ಬಾರ್ಬಿಕ್ಯೂ ನೇಷನ್ ಫುಡ್ ರುಚಿ ಎಲ್ಲೆಡೆ ಹಬ್ಬುತ್ತಿದೆ

ಕೋಲ್ಕತ್ತಾ, ಜುಲೈ 10: ಬೆಂಗಳೂರು ಮೂಲದ ಬಾರ್ಬಿಕ್ಯೂನೇಷನ್ ಫುಡ್ ಮಳಿಗೆಗಳು ವಿಸ್ತಾರಗೊಂಡು ಬೆಂಗಾಳಿಗಳಿಗೂ ತನ್ನ ರುಚಿ ಹತ್ತಿಸಲು ತೊಡಗಿದೆ. ಮುಂಬರುವ ಎರಡು ವರ್ಷಗಳಲ್ಲಿ ಸುಮಾರು 150 ರಿಂದ 200 ಕೋಟಿ ರು ಹೂಡಿಕೆ ಮಾಡಲಾಗುವುದು ಎಂದು ಸಂಸ್ಥೆಯ ಉದಯ್ ಮೆನನ್ ಹೇಳಿದ್ದಾರೆ.

ಮುಂಬರುವ ಎರಡು ವರ್ಷಗಳಲ್ಲಿ ಇನ್ನೂ 50 ಹೆಚ್ಚು ರೆಸ್ಟೋರೆಂಟ್ ಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ 200 ಕೋಟಿ ರು ತನಕ ಬಂಡವಾಳ ಹೂಡಿಕೆ ಮಾಡಲಾಗುತ್ತದೆ ಎಂದು ಉದಯ್ ತಿಳಿಸಿದರು.

Barbeque Nation

ಬೆಂಗಳೂರು, ಚೆನ್ನೈ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ ಸೇರಿದಂತೆ 18 ನಗರಗಳಲ್ಲಿ ಸದ್ಯಕ್ಕೆ 50 ರೆಸ್ಟೋರೆಂಟ್ ಗಳನ್ನು ಹೊಂದಿರುವ ಬಾರ್ಬಿಕ್ಯೂ ನೇಷನ್ ತನ್ನ ವಿಶಿಷ್ಟ ಖಾದ್ಯ ಹಾಗೂ ರುಚಿಗಾಗಿ ಜನಪ್ರಿಯತೆ ಪಡೆದುಕೊಂಡಿದೆ.

2016 ರ ಆರ್ಥಿಕ ವರ್ಷದಲ್ಲಿ 20 ರೆಸ್ಟೋರೆಂಟ್ ಗಳನ್ನು ಸ್ಥಾಪಿಸಲಾಗುವುದು ಮುಂದಿನ ಆರ್ಥಿಕ ವರ್ಷದಲ್ಲಿ ಉಳಿದ ಮಳಿಗೆಗಳು ಬರಲಿವೆ. ಪ್ರಸಕ್ತ ವರ್ಷಾಂತ್ಯಕ್ಕೆ ದೇಶದ 12 ನಗರಗಳಿಗೆ ಜಾಲವನ್ನು ವಿಸ್ತರಿಸುವ ಯೋಜನೆಯಿದೆ ಎಂದು ಬಿಸಿನೆಸ್ ಲೈನ್ ಗೆ ನೀಡಿದ ಸಂದರ್ಶನದಲ್ಲಿ ಉದಯ್ ಹೇಳಿದ್ದಾರೆ.

ಕಳೆದ ಆರ್ಥಿಕ ವರ್ಷದಲ್ಲಿ 300 ರಿಂದ 325 ಕೋಟಿ ರು ಗಳಿಕೆ ಕಂಡಿರುವ ಬಾರ್ಬಿಕ್ಯೂ ನೇಷನ್ ಸೀಸನ್ ಗೆ ತಕ್ಕಂತೆ ವಿವಿಧ ದೇಶಗಳ ಆಹಾರ ಪದ್ಧತಿ ಹಾಗೂ ವಿಶೇಷ ಖಾದ್ಯಗಳನ್ನು ಪರಿಚಯಿಸುತ್ತಾ ಬಂದಿದೆ. ಅನೇಕ ಬಾರಿ ಆಹಾರ ಸಂಸ್ಕೃತಿ ಅಧ್ಯಯನ ನಡೆಸುವವರಿಗೆ ಬಾರ್ಬಿಕ್ಯೂ ನೇಷನ್ ಖಾದ್ಯ ಮೇಳ ಬಹು ಉಪಯೋಗಿಯಾಗಿದೆ.

Barbeque Nation food

ಬಾರ್ಬಿಕ್ಯೂಗೂ ರಾಮಾಯಣಕ್ಕೂ ನಂಟಿದೆ: ಸರಳಿನ ಕಾವಲಿಯಲ್ಲಿ ಸಲಾಕೆಯಲ್ಲಿ ಸಿಕ್ಕಿಕೊಂಡ ಆಹಾರ ಬೇಯಿಸಿ ತಿನ್ನುವ ಪದ್ಧತಿ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಫ್ರಿಕಾಗಳಲ್ಲಿ ಜನಪ್ರಿಯ. ಮಾಂಸಾಹಾರ ಪ್ರಿಯರಿಗೆ ಇದು ವಿಶಿಷ್ಟ ರುಚಿ ಕೊಡುವ ಆಹಾರ ಬೇಯಿಸುವ ವಿಧಾನವಾಗಿದೆ.

ಅಂದ ಹಾಗೆ, ಪರ್ಣಕುಟಿಯಲ್ಲಿ ಸೀತೆಯೊಡನೆ ಶ್ರೀರಾಮಚಂದ್ರ ಕಾಲ ಕಳೆಯುವಾಗ ಸೀತೆಗೆ ಇಷ್ಟವಾದ ಜಿಂಕೆ ಮಾಂಸವನ್ನು ಇದೇ ಮಾದರಿಯಲ್ಲಿ ಶ್ರೀರಾಮ ಬೇಯಿಸಿ ತಿನ್ನಿಸಿದ್ದನಂತೆ. ಹೀಗಾಗಿ ಇದು ಅತ್ಯಂತ ಪುರಾತನ ಆಹಾರ ಬೇಯಿಸುವ ವಿಧಾನ ಎಂದು ಪಂಡಿತೋತ್ತಮರು ಹೇಳಿದ್ದಾರೆ.

ಬಾರ್ಬಿಕ್ಯೂ ನೇಷನ್ ಬಗ್ಗೆ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ಸೈಟ್ ನೋಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+