BBMP ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ

ಬೆಂಗಳೂರು, ಮಾರ್ಚ್‌ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್‌ 07 ರಂದು ರಾಜ್ಯ ಬಜೆಟ್‌ ಮಂಡನೆ ಮಾಡಿದ ಬೆನ್ನಲೇ ರಾಜ್ಯ ಸರ್ಕಾರದ ಬಜೆಟ್‌ ಮೂಲಕ ಅನುದಾನ, ಭರಪೂರ ಕೊಡುಗೆ ಪಡೆದಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ 2025-26ನೇ ಸಾಲಿನ ಅಯವ್ಯಯವನ್ನು ಮಂಡಿಸಲು ಸಿದ್ದತೆ ನಡೆಸಿದೆ. ಬಿಬಿಎಂಪಿಯೂ ಈ ಬಾರಿ ಅಂದಾಜು 18,000 ಕೋಟಿ ರೂ.ಗಾತ್ರದ ಬಜೆಟ್ ಮಂಡಿಸೋ ಸಾಧ್ಯತೆ ಇದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 2025-26ರ ಬಜೆಟ್ 18,000 ಕೋಟಿ ರೂ.ಗಳನ್ನು ತಲುಪುವ ನಿರೀಕ್ಷೆಯಿದೆ. ಸ್ವಂತ ಸಂಪನ್ಮೂಲವನ್ನೇ ನೆಚ್ಚಿಕೊಂಡು ಮಾರ್ಚ್ 20 ಅಥವಾ 21 ರಂದು ಅಯವ್ಯಯ ಮಂಡನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಮಾರ್ಚ್ 30 ಮತ್ತು 31ರಂದು ಸರ್ಕಾರಿ ರಜೆ ಇರುವುದರಿಂದ ಮಾರ್ಚ್ 29ರೊಳಗೆ ಬಿಬಿಎಂಪಿ ಬಜೆಟ್‌ಗೆ ಸರ್ಕಾರದಿಂದ ಅನುಮೋದನೆ ದೊರೆಯಬೇಕಿದೆ. ಹೀಗಾಗಿ, ಮಾರ್ಚ್ 20 ಅಥವಾ 21ರಂದು ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ ಎಂದು ತಿಳಿದು ಬಂದಿದೆ.

BBMP budget likely to be presented on March 20

ಇನ್ನೂ ಸತತ 5 ನೇ ವರ್ಷವೂ ಅಧಿಕಾರಿಗಳೇ ಆಯವ್ಯಯ ಮಂಡಿಸಲಿದ್ದಾರೆ. ಬಿಬಿಎಂಪಿ ಬಜೆಟ್ ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ವಿಶೇಷ ಅನುದಾನ ಮೀಸಲಿಡಲಾಗುತ್ತದೆ. ರಾಜ್ಯ ಬಜೆಟ್‌ನಿಂದ ನಾಲ್ಕು ಸಾವಿರ ಕೋಟಿ ಅಧಿಕ ಅನುದಾನವನ್ನು 2025-26ನೇ ಸಾಲಿನಿಂದ ಪಡೆಯಲಿರುವ ಬಿಬಿಎಂಪಿ, ಅದನ್ನು ಯಾವ ಯೋಜನೆಗಳಿಗೆ ವಿನಿಯೋಗಿಸಲಿದೆ, ₹19 ಸಾವಿರ ಕೋಟಿ ಖಾತರಿ ಪಡೆದಿರುವ ಸುರಂಗ ರಸ್ತೆ ಯೋಜನೆಯ ಅನುಷ್ಠಾನದ ವಿಧಾನ ಹೇಗೆ ಎಂಬ ಮಾಹಿತಿ ಬಿಬಿಎಂಪಿಯ 2025-26ನೇ ಸಾಲಿನ ಬಜೆಟ್‌ ಸ್ಪಷ್ಟಪಡಿಸಲಿದೆ. ಹೀಗಾಗಿ, ಬಿಬಿಎಂಪಿ ಬಜೆಟ್ ಸುಮಾರು ₹18 ಸಾವಿರ ಕೋಟಿಗಿಂತ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ರಾಜ್ಯ ಸರ್ಕಾರದಿಂದ ಆರ್ಥಿಕ ಬಲ ಪಡೆದಿರುವ ಬಿಬಿಎಂಪಿ, ನಗರದ ಜನರಿಗೆ ಪ್ರಿಯವಾದ ಬಜೆಟ್ ಮಂಡಿಸುವ ಆಶಯ ಹೊಂದಿದೆ ಎಂದು ಮೂಲಗಳು ತಿಳಿಸಿದ್ದು, ಡಿಪಿಆರ್ ಸಿದ್ಧವಿದ್ದರೂ ಸುರಂಗ ರಸ್ತೆಯ ಉತ್ತರ-ದಕ್ಷಿಣ ಕಾರಿಡಾರ್‌ಗೆ ಟೆಂಡ‌ರ್ ಕರೆಯುವ ಪ್ರಕ್ರಿಯೆ ನಾಲ್ಕಾರು ತಿಂಗಳಿಂದ ಮುಂದೂಡಲಾಗುತ್ತದೆ. ಈಗ ಬಜೆಟ್ ನಂತರವೇ ಟೆಂಡ‌ರ್ ಪ್ರಕ್ರಿಯೆ ಆರಂಭವಾಗಲಿದೆ. ಬೃಹತ್ ಯೋಜನೆಗಳಿಗೆ ಅನುಷ್ಠಾನ ಹಾಗೂ ನಿರ್ವಹಣೆಗೆ 'ವಿಶೇಷ ಉದ್ದೇಶಿತ ಸಂಸ್ಥೆ' (ಎಸ್‌ಪಿವಿ) ಸ್ಥಾಪಿಸುವುದಾಗಿ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಾಗಿ, ಯಾವ ಯೋಜನೆಗಳು ಎಸ್‌ಪಿವಿ ಅಡಿಯಲ್ಲಿ ನಿರ್ವಹಣೆಯಾಗಲಿವೆ, ಎಸ್‌ಪಿವಿಯ ಕಾರ್ಯವಿಧಾನವನ್ನೂ ಬಿಬಿಎಂಪಿ ಬಜೆಟ್ ನಿರ್ಧರಿಸಲಿದೆ.

ಇನ್ನೂ ಬಿಬಿಎಂಪಿ ಬಜೆಟ್‌ ಕುರಿತು ಬಿಬಿಎಂಪಿ ಹಣಕಾಸು ವಿಭಾಗ ವಿಶೇಷ ಆಯುಕ್ತ ಹರೀಶ್ ಕುಮಾ‌ರ್ ಮಾತನಾಡಿ, ಬಿಬಿಎಂಪಿ ಬಜೆಟ್‌ಗೆ ತಯಾರಿ ಅಂತಿಮ ಹಂತದಲ್ಲಿದ್ದು, ಇದಕ್ಕೆ ಸಂಬಂಧಿಸಿದಂತೆ ನಗರದ ಸಚಿವರು ಹಾಗೂ ಶಾಸಕರೊಂದಿಗೆ ಈ ವಾರದಲ್ಲಿ ಮಾತುಕತೆ ನಡೆಸಲಾಗುತ್ತದೆ. ನಾಗರಿಕರಿಂದಲೂ ಈಗಾಗಲೇ ಸಲಹೆಗಳನ್ನು ಸ್ವೀಕರಿಸಲಾಗಿದೆ. ನಗರದಲ್ಲಿ ಮುಂದಿನ ವರ್ಷ ಕೈಗೊಳ್ಳುವ ಯೋಜನೆಗಳಿಗೆ ಸ್ವರೂಪ ಸೇರಿದಂತೆ ಅನುಷ್ಠಾನದ ವಿವರಗಳನ್ನೂ ಒಳಗೊಂಡಿರುವ ವಾಸ್ತವ ಬಜೆಟ್ ಮಂಡನೆಯಾಗಲಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+