ಬೆಂಗಳೂರಿನ ಗೋಡೆಗಳ ಮೇಲೆ ಇನ್ನು ಚಿತ್ರ ಕಾಣೋಲ್ಲ!

ಬೆಂಗಳೂರು, ಏ. 28 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ಎಲ್ಲಾ ಗೋಡೆಗಳಿಗೆ ಬಿಳಿ ಬಣ್ಣ ಬಳಿಯಲು ನಿರ್ಧರಿಸಿದೆ. ಆದ್ದರಿಂದ ಇನ್ನುಮುಂದೆ ನಗರದ ಗೋಡೆಗಳ ಮೇಲೆ ಕಾಣುವ ಮುಸುಕಾದ ಚಿತ್ರಗಳು ಮರೆಯಾಗಲಿವೆ. ನಗರದ ಗೋಡೆಗಳನ್ನು ಜಾಹೀರಾತಿನಿಂದ ಮುಕ್ತವಾಗಿಸಲು ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

ಬಿಬಿಎಂಪಿ ವತಿಯಿಂದ ಬೆಂಗಳೂರು ನಗರದ ಗೋಡೆಗಳ ಮೇಲೆ 2009ರಲ್ಲಿ ಚಿತ್ರಗಳನ್ನು ಬಿಡಿಸಲಾಗಿತ್ತು. ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರಗಳು, ವೈಜ್ಞಾನಿಕ ಆವಿಷ್ಕಾರಗಳನ್ನು ತಿಳಿಸುತ್ತಿದ್ದ ಈ ಚಿತ್ರಗಳು ಸದ್ಯ ಮಸುಕಾಗಿವೆ. ಅವುಗಳನ್ನು ಸರಿಪಡಿಸದೆ, ಬಿಳಿ ಬಣ್ಣ ಬಳಿಯಲು ನಿರ್ಧರಿಸಲಾಗಿದೆ. [ಬಿಬಿಎಂಪಿ ಆಸ್ತಿ ತೆರಿಗೆ ಅವಧಿ ವಿಸ್ತರಣೆ]

Bangalore

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸರ್ಕಾರದ ಸಹಯೋಗದಲ್ಲಿ ಈ ಕಾರ್ಯ ಆರಂಭವಾಗಲಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ. ಈಗಿರುವ ಚಿತ್ರಗಳನ್ನು ದುರಸ್ತಿ ಪಡಿಸುವ ಕಾರ್ಯ ಹೆಚ್ಚು ವೆಚ್ಚದಾಯಕವಾದ್ದರಿಂದ ಬಿಳಿ ಬಣ್ಣ ಹೊಡೆಯಲು ನಿರ್ಧರಿಸಲಾಗಿದೆ.

ನಗರದ ಅಂಡರ್ ಪಾಸ್, ಪ್ರಮುಖ ರಸ್ತೆಗಳ ಮೇಲೆ ಚಿತ್ರಗಳನ್ನು ಬಿಡಿಸುವ ಕಾಮಗಾರಿಯನ್ನು ಬಿಬಿಎಂಪಿ 2009ರಲ್ಲಿ ನಡೆಸಿತ್ತು. ಅಂದು ಬಿಬಿಎಂಪಿ ಆಯುಕ್ತರಾಗಿದ್ದ ಭರತ್ ಲಾಲ್ ಮೀನಾ ಸುಮಾರು 77 ಲಕ್ಷ ವೆಚ್ಚದಲ್ಲಿ ಈ ಕಾರ್ಯವನ್ನು ಕೈಗೊಂಡಿದ್ದರು. ಇದಕ್ಕೆ ವಿರೋಧ ಪಕ್ಷಗಳು ಸೇರಿದಂತೆ ಹಲವಾರು ಸಂಘಟನೆಗಳು ಸಹ ವಿರೋಧ ವ್ಯಕ್ತಪಡಿಸಿದ್ದವು. [ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?]

ಸದ್ಯ ನಗರದ ಹಲವು ಕಡೆ ಚಿತ್ರಗಳು ಬಣ್ಣ ಕಳೆದುಕೊಂಡಿವೆ. ಕೆಲವು ಕಡೆ ಗೋಡೆಗಳು ಕುಸಿದು ಬಿದ್ದಿವೆ. ಕೆಲವು ಕಡೆ ಗೋಡೆಗಳ ಬಳಿ ಕಸ ಸುರಿಯಲಾಗಿದ್ದು ಅಲ್ಲಿನ ಚಿತ್ರಗಳು ಕಾಣಿಸುತ್ತಿಲ್ಲ. ಆದ್ದರಿಂದ ಚಿತ್ರಗಳಿಗೆ ಜೀವ ತುಂಬುವ ಬದಲು ಈ ಬಾರಿ ಬಿಳಿ ಬಣ್ಣ ಹೊಡೆಸಲು ಪಾಲಿಕೆ ನಿರ್ಧರಿಸಿದೆ. ಸರ್ಕಾರದ ಸಹಯೋಗದಲ್ಲಿ ಬಿಳಿ ಬಣ್ಣ ಹೊಡೆಯಲು ತೀರ್ಮಾನ ಕೈಗೊಳ್ಳಲಾಗಿದೆ.

ಈಗಾಗಲೇ ನಗರದ ರಸ್ತೆಗಳ ಅಕ್ಕಪಕ್ಕದ ಗೋಡೆಗಳ ಮೇಲೆ ಜಾಹೀರಾತು, ಪೋಸ್ಟರ್ ಗಳನ್ನು ಅಂಟಿಸಿ ಅವುಗಳ ಅಂದವನ್ನು ಹಾಳು ಮಾಡಲಾಗಿದೆ. ಆದ್ದರಿಂದ ಪೋಸ್ಟರ್ ಮತ್ತು ಜಾಹೀರಾತುಗಳನ್ನು ಅಂಟಿಸಲು ಹೊಸ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಪಾಲಿಕೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+