ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರ ವಹಿಸಿಕೊಂಡ ಮರುದಿನವೇ ಉಪಮೇಯರ್ ವಿಧಿವಶ

|
Google Oneindia Kannada News

Recommended Video

ರಮೀಳಾ ಉಮಾಶಂಕರ್, ಬೆಂಗಳೂರು ಬಿಬಿಎಂಪಿ ಉಪಮೇಯರ್ ನಿಧನ | Oneindia Kannada

ಬೆಂಗಳೂರು, ಅಕ್ಟೋಬರ್ 05: ದುರಂತ ಎಂದರೆ ಇದೇ ಇರಬೇಕು! ಉಪಮೇಯರ್ ಆಗಿ ಸೆ.28 ರಂದು ಆಯ್ಕೆಯಾಗಿ, ನಂತರ ಅ.3 ರಂದು ಅಧಿಕಾರ ವಹಿಸಿಕೊಂಡ ಮರುದಿನವೇ ರಮೀಳಾ ಉಮಾಶಂಕರ್ ನಿಧನರಾಗಿದ್ದಾರೆ.

ಕೇವಲ 44 ವರ್ಷ ವಯಸ್ಸು, ಸಾಯುವ ವಯಸ್ಸಲ್ಲವೇ ಅಲ್ಲ. ಆದರೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಎದೆನೋವಿನಿಂದಾಗಿ ಅ.04 ರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು.

ಹೃದಯಾಘಾತದಿಂದ ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ನಿಧನಹೃದಯಾಘಾತದಿಂದ ಬಿಬಿಎಂಪಿ ಉಪಮೇಯರ್ ರಮೀಳಾ ಉಮಾಶಂಕರ್ ನಿಧನ

ಉಪಮೇಯರ್ ಅವರ ಅಕಾಲಿಕ ಮರಣಕ್ಕೆ ನೂರಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರ ಅಗಲಿಕೆ ತುಂಬಲಾರದ ನಷ್ಟ ಎಂದಿರುವ ಗಣ್ಯರು, ಉಪಮೇಯರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಅ.3 ರಂದು ಅಧಿಕಾರ ಸ್ವೀಕಾರ, 4 ರಂದು ನಿಧನ!

ಅ.3 ರಂದು ಅಧಿಕಾರ ಸ್ವೀಕಾರ, 4 ರಂದು ನಿಧನ!

ಉಪಮೇಯರ್ ಆದ ಖುಷಿಯಲ್ಲಿದ್ದ ರಮೀಳಾ ಅಕ್ಟೋಬರ್ 3 ರಂದು ತಮ್ಮ ಬಿಬಿಎಂಪಿ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಅಧಿಕಾರ ವಹಿಸಿಕೊಂಡರು. ತಮ್ಮ ಅಧಿಕಾರಾವಧಿಯಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುವ ಇಂಗಿತ ಹೊಂದಿದ್ದ ಅವರು ಮಹತ್ವಾಕಾಂಕ್ಷಿಯೂ ಆಗಿದ್ದರು.

ಉಪಮೇಯರ್ ಸ್ಥಾನ ಗೆದ್ದರೂ, ಸಾವು ಗೆಲ್ಲಲಿಲ್ಲ!

ಉಪಮೇಯರ್ ಸ್ಥಾನ ಗೆದ್ದರೂ, ಸಾವು ಗೆಲ್ಲಲಿಲ್ಲ!

ಜಟಾಪಟಿಯ ನಡುವೆಯೇ ಉಪಮೇಯರ್ ಆಗಿ ಆಯ್ಕೆಯಾದ ರಮೀಳಾ ಉಪಮೇಯರ್ ಸ್ಥಾನ ಗೆದ್ದರಾದರೂ ಸಾವನ್ನು ಗೆಲ್ಲಲಾಗದೆ ಇದ್ದಿದ್ದು ದುರದೃಷ್ಟ. ಕಾವೇರಿಪುರ ವಾರ್ಡ್ ನಿಂದ ಜೆಡಿಎಸ್ ಕಾರ್ಪೋರೇಟರ್ ಆಗಿ 2015 ರಲ್ಲಿ ಆಯ್ಕೆಯಾಗಿದ್ದ ರಮೀಳಾ ಸೆ.28 ರಂದು ಉಪಮೇಯರ್ ಆಗಿ ಆಯ್ಕೆಯಾಗಿದ್ದರು.

ಬೆಂಗಳೂರಿನ 52ನೇ, ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸಂದರ್ಶನಬೆಂಗಳೂರಿನ 52ನೇ, ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸಂದರ್ಶನ

ದಿನಪೂರ್ತಿ ಕಾರ್ಯಕ್ರಮದಲ್ಲೇ ಇದ್ದ ರಮೀಳಾ

ದಿನಪೂರ್ತಿ ಕಾರ್ಯಕ್ರಮದಲ್ಲೇ ಇದ್ದ ರಮೀಳಾ

ಅ.4 ರಂದು ಬೆಳಗ್ಗಿನಿಂದಲೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಜೊತೆಯಲ್ಲೇ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಲವಲವಿಕೆಯಲ್ಲೇ ಇದ್ದರು. ಕೆಲಸದ ಒತ್ತಡವೋ ಅಥವಾ ಆಯಾಸಕ್ಕೋ ರಾತ್ರಿ ಎದೆನೋವು ಎಂದು ಬಳಲುತ್ತಿದ್ದ ಅವರನ್ನು ತಕ್ಷಣವೇ ವೆಸ್ಟ್ ಆಫ್ ಕಾರ್ಡ್ ರೋಡ್ ನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲೇ ನಿಧನರಾದರು.

ಮುಗಿಲುಮುಟ್ಟಿದ ಆಕ್ರಂದನ

ಮುಗಿಲುಮುಟ್ಟಿದ ಆಕ್ರಂದನ

ರಮೀಳಾ ಉಮಾಶಂಕರ್ ಅವರ ಅಕಾಲಿಕ ಮರಣಕ್ಕೆ ಕುಟುಂಬ ವರ್ಗ ತೀವ್ರ ನೋವು ವ್ಯಕ್ತಪಡಿಸಿದ್ದು, ಆಕ್ರಂದನ ಮುಗಿಲುಮುಟ್ಟಿದೆ. ಅವರು ಪತಿ ಉಮಾಶಂಕರ್ ಮತ್ತು ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವಿದ್ದು ಕಾಂಗ್ರೆಸ್ ಮೇಯರ್ ಪಟ್ಟ, ಜೆಡಿಎಸ್ ಉಪ ಮೇಯರ್ ಪಟ್ಟ ಹಂಚಿಕೊಂಡಿವೆ. ಜಯನಗರ ವಾರ್ಡ್ ನ ಗಂಗಾಬಿಕೆ ಮಲ್ಲಿಕಾರ್ಜುನ್ ಮೇಯರ್ ಆಗಿ, ರಮೀಳಾ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದರು.

English summary
Bruhat Bengaluru Mahanagara Palike Deputy Mayor Ramila passes away very next day of taking charge of her office. She died because of heart attack on Oct 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X