ವಿವಿಧ ಪ್ರಕರಣಗಳನ್ನು ಪತ್ತೆಹಚ್ಚಿದ ವರ್ತೂರು ಪೊಲೀಸರು

ಬೆಂಗಳೂರು, ಅ. 9: ವರ್ತೂರು ಠಾಣಾ ವ್ಯಾಪ್ತಿಯಲ್ಲಿನ ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಿರುವ ಪೊಲೀಸರು ಆರೋಪಿಗಳನ್ನು ದಸ್ತಗಿರಿ ಮಾಡಿ ಕಳ್ಳತನವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಲೆಗೆ ಬಿದ್ದ ಮೊಬೈಲ್ ಕಳ್ಳರು: ತಲೆನೋವಾಗಿದ್ದ ಮೊಬೈಲ್ ಕಳ್ಳತನ ಪ್ರಕರಣ ಪತ್ತೆಹಚ್ಚಿರುವ ಪೊಲೀಸರು ಮಾಲೂರಿನ ಕೃಷ್ಣಮೂರ್ತಿ(33), ವೈಟ್‌ ಫೀಲ್ಡ್‌ ನಿವಾಸಿ ಸುಬ್ರಮಣಿ ಎಂಬುವರನ್ನು ಬಂಧಿಸಿ 2.3 ಲಕ್ಷ ರೂ. ಬೆಲೆಯ 10 ಮೊಬೈಲ್‌ ಮತ್ತು 3 ಟ್ಯಾಬ್ ವಶಪಡಿಸಿಕೊಂಡಿದ್ದಾರೆ.[ನಕಲಿ ಅನುಭವ ಪತ್ರ ನೀಡುತ್ತಿದ್ದ ವಂಚಕರ ಬಂಧನ]

vartur

ಆಗ್ನೇಯ ವಿಭಾಗದ ಉಪ-ಪೊಲೀಸ್ ಆಯುಕ್ತೆ ಡಾ. ರೋಹಿಣಿ ಕಟೋಚ್ ಸೇಪೆಟ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸಿಪಿ ದುಗ್ಗಪ್ಪ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ದ್ವಿಚಕ್ರ ವಾಹನ ಕಳ್ಳನ ಬಂಧನ: ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಮಹಾರಾಷ್ಟ್ರ ಮೂಲದ ಅಕ್ಷಯಕುಮಾರ್ ಎಂಬಾತನನ್ನು ಬಂಧಿಸಿರುವ ಪೊಲೀಸರು 50 ಸಾವಿರ ರೂ. ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ.

282 ಸೆಂಟ್ರಿಂಗ್ ಶೀಟ್‌ ವಶ: ಇನ್ನೊಂದು ಪ್ರಕರಣದಲ್ಲಿ ಕಾಚಮಾರನಹಳ್ಳಿ ನಡೆದಿದ್ದ ಸೆಂಟ್ರಿಂಗ್ ಶೀಟ್‌ ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು ಆರೋಪಿ ನಂಜುಂಡನ್ ಎಂಬಾತನನ್ನು ಬಂಧಿಸಿ 2.8 ಲಕ್ಷ ರೂ. ಮೌಲ್ಯದ ಶೀಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ವರ್ತೂರು ಠಾಣೆ ಇನ್ಸ್ ಪೆಕ್ಟರ್ ಡಿ.ಕುಮಾರ್, ವಿ.ರಘು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+