ಈದ್ಗಾ ಮೈದಾನ ವಿವಾದ: ಜೂನ್ 21 ಯೋಗ ದಿನಾಚರಣೆ ಅನುಮತಿ ಡೌಟ್!

ಬೆಂಗಳೂರು, ಜೂನ್ 20: ಬಿಬಿಎಂಪಿ ವ್ಯಾಪ್ತಿಯ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ತನ್ನದೆಂದು ವಾದಿಸುತ್ತಿದೆ. ಆಟದ ಮೈದಾನದಲ್ಲಿ ಯೋಗಾ ದಿನಾಚರಣೆಯನ್ನು ಆಚರಿಸಲು ಅನುಮತಿಯನ್ನು ನೀಡಬೇಕೆಂದು ಕೆಲವು ಹಿಂದೂ ಸಂಘಟನೆಗಳು ಬಿಬಿಎಂಪಿಯನ್ನ ಒತ್ತಾಯಿಸಿದ್ದವು. ಆದರೆ ಬಿಬಿಎಂಪಿ ಯೋಗಾ ದಿನಾಚರಣೆಗೆ ಅನುಮತಿ ನಿರಾಕರಿಸುವುದು ಬಹುತೇಕ ಖಚಿತವಾಗಿದೆ.

ಬಿಬಿಎಂಪಿ ಈದ್ಗಾ ಮೈದಾನವನ್ನು ಆಟದ ಮೈದಾನವೆಂದು ಪರಿಗಣಿಸಿದೆ. ಆಟದ ಮೈದಾನದಲ್ಲಿ ವರ್ಷದಲ್ಲಿ ಎರಡು ಸಲ ಮುಸ್ಲಿಂರಿಗೆ ಪ್ರಾರ್ಥನೆ ಮಾಡಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಈ ನಡುವೆ ಈದ್ಗಾ ಮೈದಾನ ತನ್ನದೆಂದು ವಕ್ಫ್ ಮಂಡಳಿ ಕೂಡ ತನ್ನ ವಾದವನ್ನು ಮಂದಿಟ್ಟಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆಯನ್ನು ಮತ್ತು ದಾಖಲೆಯನ್ನು ಕೇಳಿ ಬಿಬಿಎಂಪಿ ವಕ್ಫ್ ಮಂಡಳಿಗೆ ನೋಟೀಸ್ ಸಹ ನೀಡಿತ್ತು.

ಬಿಬಿಎಂಪಿ ನೀಡಿದ್ದ ನೋಟೀಸ್ ಅನ್ನು ಸ್ವೀಕರಿಸಿದ್ದ ವಕ್ಫ್ ಮಂಡಳಿ ಬಿಬಿಎಂಪಿಗೆ ಉತ್ತರವನ್ನು ನೀಡಿದೆ. ಇದರ ಜೊತೆಗೆ ತನ್ನ ಬಳಿಯಲ್ಲಿದ್ದ ಮೈದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದೆ. ಈ ಎಲ್ಲಾ ದಾಖಲೆಗಳನ್ನು ಸ್ವೀಕರಿಸಿರುವ ಬಿಬಿಎಂಪಿ ದಾಖಲೆಗಳನ್ನು ಪರಿಶೀಲನೆ ಮಾಡಲು ಸಮಯಾವಕಾಶಗಳ ಅವಶ್ಯಕತೆ ಇರುವುದರಿಂದ ಆಟದ ಮೈದಾನದಲ್ಲಿ ಯೋಗ ದಿನಾಚರಣೆಯನ್ನು ಆಚರಣೆಗೆ ಅನುಮತಿಯನ್ನು ನಿರಾಕರಿಸುವುದು ಬಹುತೇಕ ಖಚಿತವಾಗಿದೆ.

 ದಾಖಲೆಯನ್ನು ಕಾನೂನು ವಿಭಾಗಕ್ಕೆ ರವಾನೆ

ದಾಖಲೆಯನ್ನು ಕಾನೂನು ವಿಭಾಗಕ್ಕೆ ರವಾನೆ

ಬಿಬಿಎಂಪಿ ವಕ್ಫ್ ಮಂಡಳಿಗೆ ತಮ್ಮ ಬಳಿಯಲ್ಲಿರುವ ಸೂಕ್ತ ದಾಖಲೆಯನ್ನು ಸಲ್ಲಿಸುವಂತೆ ನೋಟೀಸ್ ನೀಡಿತ್ತು. ಮಂಡಳಿ ತನ್ನ ಬಳಿಯ ದಾಖಲೆಯನ್ನು ಬಿಬಿಎಂಪಿಗೆ ಸಲ್ಲಿಕೆಯನ್ನು ಮಾಡಿದೆ. ಬಿಬಿಎಂಪಿ ಕಾನೂನು ವಿಭಾಗಕ್ಕೆ ದಾಖಲೆಗಳನ್ನು ರವಾನಿ ಮಾಡಿದೆ. ಕಾನೂನು ಘಟಕ ದಾಖಲೆಗಳನ್ನು ಸಂಪೂರ್ಣವಾಗಿ ಅವಲೋಕಿಸಿ ವರದಿಯನ್ನು ನೀಡಬೇಕಿದೆ. ಇದಕ್ಕಾಗಿ ಕಾನೂನು ಘಟಕವೂ ಸುಮಾರು ಎಂಟು ದಿನಗಳ ಸಮಯಾವಕಾಶವನ್ನು ಕೇಳಿದೆ.

 ಕಾನೂನು ಸುವ್ಯವಸ್ಥೆಗೆ ಭಂಗ ಸಾಧ್ಯತೆ

ಕಾನೂನು ಸುವ್ಯವಸ್ಥೆಗೆ ಭಂಗ ಸಾಧ್ಯತೆ

ಬಿಬಿಎಂಪಿ ಹಿಂದೂ ಸಂಘಟನೆಗಳಿಗೆ ಯೋಗಾ ದಿನಾಚರಣೆಗೆ ಅನುಮತಿಯನ್ನು ನೀಡಿದರೇ ಕಾನೂನು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. ಇನ್ನು ಹಿಂದೂ ಸಂಘಟನೆಗಳು ಸಹ ಬಿಬಿಎಂಪಿಗೆ ಅನುಮತಿಯನ್ನು ನೀಡುವಂತೆ ದುಂಬಾಲು ಬಿದ್ದಿವೆ. ಆದರೆ ಕಾನೂನು ಘಟಕದ ಸಲಹೆ ಮತ್ತು ಪೊಲೀಸ್ ಇಲಾಖೆ ನೀಡುವ ವರದಿ ಕೈಸೇರುವುದು ತಡವಾಗುವುದರಿಂದಾಗಿ ಯೋಗ ದಿನಾಚರಣೆಗೆ ಅನುಮತಿಯನ್ನು ನೀಡುವುದು ಬಹುತೇಕ ಖಚಿತವಾಗಿದೆ. ಇದನ್ನು ಮೀರಿ ಹಿಂದೂ ಸಂಘಟನೆಗಳಿಗೆ ಯೋಗಾದಿನಾಚರಣೆಗೆ ಅನುಮತಿಯನ್ನು ನೀಡಿದರೆ ಕಾನೂನು ಸುವ್ಯವಸ್ಥೆಗಳು ಹದಗೆಡುವ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟಿಕೊಂಡು ಅನುಮತಿಯನ್ನು ನೀಡುವ ಬಗ್ಗೆ ಅಂತಿಮ ತೀರ್ಮಾನ ಮಾಡಲಿದೆ ಎನ್ನಲಾಗುತ್ತಿದೆಯಾದರೂ ಯೋಗ ದಿನಾಚರಣೆಯ ನಿರಾಕರಣೆ ಬಹುತೇಕ ಖಚಿತವಾಗುತ್ತಿದೆ.

 ಯೋಗ ದಿನಾಚರಣೆಗೆ ಅನುಮತಿ ನೀಡುವಂತೆ ಪಟ್ಟು

ಯೋಗ ದಿನಾಚರಣೆಗೆ ಅನುಮತಿ ನೀಡುವಂತೆ ಪಟ್ಟು

ಇನ್ನು ಹಿಂದೂ ಸಂಘಟನೆಗಳು ಯೋಗಾ ದಿನಾಚರಣೆಯ ಸಾಮೂಹಿಕ ಆಚರಣೆಗೆ ಅನುಮತಿಯನ್ನು ಕೇಳಿದ್ದವು. ಆಟದ ಮೈದಾನದಲ್ಲಿ ಯೋಗಾ ದಿನಾಚರಣೆಯನ್ನು ಜೂನ್ 21 ರಂದು ಆಚರಿಸಲಿದ್ದು ಇದಕ್ಕಾಗಿ ಅನುಮತಿಯನ್ನು ಕೇಳಲಾಗಿತ್ತು. ಆದರೆ ಬಿಬಿಎಂಪಿ ಅನುಮತಿಯನ್ನು ನೀಡದೇ ಅನಮತಿಯನ್ನು ನಿರಾಕರಿಸದೇ ಇರುವುದು ಹಿಂದೂ ಸಂಘಟನೆಗಳನ್ನು ಕೆರಳಿಸಿದ್ದೂ ಅನುಮತಿಯನ್ನು ನೀಡುವಂತೆ ಒತ್ತಾಯವನ್ನು ಮಾಡುತ್ತಿದೆ.

 ಸಿಸಿಟಿವಿ ಕಣ್ಗಾವಲು ಹೆಚ್ಚಳ

ಸಿಸಿಟಿವಿ ಕಣ್ಗಾವಲು ಹೆಚ್ಚಳ

ಮೈದಾನದ ಸುತ್ತಮುತ್ತ ಈಗಾಗಲೇ ಪೊಲೀಸ್ ಭದ್ರತೆ ಹೆಚ್ಚಾಗಿದೆ. ಕಾನೂನು ಹೋರಾಟವೂ ನಡೆಯುತ್ತಿರುವ ಕಾರಣ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗುತ್ತಿದೆ. ಜೂನ್ 21ರಂದು ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಯೋಗಾ ದಿನಾಚರಣೆ ಮಾಡಲು ಆಗಮಿಸುವ ಸಾಧ್ಯತೆಗಳಿವೆ. ಪೊಲೀಸರು ಅನುಮತಿ ನಿರಾಕರಿಸಿದರೆ ಪ್ರತಿಭಟನೆಗಳು ನಡೆಯುವ ಸಾಧ್ಯತೆಯಿದ್ದು ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಇದರ ಜೊತೆಗೆ ಮೈದಾನದ ಸುತ್ತಲು ಸಿಸಿಟಿವಿಯನ್ನು ಹಾಕಿರುವುದರಿಂದಾಗಿ ಸಿಸಿಟಿವಿ ಕಣ್ಗಾವಲು ಇರಲಿದೆ.

Recommended Video

      Narendra Modi ಬೆಂಗಳೂರಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದು ಹೀಗೆ | *Politics | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+