿಕರ ಹಣವನ್ನು ದುಂದುವೆಚ್ಚವಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಜನೆ ವಿಷಯ ಇನ್ನೂ ಬಗೆ ಹರಿದಿಲ್ಲ.

ಪ್ರಣಾಳಿಕೆಗಳು: ಬಿಜೆಪಿ | ವಾಟಾಳ್ ಪಕ್ಷ | ಕಾಂಗ್ರೆಸ್ | ಜೆಡಿಎಸ್ | ಲೋಕಸತ್ತಾ

ಒಂದು ವೇಳೆ ಬಿಬಿಎಂಪಿ ವಿಭಜನೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದರೆ, ಮತ್ತೊಮ್ಮೆ ಚುನಾವಣೆ ಎದುರಿಸಬೇಕಾಗುತ್ತದೆ. ಹೀಗಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುವುದರಲ್ಲಿ ಅರ್ಥವಿಲ್ಲ ಎಂದು ಎಎಪಿ ಕಾರ್ಯಕರ್ತರು ಮತ್ತೊಮ್ಮೆ ಹೇಳಿದ್ದಾರೆ.

Aam Aadmi Party Karnataka,People's Manifesto

ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಹಲವು ವಾರ್ಡ್, ಬಡಾವಣೆಗಳಲ್ಲಿ ಬೀದಿ ಸಭೆ ನಡೆಸಿ ಸಾರ್ವಜನಿಕರಿಂಡ ಸಂಗ್ರಹವಾದ ಅಭಿಪ್ರಾಯಕ್ಕೆ ಅನುಗುಣವಾಗಿ ಬೊಂಬಾಟ್ ಬೆಂಗಳೂರು ಪ್ರಣಾಳಿಕೆ ಹೊರತರಲಾಗಿದೆ ಎಂದು ಆಪ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪೃಥ್ವಿರೆಡ್ಡಿ ಹೇಳಿದರು.

ಬೆಂಗಳೂರಿನ ಸಮಸ್ಯೆ ಬಗ್ಗೆ ಜನರು ನೀಡುವ ಸಲಹೆಗಳನ್ನು ಆಧರಿಸಿ ಪ್ರಣಾಳಿಕೆ ರಚಿಸಲಾಗುತ್ತದೆ. ಆದ್ದರಿಂದ ಜನರ ಸಲಹೆಯನ್ನು ಸ್ವೀಕರಿಸಲು ಕರ್ನಾಟಕ ಆಮ್ ಆದ್ಮಿ ಘಟಕ 'ಬೊಂಬಾಟ್ ಬೆಂಗಳೂರು' ಹೆಸರಲ್ಲಿ ನೂತನ ವೆಬ್‌ಸೈಟ್ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು [ಬಿಬಿಎಂಪಿ ಚುನಾವಣೆ ಮೇಲೆ ಆಮ್ ಆದ್ಮಿ ಕಣ್ಣು]

ಎಎಪಿಯ ಬೊಂಬಾಬ್ ಬೆಂಗಳೂರು ಪ್ರಣಾಳಿಕೆಯಲ್ಲಿರುವ ಮುಖ್ಯಾಂಶಗಳು:
* ಆಡಳಿತ ವಿಕೇಂದ್ರಿಕರಣಕ್ಕೆ ಹೆಚ್ಚಿನ ಮಹತ್ವ.
* 2013ರಲ್ಲಿ ರಚಿಸಿರುವ ವಾರ್ಡ್ ಸಮಿತಿಗಳ ಬಲವರ್ಧನೆ,
* ಟೆಂಡರ್ ಅಕ್ರಮ ಸರಿಪಡಿಸುವುದು, ಜನಪರ ಬಜೆಟ್ ಮಂಡಿಸುವುದು.
* ಕೆರೆಗಳ ಹೂಳೆತ್ತುವುದರಿಂದ ಹಿಡಿದು, ನಶಿಸಿರುವ ಕೆರೆಗಳಿಗೆ ಪುನರ್ ಜೀವ ನೀಡುವುದು.
* ಕಸದಿಂದ ರಸ ಉತ್ಪತ್ತಿ. ಕಸ ವಿಲೇವಾರಿಗೆ ವೈಜ್ಞಾನಿಕ ಕ್ರಮ ಅನುಸರಣೆ, ಗೊಬ್ಬರ ಬಳಕೆ, ತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆ.
* ಬಿಬಿಎಂಪಿ, ಬಿಡಿಎ, ಬೆಂಗಳೂರು ಜಲಮಂಡಳಿ ಒಗ್ಗೂಡಿಸಿ ಜಲ ಪೂರೈಕೆ ಸಮಸ್ಯೆ ನಿವಾರಿಸುವುದು.

ಪ್ರಣಾಳಿಕೆಯ ಪೂರ್ಣ ಪಾಠ ಇಲ್ಲಿದೆ:


(ಒನ್ ಇಂಡಿಯಾ ಸುದ್ದಿ)

English summary
BBMP Election 2015 : Aam Aadmi Party Karnataka releases People's Manifesto. AAP will not participate in what they believe are meaningless elections, as it will be clearly be a wasteful expense of public money. Here are the highlights of 'Bombat Bengaluru'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X