ಎಟಿಎಂಗಳಲ್ಲಿ ಸಿಸಿಟಿವಿ : 45 ದಿನ ಡೆಡ್ ಲೈನ್
ಬೆಂಗಳೂರು, ನ. 28 : ಬೆಂಗಳೂರಿನಲ್ಲಿನ ಎಟಿಎಂಗಳಿಗೆ ಸಿಸಿಟಿವಿ ಮತ್ತು ಅಲರಾಂ ವ್ಯವಸ್ಥೆ ಅಳವಡಿಸಲು 45 ದಿನಗಳ ಗಡುವು ನೀಡಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ. ಇದರಿಂದ ಬ್ಯಾಂಕ್ ಗಳಿಗೆ ಕೊಂಚ ರಿಲೀಫ್ ಸಿಕ್ಕಿದೆ. ಆದರೆ, ನ.30ರೊಳಗೆ ಭದ್ರತಾ ಸಿಬ್ಬಂದಿ ನೇಮಕ ಮಾಡಲು ಡೆಡ್ ಲೈನ್ ನೀಡಲಾಗಿದೆ.
45 ದಿನಗಳ ಗಡುವು ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಭದ್ರತಾ ಸಿಬ್ಬಂದಿ ನೇಮಿಸುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಆದರೆ, ಸಿಸಿಟಿವಿ ಅಳವಡಿಕೆ ಮತ್ತು ಅಲರಾಂ ವ್ಯವಸ್ಥೆ ಅಳವಡಿಸಿಲು ಬ್ಯಾಂಕ್ ಗಳಿಗೆ 45ದಿನಗಳ ಕಾಲವಾವಕಾಶ ನೀಡಲಾಗಿದೆ. ಈ ಕುರಿತು ಆದೇಶ ಹೊರಡಿಸಲಾಗುವುದು ಎಂದರು. (ಎಟಿಎಂ ಭದ್ರತೆಗೆ ಬರುತ್ತೆ ಮಾರ್ಗಸೂಚಿ)

ಮಂಗಳವಾರ ಬ್ಯಾಂಕ್ ಅಧಿಕಾರಿಗಳು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಸಿಸಿಟಿವಿ ಮತ್ತು ಅಲರಾಂ ವ್ಯವಸ್ಥೆ ಆಳವಡಿಕೆಗೆ ಟೆಂಡರ್ ಕರೆಯಬೇಕು. ಆದ್ದರಿಂದ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಆಯುಕ್ತರು 45 ದಿನಗಳ ಕಾಲವಕಾಶ ನೀಡಿದ್ದಾರೆ. ಆದರೆ, ಭದ್ರತಾ ಸಿಬ್ಬಂದಿ ನೇಮಿಸಲು ನ.30 ಅಂತಿಮ ಗಡುವು ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ನಗರದಲ್ಲಿ 1037 ಎಟಿಎಂಗಳನ್ನು ಮುಚ್ಚಲಾಗಿದೆ. ಭದ್ರತಾ ಸಿಬ್ಬಂದಿಯನ್ನು ನೇಮಿಸಿರುವುದಾಗಿ ಬ್ಯಾಂಕ್ ಗಳು ಪೊಲೀಸರಿಗೆ ತಿಳಿಸಿದರೆ, ಸ್ಥಳ ಪರಿಶೀಲನೆ ನಡೆಸಿದ ನಂತರ ಎಟಿಎಂಗಳನ್ನು ತೆರಯಲಾಗುವುದು ಎಂದು ಔರಾದ್ಕರ್ ಹೇಳಿದರು. (ಬೆಂಗಳೂರು ನಿಯಮ ಪಾಲಿಸದ 1037 ಎಟಿಎಂಗೆ ಬೀಗ)
ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಆಂಧ್ರಪ್ರದೇಶ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆರೋಪಿಯ ಹುಡುಕಾಟಕ್ಕೆ ಅವರು ಸಹಕಾರ ನೀಡುತ್ತಿದ್ದಾರೆ ಎಂದು ಆಯುಕ್ತರು ತಿಳಿಸಿದರು. (ಎಟಿಎಂ ಹಂತಕನ ತಲೆಗೆ ಆಂಧ್ರದಲ್ಲೂ ಬಹುಮಾನ)












Click it and Unblock the Notifications