ಚೀನಾ ಮಾದರಿಯಲ್ಲಿ ಬೆಂಗಳೂರಿನಲ್ಲೂ ಮನೆಗೆ ಅಮಾನುಷ ಸೀಲ್‌ಡೌನ್
ಬೆಂಗಳೂರು, ಜುಲೈ 23: ಕೊರೊನಾ ವೈರಸ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಹಾಗೂ ಸೀಲ್ ಡೌನ್ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿರುವ ಬಿಬಿಎಂಪಿ ಅಮಾನವೀಯವಾಗಿ ಹೊಸ ರೀತಿಯ ಲಾಕ್‌ಡೌನ್ ಮೊರೆ ಹೋಗಿದೆ.
Recommended Video
ಪ್ರಜಾತಂತ್ರ ರಾಷ್ಟ್ರವಾಗಿರುವ ಭಾರತದಲ್ಲಿ ಸ್ವಾತಂತ್ರ್ಯದ ಹರಣವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕೊವಿಡ್ ಸೋಂಕಿತರು ಇರುವ ಪ್ರದೇಶ ಅಥವಾ ಮನೆಯ ಕಾಂಪೌಂಡ್‌ಗೆ ಬ್ಯಾರಿಕೇಡ್‌ಗಳನ್ನು ಹಾಕಿ ಸೀಲ್‌ಡೌನ್ ಮಾಡಿರುವುದನ್ನು ನೋಡಿದ್ದೇವೆ.
ಆದರೆ ಮೊದಲ ಬಾರಿಗೆ ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರ ಮನೆಯಯ ಬಾಗಿಲಿಗೆ ತಗಡಿನ ಶೀಟ್‌ಗಳನ್ನು ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಎಂತಾ ತುರ್ತು ಪರಿಸ್ಥಿತಿಯಿದ್ದರೂ ಮನೆಯವರು ಹೊರಗೆ ಬರುವಂತಿಲ್ಲ. ಬಿಬಿಎಂಪಿಯ ಈ ಅಮಾನವೀಯ ನಡವಳಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದು ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಮಹಿಳೆ ವಾಸವಿದ್ದಾರೆ. ಮತ್ತೊಂದು ಮನೆಯಲ್ಲಿ ವೃದ್ಧ ದಂಪತಿಯಿದ್ದಾರೆ. ಮನೆಯಲ್ಲಿ ಒಂದೊಮ್ಮೆ ಅಗ್ನಿ ಅವಘಡಗಳು ಸಂಭವಿಸಿದರೆ ಅವರು ಮನೆಯಿಂದ ಹೊರಬರಲಾರದೆ ಅಲ್ಲಿಯೇ ಉಸಿರುಕಟ್ಟಿ ಸಾಯುವಂತಹ ಪರಿಸ್ಥಿತಿಗೆ ಅವರನ್ನು ತಳ್ಳಿದ್ದಾರೆ.
ಚೀನಾದಲ್ಲೂ ಇಂತಹ ಅಮಾನುಷ ಘಟನೆಗಳು ನಡೆದಿತ್ತು, ಪ್ರತಿ ಅಪಾರ್ಟ್‌ಮೆಂಟ್ ನ ಬಾಗಿಲುಗಳನ್ನೇ ಸೀಲ್‌ಡೌನ್ ಮಾಡಿ ಅಗತ್ಯ ವಸ್ತುಗಳು ಬೇಕಿದ್ದರೆ ಅಲ್ಲಿಯೇ ಇದ್ದ ಕಾರ್ಯಕರ್ತರು ತಂದುಕೊಂಡುವಂತಹ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಭಾರತವು ಚೀನಾ ರೀತಿಯಲ್ಲಿ ಸರ್ವಾಧಿಕಾರ ಹೊಂದಿರುವ ದೇಶವಲ್ಲ ಇದು ಪ್ರಜೆಗಳಿಂದ ನಡೆಯುವ ದೇಶವಾಗಿದ್ದು, ಪ್ರಜೆಗಳ ಹಕ್ಕಿಗೆ ದಕ್ಕೆಯುಂಟಾದಂತಾಗಿದೆ.











Click it and Unblock the Notifications