ಫೆಬ್ರವರಿ 18ಕ್ಕೆ ಬಿಬಿಎಂಪಿ ಬಜೆಟ್, ಈ ಬಾರಿ ವಾಸ್ತವಿಕ ಬಜೆಟ್ ಮಂಡನೆ
ಬೆಂಗಳೂರು, ಫೆಬ್ರವರಿ 11: ಲೋಕಸಭೆ ಚುನಾವಣೆ ಘೋಷಣೆ ಸಮೀಪದಲ್ಲಿರುವ ಕಾರಣ ಬಿಬಿಎಂಪಿಯು ಸ್ವಲ್ಪ ಮುಂಚಿತವಾಗಿಯೇ ಬಜೆಟ್ ಮಂಡಿಸಲು ಹೊರಟಿದ್ದು, ಫೆಬ್ರವರಿ 18 ರಂದು ಬಜೆಟ್ ಮಂಡನೆಗೆ ದಿನಾಂಕ ನಿಗದಿ ಮಾಡಿಕೊಂಡಿದೆ.
ಈ ಮೊದಲು ಫೆಬ್ರವರಿ 15 ರಂದು ಬಜೆಟ್ ಮಂಡಿಸಲಾಗುತ್ತದೆ ಎನ್ನಲಾಗಿತ್ತು. ಆದರೆ ಫೆಬ್ರವರಿ 18 ಕ್ಕೆ ಬಜೆಟ್ ಮಂಡಿಸಲಾಗುವುದು ಎಂಬ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ.
ಈ ಬಾರಿ ಬಿಬಿಎಂಪಿ ಬಜೆಟ್ ಗಾತ್ರ 15000 ಕೋಟಿ ಆಗಿರಲಿದೆ ಎನ್ನಲಾಗಿದೆ. ಈ ಬಾರಿ ವಾಸ್ತವಿಕ ಬಜೆಟ್ ಮಂಡಿಸಲಾಗುವುದು ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಹೇಳಿದ್ದಾರೆ.

ಬಿಬಿಎಂಪಿ ಬಜೆಟ್ ಕುರಿತು ಸಲಹೆಗಳಿಗೆಂದು ಇಂದು ಮಾಧ್ಯಮವರೊಂದಿಗೆ ಸಭೆ ನಡೆಸಲಾಗಿದ್ದು, ಈಗಾಗಲೇ ನಗರದ ಪ್ರಮುಖ ಸಂಘಟನೆಗಳು, ಆರ್ಥಿಕ ತಜ್ಞರು, ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಮಂಡಿಸಿದ್ದ ಬಜೆಟ್ ನಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು, ಅದರ ಜೊತೆಗೆ ಬಿಬಿಎಂಪಿಯ ಬಜೆಟ್ ಬೆಂಗಳೂರನ್ನು ಇನ್ನಷ್ಟು ಉತ್ತಮಗೊಳಿಸಲಿದೆ ಎಂದು ಹೇಮಲತಾ ಗೋಪಾಲಯ್ಯ ಹೇಳಿದ್ದಾರೆ.











Click it and Unblock the Notifications