ಮ್ಯಾಕ್‌ ಡೊನಾಲ್ಡ್ ರೆಸ್ಟೋರೆಂಟ್‌ ದೋಚಿದ್ದವರು ಬಲೆಗೆ

ಬೆಂಗಳೂರು, ಸೆ.15 : ಆತ ಅದೇ ಸಂಸ್ಥೆಯ ಕೆಲಸಗಾರ. ಆದರೆ ಹಣದ ಆಮಿಷಕ್ಕೆ ಬಿದ್ದು ತನ್ನ ಸ್ನೇಹಿತರೊಂದಿಗೆ ಯೋಜನೆ ರೂಪಿಸಿ ಕೆಲಸಕ್ಕಿದ್ದ ರೆಸ್ಟೋರೆಂಟ್‌ನ್ನೇ ದೋಚಿದ್ದ. ಆದರೆ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದು ಕಂಬಿ ಎಣಿಸುತ್ತಿದ್ದಾನೆ.

ಬೆಂಗಳೂರು ಜಯನಗರ 4ನೆ ಬ್ಲಾಕ್‌ನ ಮ್ಯಾಕ್ ಡೊನಾಲ್ಡ್ ರೆಸ್ಟೋರೆಂಟ್‌ಗೆ ನುಗ್ಗಿ ದರೋಡೆ ಮಾಡಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಹಾಲಿ ನೌಕರ ಸೇರಿದಂತೆ ಐವರನ್ನು ಬಂಧಿಸಲಾಗಿದ್ದು ನಗದು ಹಾಗೂ ಗಿಫ್ಟ್‌ ವೋಚರ್‌ ವಶಪಡಿಸಿಕೊಳ್ಳಲಾಗಿದೆ.(ಬೆಂಗಳೂರು ಉದ್ಯಮಿ ದೋಚಿದ್ದ 6 ಜನರ ಬಂಧನ)

mcdonald

ಶಶಿಧರ, ಪ್ರಶಾಂತ್, ಆಕಾಶ್, ಅಭಿಷೇಕ್ ಮತ್ತು ಕೇಶವ ಬಂಧಿತರು. ಅಭಿಷೇಕ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ. ಬಂಧಿತರಲ್ಲಿ ಮೂವರು ಇಲ್ಲಿನ ಮಾಜಿ ನೌಕರರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾರದ ಹಿಂದೆ ರೆಸ್ಟೋರೆಂಟ್‌ಗೆ ನುಗ್ಗಿ ದರೋಡೆ ಮಾಡಲಾಗಿತ್ತು. ಮುಂಜಾನೆಯೇ ರೆಸ್ಟೋರೆಂಟ್‌ಗೆ ನುಗ್ಗಿ ಒಳಗಿದ್ದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ನಗದು ಸೇರಿದಂತೆ 2.6 ಲಕ್ಷ ರೂ. ಮೌಲ್ಯದ ಗಿಫ್ಟ್‌ ವೋಚರ್‌ ದೋಚಲಾಗಿತ್ತು.(ಚಾರ್ಟರ್ಡ್ ಅಕೌಂಟೆಂಟ್ ಮನೆಯಲ್ಲಿ ಭಾರೀ ದರೋಡೆ)

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಜಯನಗರ ಠಾಣೆ ಪೊಲೀಸರು ಹಾಲಿ ನೌಕರ ಅಭಿಷೇಕ್ ಸೇರಿದಂತೆ ಜೆಪಿ ನಗರ, ಜಯನಗರ, ರಾಗಿಗುಡ್ಡದ ವಾಸಿಗಳಾದ ಐವರನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+