ಪೀಣ್ಯ ಬಿಎಂಟಿಸಿ ಬಸ್ ಬಂದ್; ಪ್ರಯಾಣಿಕರ ಪರದಾಟ

Bangalore Peenya BMTC staff on strike -buses halted- Commuters suffer
ಬೆಂಗಳೂರು, ಮೇ 24:ಪೀಣ್ಯ ಭಾಗದಲ್ಲಿ ಬಿಎಂಟಿಸಿ ಬಸ್ ಕಂಡಕ್ಟರುಗಳು ಮತ್ತು ಡ್ರೈವರುಗಳು ಇಂದು ಶನಿವಾರ ದಿಢೀರ್ ಮುಷ್ಕರದಲ್ಲಿ ತೊಡಗಿದ್ದು, ಸುಮಾರು 200 ಬಸ್ಸುಗಳ ಓಡಾಟ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಪೀಣ್ಯ 2ನೇ ಹಂತದ ಬಿಎಂಟಿಸಿ ಡಿಪೋ ಸಿಬ್ಬಂದಿ ವಿಭಾಗೀಯ ಅಧಿಕಾರಿ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದು ಡಿಪೋದಿಂದ ಹೊರಡಬೇಕಿದ್ದ ಬಸ್ಸುಗಳಿಗೆ ಬ್ರೇಕ್ ಹಾಕಿದ್ದಾರೆ.

ವಿಭಾಗೀಯ ಅಧಿಕಾರಿ ಸಿಬ್ಬಂದಿಗೆ ಭಾರಿ ಕಿರುಕುಳ ನೀಡುತ್ತಿದ್ದಾರೆ. ಇತ್ತೀಚೆಗೆ ಡಿಪೋ ಮ್ಯಾನೇಜರ್ ಅವರನ್ನೂ ವರ್ಗ ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಸಿಬ್ಬಂದಿ ಬಸ್ ಸಂಚಾರ ಸ್ಥಗಿತಗೊಳಿಸಿ, ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

'ಸರ್ವಾಧಿಕಾರಿ ಧೋರಣೆಯ ವಿಭಾಗೀಯ ಅಧಿಕಾರಿಯನ್ನು ತಕ್ಷಣ ವರ್ಗಾಯಿಸಬೇಕು. ಡಿಪೋ ಮ್ಯಾನೇಜರ್ ಅವರ ವರ್ಗವನ್ನು ರದ್ದುಗೊಳಿಸಬೇಕು. ತಮಗೆ ನ್ಯಾಯಯುತ ಉತ್ತಮ ಕೆಲಸದ ವಾತಾವರಣ ಕಲ್ಪಿಸಬೇಕು' ಎಂದು ಆಗ್ರಹಿಸಿ ಸದರಿ ಡಿಪೋದ ಕಂಡಕ್ಟರುಗಳು ಮತ್ತು ಡ್ರೈವರುಗಳು ಮಿಂಚಿನ ಮುಷ್ಕರದಲ್ಲಿ ತೊಡಗಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+