ಬಿಬಿಎಂಪಿ ಬಜೆಟ್ ಗಾತ್ರ ಕಡಿತ, ಕಾರಣವೇನು?

ಬೆಂಗಳೂರು, ಜೂನ್ 25: ಕಳೆದ ವರ್ಷಕ್ಕಿಂತ ಈ ಬಾರಿ ಬಿಬಿಎಂಪಿ ಬಜೆಟ್ ಗಾತ್ರವನ್ನು ಕಡಿತಗೊಳಿಸಲಾಗಿದೆ.

ವಾರ್ಡ್, ಒಂಟಿ ಮನೆ ಹಾಗೂ ವಿಧಾನಸಭಾ ಕ್ಷೇತ್ರವಾರು ಅನುದಾನ, ಉದ್ಯಾನ ಅಭಿವೃದ್ಧಿ , ತ್ಯಾಜ್ಯ ವಿಲೇವಾರಿ ಅನುದಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಮೀಸಲಿರಿಸಿದ್ದ ಅನುದಾನ ಕಡಿತಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.

ಮುಂಬರುವ ವರ್ಷದ ಬಿಬಿಎಂಪಿ ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು 2019-20ನೇ ಸಾಲಿಗೆ 12,958 ಕೋಟಿ ಬೇಹರ್ ಗಾತ್ರದ ಬಜೆಟ್ ಮಂಡಿಸಿತ್ತು. ಆದರೆ ನಗರಾಭಿವೃದ್ಧಿ ಇಲಾಖೆ 1,308.89 ಕೋಟಿ ಕಡಿತಗೊಳಿಸಿ, 11,648.90 ಕೋಟಿಗೆ ಅನುಮೋದನೆ ನೀಡಲಾಗಿತ್ತು.

Bbmp cut down its budget as per state government instruction

ಕಾಂಗ್ರೆಸ್ ಸದಸ್ಯರಿರುವ ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗಿರುವ ಅನುದಾನ ತಡೆಹಿಡಿಯಲಾಗಿದೆ. ಬಿಜೆಪಿಯ 14, ಜೆಡಿಎಸ್‌ನ 4 ಮತ್ತು ಇಬ್ಬರು ಪಕ್ಷೇತರ ಸದಸ್ಯರು ಪ್ರತಿನಿಧಿಸುವ ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿಗೆ ಮೀಸಲಿಟ್ಟ ಅನುದಾನವನ್ನು ಕಡಿತಗೊಳಿಸಲಾಗಿದೆ.

ಅದರಂತೆ, ಇದೀಗ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಿಂದೆ ಮಂಡಿಸಿದ್ದ ಬಜೆಟ್‌ನಲ್ಲಿ ವಾರ್ಡ್‌, ವಿಧಾನಸಭಾ ಕ್ಷೇತ್ರವಾರು ಅನುದಾನ, ಉದ್ಯಾನಗಳ ಅಭಿವೃದ್ಧಿ, ಘನತ್ಯಾಜ್ಯ ವಿಲೇವಾರಿ ಘಟಕ ಸುತ್ತಲಿನ ಹಳ್ಳಿಗಳ ಅಭಿವೃದ್ಧಿ, ತ್ಯಾಜ್ಯ ವಲೇವಾರಿಗೆ ನಿಗದಿ ಮಾಡಲಾಗಿರುವ ಹೊಸ ಕ್ವಾರಿಗಳ ಅಭಿವೃದ್ಧಿ, ಪೌರಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ ಸೇರಿದಮತೆ ಒಟ್ಟು 1308.89 ಕೋಟಿ ಅನುದಾನ ಕಡಿತಗೊಳಿಸಿ 11,648.90 ಕೋಟಿಗೆ ಬಜೆಟ್ ಸಿದ್ಧಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+