ಬೆಂಗಳೂರು: ವಿದೇಶಿ ಪ್ರಯಾಣಿಕರಿಗೆ 7ದಿನ ಕ್ವಾರಂಟೈನ್ ಕಡ್ಡಾಯಕ್ಕೆ ಬಿಬಿಎಂಪಿ ನಿರ್ಧಾರ
ಬೆಂಗಳೂರು, ಜನವರಿ 01: ಕೊರೊನಾ ತೀವ್ರವಾಗಿ ಉಲ್ಬಣಗೊಂಡ ವಿವಿಧ ದೇಶಗಳಿಂದ ಬರುವವರಿಗೆ ಬೆಂಗಳೂರಿನಲ್ಲಿ ಕ್ವಾರಂಟೈನ್ ಕಡ್ಡಾಯ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.
ಹೌದು, ಹಾಂಗ್ಕಾಂಗ್, ಸಿಂಗಾಪುರ, ಚೀನಾ, ಜಪಾನ್, ಥೈಲ್ಯಾಂಡ್, ದಕ್ಷಿಣ ಕೊರಿಯಾ ಸೇರಿದಂತೆ ಕೊರೊನಾ ವ್ಯಾಪಿಸಿರುವ ಹೈರಿಸ್ಕ್ ದೇಶದಿಂದ ಬರುವ ಪ್ರಯಾಣಿಕರಿಗೆ 7 ದಿನ ಕ್ವಾರಂಟೈನ್ ಮಾಡಲಾಗುವುದು. ಈ ಕ್ವಾರಂಟೈನ್‌ಗೆ ಒಳಪಡುವ ಸೋಂಕಿತರು ತಾವು ಉಳಿದುಕೊಳ್ಳುವ ಹೋಟೆಲ್ನ ವಾಸ್ತವ್ಯ ವೆಚ್ಚ ತಾವೇ ಭರಿಸಬೇಕು. ಮನೆಯಲ್ಲಿ ಕ್ವಾರಂಟೈನ್ ಆಗುವವರ ಮೇಲೆ ಬಿಬಿಎಂಪಿ ನಿಗಾ ಇಡಲಿದೆ ಎಂದು ತಿಳಿಸಿದೆ.
ವಿದೇಶದಿಂದ ಬರುವವರಿಗೆ ಕೋವಿಡ್ ತಪಾಸಣೆ ವೇಳೆ ಸೋಂಕು ದೃಢಪಟ್ಟರೆ ಕ್ವಾರಂಟೈನ್ ಕಡ್ಡಾಯ ಮಾಡುವ ಜೊತೆಗೆ ಸೋಂಕಿತರ ಮಾದರಿಯನ್ನು ಜಿನೋಮಿಕ್ ಸಿಕ್ವೆನ್ಸ್ ಲಾಬ್‌ಗೆ ಪರೀಕ್ಷೆಗೆ ಕಲುಹಿಸುವುದಕ್ಕೆ ನಿರ್ಧರಿಸಲಾಗಿದೆ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಅಭಾವ ಸೃಷ್ಟಿಯಾಗಿದ್ದ ಕಾರಣ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ.

ದೇಶಾದ್ಯಂತ ಕೊರೊನಾ ಅಲೆ ಕ್ರಮೇಣ ಆವರಿಸುತ್ತಿದೆ. ಸೋಂಕು ವಿಸ್ತರಣೆ, ಪಾಸಿಟಿವ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿವೆ.
ಹೀಗಾಗಿ ಜನರು ಬೂಸ್ಟರ್ ಡೋಸ್ ಪಡೆಯಲು ಮುಂದಾಗಿದ್ದಾರೆ. ಕೊರೊನಾ ಭೀತಿ ಸಂಪೂರ್ಣವಾಗಿ ತಗ್ಗಿದೆ ಎಂದು ಭಾವಿಸಿದ್ದ ಜನರು ಕೋವಿಡ್ ಮೂರನೇ ಡೋಸ್ ಪಡೆಯಲು ಆಸಕ್ತಿ ತೋರಿರಲಿಲ್ಲ. ಖಾಸಗಿ ಆಸ್ಪತ್ರೆಯೊಂದರಲ್ಲಿ ಪ್ರತಿ ದಿನ ಸುಮಾರು 50ರಿಂದ 100 ಮಂದಿ ಲಸಿಕೆ ಪಡೆಯುತ್ತಿದ್ದ, ಖಾಸಗಿ ಆಸ್ಪತ್ರೆಗಳಲ್ಲಿ 10,000 ಸಾವಿರ ಲಸಿಕೆಗಳು ಲಭ್ಯವಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ..

ಕೊರೊನಾ ಓಮಿಕ್ರಾನ್ ಉಪತಳಿ ಬಿಎಫ್.7 ಆತಂಕ ಹೆಚ್ಚಾಗುತ್ತಿದೆ. ಈವರೆಗೆ ಇಷ್ಟು ದಿನ ಕೇವಲ ಶೇ. 21ರಷ್ಟು ಮಂದಿ ಬೂಸ್ಟರ್ ಡೋಸ್ ಪಡೆದಿದ್ದಾರೆ. ಈ ಮೊದಲು ಕೋವಿಶೀಲ್ಡ್ ಲಸಿಕೆ ಹೆಚ್ಚು ಪಡೆದಿದ್ದರಿಂದ ಈಗಲೂ ಸಹ ಕೋವಿಶೀಲ್ಡ್ ಗೆ ಹೆಚ್ಚು ಬೇಡಿಕೆ ಇದೆ. ಅರ್ಹರು ಕೋವಿಡ್ ಮೂರನೇ ಡೋಸ್ ಲಸಿಕೆ ಪಡೆಯಿರಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.












Click it and Unblock the Notifications