4 ವರ್ಷದ ಪದವಿಗೆ ಬೆಂಗಳೂರು ವಿವಿಯಲ್ಲೇ ವಿರೋಧ
ಬೆಂಗಳೂರು, ಜೂ.24: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬೆಂಗಳೂರು ವಿಶ್ವವಿದ್ಯಾಲಯ ಆರಂಭಿಸಲು ಉದ್ದೇಶಿಸಲಾಗಿದ್ದ ನಾಲ್ಕು ವರ್ಷದ ಪದವಿಯ ವಿರುದ್ಧ ವಿಶ್ವವಿದ್ಯಾಲಯದಲ್ಲೇ ವಿರೋಧ ವ್ಯಕ್ತವಾಗಿದೆ.ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಸಭೆಯಲ್ಲಿ 20 ವಿಜ್ಞಾನ ವಿಭಾಗಗಳು ಬೆಂಗಳೂರು ವಿವಿ ಆರಂಭಿಸಿಲು ಉದ್ದೇಶಿಸಿದ್ದ ನಾಲ್ಕು ವರ್ಷದ ಪದವಿಯ ವಿರುದ್ಧ ಗೊತ್ತುವಳಿಯನ್ನು ಅಂಗೀಕರಿಸಿದೆ.
ಯುಜಿಸಿ ಮತ್ತು ದೆಹಲಿ ವಿವಿ ನಡುವೆ ಜಟಾಪಟಿ ನಡೆಯುತ್ತಿರುವಾಗಲೇ ವಿವಿ ಹೊಸ ಪದವಿಯನ್ನು ಆರಂಭಿಸುತ್ತಿರುವುದು ಸರಿಯಲ್ಲ ಎಂದು ಬೆಂಗಳೂರು ವಿವಿ. ವಿಜ್ಞಾನ ವಿಭಾಗದ ಬೋಧಕರೊಬ್ಬರು ತಿಳಿಸಿದ್ದಾರೆ.
ದೆಹಲಿವಿಶ್ವವಿದ್ಯಾಲಯ ಈಗಾಗಲೇ ಹೊಸ ರೀತಿಯ ಪದವಿಯನ್ನು ಆರಂಭಿಸಿದ್ದಕ್ಕೆ ಯುಜಿಸಿ ಎಚ್ಚರಿಕೆ ನೀಡಿದ್ದು, ಮೂರು ವರ್ಷದ ಪದವಿಗೆ ಮಾತ್ರ ಪ್ರವೇಶ ನೀಡುವಂತೆ ದೆಹಲಿ ವಿಶ್ವವಿದ್ಯಾಲಯ ಹಾಗೂ ಅದರ ವ್ಯಾಪ್ತಿಯ ಕಾಲೇಜುಗಳಿಗೆ ನಿರ್ದೇಶನ ನೀಡಿದೆ. [ಬೆಂಗಳೂರು ವಿವಿಯಲ್ಲಿ 4 ವರ್ಷದ ಪದವಿ ಕೋರ್ಸ್]

ತಜ್ಞರೊಂದಿಗೆ ಚರ್ಚಿಸಿ ಪಠ್ಯಕ್ರಮ: ವ್ಯಕ್ತಿತ್ವ ವಿಕಸನ ಹಾಗೂ ಕೌಶಲ ಅಭಿವೃದ್ಧಿ ಕೋರ್ಸ್ ವಿಷಯಗಳ ಹೊಸ ಪಠ್ಯಕ್ರಮದ ರಚನೆಗಾಗಿ ಶಿಕ್ಷಣ ತಜ್ಞರ ಹಾಗೂ ಕೈಗಾರಿಕ ವಲಯದ ಸಂಪನ್ಮೂಲ ವ್ಯಕ್ತಿಗಳ ಸಮಿತಿ ರಚಿಸಲಾಗುವುದು ಎಂದು ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಸಹಾಯವಾಗುವ ಉದ್ದೇಶದಿಂದ ನಾಲ್ಕು ವರ್ಷದ ಪದವಿಯನ್ನು ಆರಂಭಿಸಲು ಚಿಂತನೆ ನಡೆಸಿದ್ದೇವೆ. ತಜ್ಞರು ಪಠ್ಯಕ್ರಮದ ಕರಡು ಪ್ರತಿಯನ್ನು ತಯಾರಿಸಲಿದ್ದಾರೆ. ಈ
ಕರಡು ಪ್ರತಿ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ಪೂರಕವಾಗಿದ್ದರೆ ಅದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಕುಲಪತಿಗಳು ಸ್ಪಷ್ಟಪಡಿಸಿದರು.












Click it and Unblock the Notifications