ಬೆಂಗಳೂರು ಪುರಭವನಕ್ಕೆ ಆಧುನಿಕ ಟಚ್
ಬೆಂಗಳೂರು, ಆ.29 : ಮಹಾನಗರದ ಪರಂಪರೆ ಸಾರುವ ಪುರಭವನಕ್ಕೂ ಆಧುನಿಕತೆಯ ಟಚ್ ಸಿಗಲಿದೆ. ವಿಡಿಯೋ ಕ್ಯಾಮರಾ, ಪ್ರೊಸೌಂಡ್ ಮತ್ತು ಸಿಸಿ ಕ್ಯಾಮರಾ ಅಳವಡಿಸಲಾಗುವುದು.
ಈ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿ ವಾರ್ಡ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಚ್.ಬಸವರಾಜು. ಈ ಬಾರಿಯ ಬಜೆಟ್‌ನಲ್ಲಿ ತಿಳಿಸಿದಂತೆ 4.92 ಕೋಟಿ ರೂ. ಅನುದಾನದಡಿ ನವೀಕರಣ ಕಾರ್ಯ ಕೈಗೊಳ್ಳಲಾಗಿದೆ.

ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ, ರೊಬೊಟಿಕ್ ವಿಡಿಯೋ ಕ್ಯಾಮರಾ, ಮೊದಲ ಮಹಡಿಯಲ್ಲಿ ಹೆಚ್ಚುವರಿ ಶೌಚಾಲಯ ಅಳವಡಿಕೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಪುರಭವನದ ಆಸನಗಳ ಸಂಖ್ಯೆಯನ್ನ್ಉ 700ರಿಂದ 800ಕ್ಕೆ ಏರಿಸಲಾಗುವುದು. ಪುಟ್ಟಣ್ಣ ಚೆಟ್ಟಿಯವರ ಕುರಿತ ಪುತ್ಥಳಿ ನಿರ್ಮಿಸಲಾಗುವುದು. ನವೀಕರಣದ ಬಳಿಕ ಶುಲ್ಕ ಪರಿಷ್ಕರಣೆ ಮಾಡಲಾಗುವುದು. ಡಿಸೆಂಬರ್ ಒಳಗೆ ಕಾಮಗಾರಿ ಸಂಪೂರ್ಣ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.












Click it and Unblock the Notifications