ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಗರವನ್ನು ಹಾಂಕಾಂಗ್ ನಂತೆ ಮಾಡ್ತೇವೆ: ಜೆಡಿಎಸ್

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 13: ಬೆಂಗಳೂರನ್ನು ಸಿಂಗಪುರದ ಮಾಡುತ್ತೇವೆ ಎಂದು ರಾಜಕಾರಣಿಗಳು ಈ ಮುಂಚೆ ಹೇಳಿದ್ದನ್ನು ಕೇಳಿದ್ದರೆ ಮರೆತು ಬಿಡಿ. ಜೆಡಿಎಸ್ ಪಕ್ಷ ಸಿಲಿಕಾನ್ ಸಿಟಿಯನ್ನು ಹಾಂಕಾಂಗ್ ನಂತೆ ಅಭಿವೃದ್ಧಿ ಪಡಿಸುವ ಭರವಸೆ ನೀಡಿದೆ. ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ತನ್ನ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದೆ.

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಕಚೇರಿಯಲ್ಲಿ ನಡೆದ ಪ್ರಣಾಳಿಕೆ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಪ್ರಣಾಳಿಕೆಯಲ್ಲಿರುವಂತೆ ಬೆಂಗಳೂರಿನ ಇಂದಿನ ದುಃಸ್ಥಿತಿಗೆ ಕಾಂಗ್ರೆಸ್ ಹಾಗೂ ಬಿಜೆಪಿಯೇ ಕಾರಣ ಎಂದರು.

ಪ್ರಣಾಳಿಕೆಗಳು: ಬಿಜೆಪಿ | ವಾಟಾಳ್ ಪಕ್ಷ | ಕಾಂಗ್ರೆಸ್ | ಲೋಕಸತ್ತಾ

ಗಾರ್ಡನ್ ಸಿಟಿ ಹೆಸರನ್ನು ಗಾರ್ಬೇಜ್ ಸಿಟಿಯಾಗಿದೆ. ನಗರದ ಬ್ರಾಂಡ್ ನೇಮ್ ಹಾಳಾಗಿದೆ. ಮೂಲ ಸೌಕರ್ಯ ಅಭಿವೃದ್ಧಿ ಎಲ್ಲೂ ಆಗಿಲ್ಲ. ಈ ಪ್ರಣಾಳಿಕೆಯಲ್ಲಿ ಈ ಹಿಂದೆ ಬೆಂಗಳೂರು ಅಭಿವೃದ್ಧಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ನೀಡಿದ ಕೊಡುಗೆ ಹಾಗೂ ಜೆಡಿಎಸ್ ಸರ್ಕಾರ ನೀಡಿದ ಕೊಡುಗೆಗಳನ್ನು ವಿವರಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು

ಜೆಡಿಎಸ್ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳು

* ಹಾಂಕಾಂಗ್ ಮಾದರಿಯಲ್ಲಿ ಕಡಿಮೆ ವೆಚ್ಚದಲ್ಲಿ 5 ಲಕ್ಷ ಮನೆ ನಿರ್ಮಾಣ
*
600 ಚ.ಮೀ.ಗಿಂತಾ ಕಡಿಮೆ ವಿಸ್ತೀರ್ಣದ ಮನೆಗಳಿಗೆ ತೆರಿಗೆ ವಿನಾಯಿತಿ
* ಬೆಂಗಳೂರಿನಲ್ಲಿ ಚೆನ್ನೈ ಮಾದರಿಯಲ್ಲಿ ಅನ್ನಪೂರ್ಣ ಕಿಚನ್ ಪ್ರಾರಂಭ

* ಕಡಿಮೆ ಆದಾಯ ವರ್ಗದ ಸುಮಾರು 15 ಲಕ್ಷ ಜನರಿಗೆ ಅನುಕೂಲವಾಗಲು ಅನ್ನಪೂರ್ಣ ಕಿಚ್ ಬಳಕೆ.
* ನಗರದ ನಿರಾಶ್ರಿತರಿಗೆ ಆಶ್ರಯ ತಾಣ ನಿರ್ಮಾಣ

ತ್ಯಾಜ್ಯ ವಿಲೇವಾರಿ ಬಗ್ಗೆ

ತ್ಯಾಜ್ಯ ವಿಲೇವಾರಿ ಬಗ್ಗೆ

* ತ್ಯಾಜ್ಯ ವಿಲೇವಾರಿ ಬಗ್ಗೆ ಶಾಲೆಗಳಲ್ಲಿ ಪಠ್ಯ ರಚನೆ
* ತ್ಯಾಜ್ಯ ವಿಲೇವಾರಿ ಬಗ್ಗೆ ಶಾಲೆಗಳಲ್ಲಿ ಪಠ್ಯ ಕ್ರಮ ಅಳವಡಿಕೆ
* ಜಾಹೀರಾತು ಮೂಲಕ ರೆವಿನ್ಯೂ ಸಂಗ್ರಹ
* ಒತ್ತುವರಿ ತೆರವುಗೊಳಿಸಿ ಕೆರೆಗಳ ರಕ್ಷಣೆ
* ಕಸ ವಿಲೇವಾರಿಗೆ ಅತ್ಯಾಧುನಿಕ ಕ್ರಮ
* ಇದಕ್ಕಾಗಿಯೇ ಬೆಂಗಳೂರು ತ್ಯಾಜ್ಯ ಸಂಗ್ರಹಣಾ ಪ್ರಾಧಿಕಾರ ರಚನೆ

 24 ಗಂಟೆ ತೆರೆದಿರುವ ಔಷಧಿ ಮಳಿಗೆಗಳ ಸ್ಥಾಪನೆ

24 ಗಂಟೆ ತೆರೆದಿರುವ ಔಷಧಿ ಮಳಿಗೆಗಳ ಸ್ಥಾಪನೆ

* ಸರ್ವರಿಗೂ ಚಿಕಿತ್ಸಾ ಸೌಲಭ್ಯ ದೊರೆಯುವಂತ ವ್ಯವಸ್ಥೆ, 24 ಗಂಟೆ ತೆರೆದಿರುವ ಔಷಧಿ ಮಳಿಗೆಗಳ ಸ್ಥಾಪನೆ

* ಬೆಂಗಳೂರಿನಲ್ಲಿ ಸಾರ್ವಜನಿಕ ಆರೋಗ್ಯ ಪ್ರಾಧಿಕಾರ ರಚನೆ.

* ಪ್ರಾಥಮಿಕ ಆರೋಗ್ಯ ಪ್ಯಾಕೇಜ್ ಮೂಲಕ ಎಲ್ಲರಿಗೂ ಚಿಕಿತ್ಸಾ ಸೌಲಭ್ಯವನ್ನು ನೀಡುವುದು. ಇದಕ್ಕೆ ಇಂಗ್ಲೆಂಡಿನ ಎನ್ ಎಚ್ ಎಸ್ ಮಾದರಿ.* ನಗರದಲ್ಲಿ ಆಗುವ ಶೇ 40 ರಷ್ಟು ಹೆರಿಗೆಗಳು ಬಿಬಿಎಂಪಿ ಆಸ್ಪತ್ರೆಗಳಲ್ಲಿ ಆಗುವಂತೆ ವ್ಯವಸ್ಥೆ ಮಾಡಲಾಗುವುದು.
ಸಾಂಸ್ಕೃತಿಕ ಹೆಗ್ಗುರುತು, ವೈಜ್ಞಾನಿಕ ಮಹತ್ವ

ಸಾಂಸ್ಕೃತಿಕ ಹೆಗ್ಗುರುತು, ವೈಜ್ಞಾನಿಕ ಮಹತ್ವ

ಬೆಂಗಳೂರು ಕರಗಕ್ಕೆ ಹೆಚ್ಚಿನ ಮಾನ್ಯತೆ, ಹ್ಯಾಮ್ ರೇಡಿಯೋ ಕೇಂದ್ರ, ಕೆಂಪೇಗೌಡರ ಜಯಂತಿಯನ್ನು 9 ದಿನ ಆಚರಿಸುವುದು, ಚಿತ್ರಸಂತೆ, ಸಿಡ್ನಿ ಒಪೇರಾ ಮದರಿ ಮಲ್ಟಿಪ್ಲೆಕ್ಸ್ ಕಲಾಮಂದಿರ ನಿರ್ಮಾಣ, ಬೆಂಗಳೂರು ಹಬ್ಬವನ್ನು ಆಚಣೆಗೆ ಒತ್ತು, ಮಾಹಿತಿ ತಂತ್ರಜ್ಞಾನ ಎಂಪೋರಿಯಂ ಆರಂಭಿಸಿ ಹೊಸ ಆವಿಷ್ಕಾರಗಳಿಗೆ ಅವಕಾಶ ನೀಡಲಾಗುವುದು, ಏರೋಸ್ಪೇಸ್ ಮ್ಯೂಸಿಯಂ ಸ್ಥಾಪನೆ

English summary
BBMP Election 2015: JDS president HD Kumaraswamy today (Aug.13) released manifesto for Bengaluru Development. The JDS manifesto aims to improve the living conditions of Bengalurians by improving the basic infrastructure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X