ಬಸವನಗುಡಿ, ಜಯನಗರ ಅಂಚೆ ಕಚೇರಿ ಭಾನುವಾರವೂ ತೆರೆದಿರುತ್ತೆ

ಬೆಂಗಳೂರು, ಅಕ್ಟೋಬರ್ 27 : ಭಾನುವಾರ ಅಂಚೆ ಕಚೇರಿ ಕೆಲಸಗಳು ಆಗುವುದಿಲ್ಲ ಎಂದು ದೂರುವ ಜನರಿಗೆ ಸಿಹಿ ಸುದ್ದಿ. ಬೆಂಗಳೂರಿನ ಬಸವನಗುಡಿ ಮತ್ತು ಜಯನಗರ ಮುಖ್ಯ ಅಂಚೆ ಕಚೇರಿಗಳು ಇನ್ನು ಮುಂದೆ ಭಾನುವಾರವೂ ಕಾರ್ಯ ನಿರ್ವಹಿಸಲಿವೆ.

ಬಸವನಗುಡಿ ಮತ್ತು ಜಯನಗರ ಮುಖ್ಯ ಅಂಚೆ ಕಚೇರಿಗಳು ನವೆಂಬರ್ 1 ರಿಂದ ಜಾರಿಗೆ ಬರುವಂತೆ ಭಾನುವಾರ ಸೇರಿದಂತೆ ಎಲ್ಲ ರಜಾ ದಿನಗಳಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ತನಕ ತೆರೆದಿರುತ್ತವೆ. ನೋಂದಾಯಿತ ಅಂಚೆ, ಸ್ಪೀಡ್ ಪೋಸ್ಟ್ ಮತ್ತು ಪಾರ್ಸಲ್ ಸೇವೆಗಳು ಕಾರ್ಯನಿರ್ವಹಣೆ ಮಾಡಲಿವೆ. [ಅಂಚೆ ಕಚೇರಿಯಲ್ಲಿಯೂ ಎಟಿಎಂ ಸೌಲಭ್ಯ]

post office

ನೋಂದಾಯಿತ ಅಂಚೆ, ಸ್ಪೀಡ್ ಪೋಸ್ಟ್ ಮತ್ತು ಪಾರ್ಸಲ್‍ಗಳನ್ನು ಅಂಚೆ ಕಚೇರಿಗಳಲ್ಲಿ ರಜಾ ದಿನಗಳಂದು ಬೆಳಗ್ಗೆ 10 ರಿಂದ 4 ಗಂಟೆವರೆಗೆ ಕಳುಹಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಬಸವನಗುಡಿ ಮುಖ್ಯ ಅಂಚೆ ಕಚೇರಿ 080- 26612250 ಮತ್ತು ಜಯನಗರ ಮುಖ್ಯ ಅಂಚೆ ಕಚೇರಿ 080-22440303 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ. [ದೇವರಿಗೆ ಪತ್ರ ಕಳಿಸಿ ಅಂಚೆ ಕಚೇರಿ ವಿಳಾಸ ಇಲ್ಲಿದೆ]

ಮೇಯರ್ ವಿರುದ್ಧ ದೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮಂಜುನಾಥ ರೆಡ್ಡಿ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಮಂಜುನಾಥ ರೆಡ್ಡಿ ಅವರು ಅಪೂರ್ಣ ಮಾಹಿತಿ ನೀಡಿದ್ದಾರೆ ಎಂದು ವಕೀಲ ಎನ್.ಪಿ.ಅಮೃತೇಶ್ ಅವರು ದೂರು ನೀಡಿದ್ದಾರೆ. [ಮಹಾಪೌರ ಮಂಜುನಾಥ್ ರೆಡ್ಡಿ ಆಸ್ತಿ ವಿವರ]

ಮಂಜುನಾಥ ರೆಡ್ಡಿ ಅವರು ನಾಮಪತ್ರ ಸಲ್ಲಿಸುವ ವೇಳೆ ಅದರ ಜತೆಗೆ ತಮ್ಮ ಕುರಿತು ಪೂರ್ಣ ಮಾಹಿತಿ ನೀಡಿಲ್ಲ. ಆದಾಯ ತೆರಿಗೆ ಪಾವತಿಸುತ್ತಿದ್ದರೂ ನಾಮಪತ್ರದಲ್ಲಿ ಪಾನ್‌ ನಂಬರ್‌ ಉಲ್ಲೇಖಿಸಿಲ್ಲ. ಹಲವು ಆದಾಯ ಮಾಹಿತಿಗಳನ್ನು ಮರೆ ಮಾಚಿದ್ದಾರೆ. ಆದ್ದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+