ಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡ
ಬೆಂಗಳೂರು, ಆಗಸ್ಟ್ 6: ಮರ ಹಾಗೂ ಗೋಡೆ ಮೇಲೆ ಭಿತ್ತಪತ್ರ ಅಂಟಿಸುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ಅಂತವರಿಗೆ 1 ಲಕ್ಷ ರೂ. ದಂಡ ವಿಧಿಸಲು ಚಿಂತನೆ ನಡೆಸಿದೆ.
ಅಕ್ರಮವಾಗಿ ಎಲ್ಲೆಂದರಲ್ಲಿ ಇನ್ನುಮುಂದೆ ಭಿತ್ತಿಪತ್ರಗಳನ್ನು ಅಂಟಿಸುವಂತಿಲ್ಲ, ಭಿತ್ತಿಪತ್ರ ಅಂಟಿಸಿದರೆ ಬೀಳಲಿದೆ ಭಾರಿ ಪ್ರಮಾಣದ ದಂಡ, ಮರಕ್ಕೆ ಸೀರಿಯಲ್ ಸೆಟ್ ಹಾಕಿದರೂ ದಂಡಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಕ್ರಿಮಿನಲ್ ಮೊಕದ್ದಮೆ ಕೂಡ ದಾಖಲಿಸಲಾಗುತ್ತದೆ.
ಮರ ಹಾಗೂ ಗೋಡೆಗಳ ಮೇಲೆ ಅಕ್ರಮವಾಗಿ ಭಿತ್ತಿಪತ್ರಗಳನ್ನು ಅಂಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಬಿಬಿಎಂಪಿ ಕೊನೆಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಮುಂದಾಗಿದೆ.

ಇತ್ತೀಚೆಗೆ ಅಕ್ರಮ ಫ್ಲೆಕ್ಸ್ ಹಾಗೂ ಹೋರ್ಡಿಂಗ್‌ಗಳ ವಿರುದ್ಧ ಹೈಕೋರ್ಟ್ ಸಮರ ಸಾರಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ನಗರದ ಎಲ್ಲೆಡೆ ಅಕ್ರಮ ಫ್ಲೆಕ್ಸ್ ಹಾಗೂ ಹೋರ್ಡಿಂಗ್ ತೆರವುಗೊಳಿಸಲು ಮುಂದಾಗಿತ್ತು.
ಇದೀಗ ನಗರದಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ಜಾಹೀರಾತು ಕಂಪನಿಗಳು ಹಾಗೂ ಖಾಸಗಿ ಸಂಸ್ಥೆ, ವಾಣಿಜ್ಯ ಹಾಗೂ ಧಾಂಇFಕ ಭಿತ್ತಿಪತ್ರಗಳನ್ನು ಪಾಲಿಕೆಯ ನಿಯಮ ಪಾಲಿಸದೆ ಅಂಟಿಸುತ್ತಿರುವುದರ ವಿರುದ್ಧ ಕ್ರಮಕ್ಕೆ ಮುಮದಾಗಿದೆ.












Click it and Unblock the Notifications