ಬಿಬಿಎಂಪಿ ವಾರ್ಡ್‌ ಪುನರ್ ವಿಂಗಡನೆ; ವಿಧಾನಸಭೆವಾರು ಲೆಕ್ಕ

ಬೆಂಗಳೂರು ಜೂನ್ 3: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ಗಳ ಪುನರ್ ವಿಂಗಡಣೆ ಕುರಿತ ವರದಿಯನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆ ಸಲ್ಲಿಸಿದೆ.

ವರದಿಯ ಪ್ರಕಾರ ಬೆಂಗಳೂರು ಹೊರವಲಯದ ವಿಧಾನಸಭೆ ಕ್ಷೇತ್ರಗಳಿಗೆ ಹೆಚ್ಚಿನ ವಾರ್ಡ್‌ಗಳು ಸೇರ್ಪಡೆಯಾಗಿವೆ. ಶಿವಾಜಿನಗರ ವಿಧಾನಸಭೆ ಕ್ಷೇತ್ರಕ್ಕೆ ಮಾತ್ರ ವಾರ್ಡ್‌ಗಳ ಸಂಖ್ಯೆ ಕಡಿಮೆಯಾಗಿದೆ.

ಆದರೆ ಬಿಬಿಎಂಪಿ ಇನ್ನೂ ಈ ವರದಿಯನ್ನು ಅಧಿಕೃತವಾಗಿ ಸಾರ್ವಜನಿಕರಿಗೆ ಬಹಿರಂಗಪಡಿಸಿಲ್ಲ. ಒಂದು ವಾರದಲ್ಲಿ ನಗರಾಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆ ಕುರಿತ ವರದಿ ಪ್ರಕಟವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ಡ್ ಗಳ ಸಂಖ್ಯೆಯಲ್ಲಿ ಏರಿಕೆ

ವಾರ್ಡ್ ಗಳ ಸಂಖ್ಯೆಯಲ್ಲಿ ಏರಿಕೆ

ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ 5 ವಾರ್ಡ್‌ಗಳು ಇತ್ತು. ಪುನರ್ ವಿಂಗಡಣೆ ನಂತರ ವಾರ್ಡ್‌ಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಅದೇ ರೀತಿ ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ 6 ವಾರ್ಡ್‌ಗಳು ಇದ್ದಿದ್ದು, ಈಗ 14 ವಾರ್ಡ್‌ಗಳಿಗೆ ಏರಿಕೆಯಾಗಿದೆ. ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ 4 ವಾರ್ಡ್‌ಗಳು ಇದ್ದಿದ್ದು, ಈಗ 11 ವಾರ್ಡ್‌ಗಳಿಗೆ ಏರಿಕೆಯಾಗಿದೆ. ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ 4 ವಾರ್ಡ್‌ಗಳು ಇದ್ದಿದ್ದು, ಈಗ 13 ವಾರ್ಡ್‌ಗಳಿಗೆ ಏರಿಕೆಯಾಗಿದೆ. ಅದೇ ರೀತಿ ಮಹಾದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ಈ ಹಿಂದೆ 4 ವಾರ್ಡ್‌ಗಳು ಇದ್ದಿದ್ದು, ಈಗ 12 ವಾರ್ಡ್‌ಗಳಿಗೆ ಏರಿಕೆಯಾಗಿದೆ.

ಆರಕ್ಕೆ ಇಳಿದ ಶಿವಾಜಿನಗರ ವಾರ್ಡ್‌ಗಳು

ಆರಕ್ಕೆ ಇಳಿದ ಶಿವಾಜಿನಗರ ವಾರ್ಡ್‌ಗಳು

ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಗೋವಿಂದರಾಜನಗರ, ಜಯನಗರ, ಹೆಬ್ಬಾಳ, ಪುಲಕೇಶಿನಗರ, ರಾಜಾಜಿನಗರ ಮತ್ತು ಶಾಂತಿನಗರ ವಿಧಾನಸಭೆ ಕ್ಷೇತ್ರಗಳಲ್ಲಿ ವಾರ್ಡ್‌ಗಳ ಸಂಖ್ಯೆ ಯಥಾಸ್ಥಿತಿಯಲ್ಲಿ ಉಳಿಯಲಿವೆ. ಶಿವಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ವಾರ್ಡ್‌ಗಳ ಸಂಖ್ಯೆ ಆರಕ್ಕೆ ಇಳಿಯಲಿದೆ. ಯಲಹಂಕ, ವಿಜಯನಗರ, ಪದ್ಮನಾಭನಗರ ಮತ್ತು ಬಸವನಗುಡಿ ವಿಧಾನಸಭೆ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ ಒಂದು ವಾರ್ಡ್ ಸೇರ್ಪಡೆಯಾಗಲಿದೆ.

2011 ರ ಜನಗಣತಿಯ ಆಧಾರದಲ್ಲಿ ವಿಂಗಡಣೆ

2011 ರ ಜನಗಣತಿಯ ಆಧಾರದಲ್ಲಿ ವಿಂಗಡಣೆ

"2011ರ ಜನಗಣತಿಯ ಆಧಾರದಲ್ಲಿ ವಾರ್ಡ್‌ ಪುನರ್ ವಿಂಗಡಣೆ ಕಾರ್ಯ ಕೈಗೊಳ್ಳಲಾಗಿದೆ. ಪ್ರತಿಯೊಂದು ವಾರ್ಡ್ ನಲ್ಲಿ ಜನಸಂಖ್ಯೆ ಸುಮಾರು 34,750 ಇರುವಂತೆ ವಾರ್ಡ್‌ಗಳನ್ನು ಪುನರ್ ವಿಂಗಡಣೆ ಮಾಡಲಾಗಿದೆ ಎಂದು ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆ ಕಾರ್ಯದಲ್ಲಿ ನಿರತರಾಗಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಜನಪ್ರತಿನಿಧಿಗಳಿಂದ ಅಪಸ್ವರ ಸಾಧ್ಯತೆ

ಜನಪ್ರತಿನಿಧಿಗಳಿಂದ ಅಪಸ್ವರ ಸಾಧ್ಯತೆ

ವಾರ್ಡ್‌ಪುನರ್ ವಿಂಗಡಣೆ ಕುರಿತು ಜನಪ್ರತಿನಿಧಿಗಳಿಂದ ಅಪಸ್ವರ ಕೇಳಿ ಬರುವ ಸಾಧ್ಯತೆ ಇದೆ. ಮುಖ್ಯವಾಗಿ ವಾರ್ಡ್‌ಗಳ ಸಂಖ್ಯೆ ಕಡಿಮೆಯಾಗಿರುವ ಶಿವಾಜಿನಗರ ವಿಧಾನಸಭೆ ಕ್ಷೇತ್ರದ ಜನಪ್ರತಿನಿಧಿಗಳು ತಕರಾರು ತೆಗೆಯುವ ಸಾಧ್ಯತೆ ದಟ್ಟವಾಗಿದೆ. 243 ವಾರ್ಡ್‌ಗಳ ಗಡಿಯನ್ನು ಗುರುತಿಸಲು 2021 ರ ಜನವರಿಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಈ ಕುರಿತು ವರದಿ ಸಲ್ಲಿಸಲು ಕಳೆದ ಒಂದೂವರೆ ವರ್ಷದಲ್ಲಿ ಮೂರು ಬಾರಿ ಗಡುವು ವಿಸ್ತರಿಸಲಾಯಿತು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಆದಷ್ಟು ಬೇಗ ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆ ವರದಿಯನ್ನು ಸಲ್ಲಿಸುವಂತೆ ಪಾಲಿಕೆಗೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿ ಎರಡು ವಾರಗಳ ಹಿಂದೆ ಪತ್ರ ಬರೆಯಲಾಗಿತ್ತು.

ಆಕ್ಷೇಪಣೆ ಸಲ್ಲಿಸಲು ಆಹ್ವಾನದ ನಿರೀಕ್ಷೆ

ಆಕ್ಷೇಪಣೆ ಸಲ್ಲಿಸಲು ಆಹ್ವಾನದ ನಿರೀಕ್ಷೆ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರ ನೇತೃತ್ವದಲ್ಲಿ ರಚನೆಯಾಗಿರುವ ಪುನರ್‌ ವಿಂಗಡಣೆ ಸಮಿತಿಯು, 2021 ರ ಜನವರಿಯಲ್ಲಿ ಜಾರಿಯಾಗಿರುವ ನೂತನ ಬಿಬಿಎಂಪಿ ಕಾಯ್ದೆಯ ಪ್ರಕಾರ ಈಗಿರುವ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಿದೆ. ಈ ಕಾರ್ಯಕ್ಕೆ ಸಮಿತಿಯು ಒಂದೂವರೆ ವರ್ಷದಲ್ಲಿ ಮೂರು ಬಾರಿ ದಿನಾಂಕದ ವಿಸ್ತರಣೆ ಕೋರಿತ್ತು. ಆಕ್ಷೇಪಣೆ ಸಲ್ಲಿಸಲು ಅನುವಾಗುವಂತೆ ಈ ಪುನರ್‌ ವಿಂಗಡಣೆ ವರದಿಯನ್ನು ಸರಕಾರವು ಸಾರ್ವಜನಿಕರ ಅವಗಾಹನೆಗೆ ತರುವ ನಿರೀಕ್ಷೆ ಇದೆ.

ವಾರ್ಡ್‌ಗಳ ಪುನರ್‌ ವಿಂಗಡಣೆಯ ಮುಖ್ಯ ಅಂಶಗಳು

ವಾರ್ಡ್‌ಗಳ ಪುನರ್‌ ವಿಂಗಡಣೆಯ ಮುಖ್ಯ ಅಂಶಗಳು

* 2011ರ ಜನಗಣತಿ ಆಧಾರದಲ್ಲಿ ವಾರ್ಡ್‌ಗಳ ಪುನರ್‌ ವಿಂಗಡಣೆ.
* ಪ್ರತಿ ವಾರ್ಡ್ ಜನಸಂಖ್ಯೆ ಪ್ರಾಯೋಗಿಕವಾಗಿ ಬೆಂಗಳೂರಿನಾದ್ಯಂತ ಒಂದೇ ರೀತಿ ಇರುವಂತೆ ನೋಡಿಕೊಳ್ಳಲಾಗಿದೆ.
* ಶಾಸಕರ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ಡ್‌ಗಳನ್ನು ವಿಭಜಿಸುವುದು. ಯಾವುದೇ ವಾರ್ಡ್ ಎರಡು ಕ್ಷೇತ್ರಗಳಲ್ಲಿ ವ್ಯಾಪಿಸದಂತೆ ನೋಡಿಕೊಂಡಿರುವುದು.

Recommended Video

      ಪಂಜಾಬ್ ಕಿಂಗ್ಸ್ ಬೌಲರ್ ಗೆ ಟೀಮ್ ಇಂಡಿಯಾದಲ್ಲಿ ಅವಕಾಶ | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+