ಅಯ್ಯಂಗಾರ್ ಬೇಕರಿ ಆನ್ ಲೈನ್ ಸೇವೆಯಲ್ಲಿ ಲಭ್ಯ
ಬೆಂಗಳೂರು, ಏಪ್ರಿಲ್ 21: ರುಚಿಯನ್ನೇ ತಮ್ಮ ಸಂಪ್ರದಾಯವನ್ನಾಗಿಸಿಕೊಂಡಿರುವ ರಾಜಧಾನಿಯ ಹೆಗ್ಗುರುತಾದ ಅಯ್ಯಂಗಾರ್ ಬೇಕರಿ 1981ರಿಂದಲೂ ನಗರದ ಮಹಾಜನತೆಯ ಜಿಹ್ವಾಚಾಪಲ್ಯವನ್ನು ತಣಿಸುತ್ತಾ ಬಂದಿದೆ.
ಇದೀಗ ಬೇಕರಿ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿರುವ Iyengars Bakery ಆಧುನಿಕತೆಯ ಸೋಂಕು ತಗುಲಿಸಿಕೊಂಡು ಅಂತರ್ಜಾಲದ ಮೂಲಕವೂ ಗ್ರಾಹಕರ ಬೇಡಿಕೆಯನ್ನು ಪೂರೈಸಲಾರಂಭಿಸಿದೆ.

ಮನೆಯಲ್ಲಿದ್ದುಕೊಂಡೇ ಇಂಟರ್ನೆಟ್ ಮೂಲಕ ಆರ್ಡರ್ ಮಾಡಿ
ಏನಪ್ಪಾ ಅಂದರೆ ಅಯ್ಯಂಗಾರ್ ಬೇಕರಿಯಲ್ಲಿ ನಿಮಗಿಷ್ಟವಾದ ಯಾವುದೇ ಉತ್ಪನ್ನವನ್ನು ಟೇಸ್ಟ್ ಮಾಡಬೇಕು/ ಖರೀದಿಸಬೇಕು ಅಂದರೆ ಮನೆಯಲ್ಲಿದ್ದುಕೊಂಡೇ ಇಂಟರ್ನೆಟ್ ಮೂಲಕ ಆರ್ಡರ್ ಬುಕ್ ಮಾಡಿದರೆ ಸಾಕು. ನಿಮ್ಮ ಮನೆಯ ಬಾಗಿಲಿಗೆ ನಿಮ್ಮ ಮೆಚ್ಚಿನ ಐಟಂ ರೆಡಿಯಾಗಿ ಬರುತ್ತದೆ.

ಅಯ್ಯಂಗಾರ್ ಬೇಕರಿ ವೆಬ್ ಸೈಟ್ ವಿಳಾಸ ಹೀಗಿದೆ
ಇದನ್ನು ಕಾರ್ಯಗತಗೊಳಿಸಲು ನೀವು www.iyengarsbakery.com ವೆಬ್ ಸೈಟಿಗೆ ಭೇಟಿ ನೀಡಿದರೆ ಸಾಕು. ಇಲ್ಲಿನ online store ಕಿಟಕಿಯಲ್ಲಿ cakes, breads, cookies, snacks ಮತ್ತು sweets ಇಣಿಕುತ್ತವೆ. ನಿಮ್ಮ ಜಿಹ್ವಾ ಚಾಪಲ್ಯ ಮತ್ತು ಜೇಬಿಗೆ ತಕ್ಕಂತೆ ಒಂದೊಂದೇ ಆರ್ಡರ್ ಮಾಡುತ್ತಾ ಹೊರಟರೆ ಆ ಕಡೆಯಿಂದ ಅಷ್ಟೇ ವೇಗದಲ್ಲಿ ಐಟಂಗಳನ್ನು ಕಳುಹಿಸಲು ಅಯ್ಯಂಗಾರ್ಸ್ ಬೇಕರಿಯವರು ಸಜ್ಜಾಗುತ್ತಿರುತ್ತಾರೆ.

ಅಯ್ಯಂಗಾರ್ಸ್ ಬೇಕರಿ ತಿನಿಸಿಗೆ ಆನ್ ಲೈನ್ ನಲ್ಲಿ ಬೇಡಿಕೆ
'ಈಗಾಗಲೇ ಅಯ್ಯಂಗಾರ್ಸ್ ಬೇಕರಿ ಆನ್ ಲೈನ್ ನಲ್ಲಿ ಬೇಡಿಕೆ ಪಡೆಯುತ್ತಿದೆ. ಜನ ಈಗೀಗ Facebookನಲ್ಲಿ ಹೆಚ್ಚು ಜಾಲಾಡುತ್ತಿರುತ್ತಾರೆ. ನಮ್ಮ ವೆಬ್ ಸೈಟ್ ಸಹ ಗ್ರಾಹಕರ ಸೇವೆಗೆ ಸಿದ್ಧವಾಗಿದೆ' ಎನ್ನುತ್ತಾರೆ 28 ವರ್ಷದ ಲಕ್ಷ್ಮೀಶ ಅಯ್ಯಂಗಾರ್.

1981ರಲ್ಲಿ ಅಯ್ಯಂಗಾರ್ಸ್ ಬೇಕರಿ ಪ್ರಾರಂಭ
ಅಂದಹಾಗೆ 1981ರಲ್ಲಿ ಎಚ್ಎಸ್ ಶ್ರೀಧರ ಅವರು ಅಯ್ಯಂಗಾರ್ಸ್ ಬೇಕರಿಯನ್ನು ಪ್ರಾರಂಭ ಮಾಡಿದರು. ಅದನ್ನೀಗ ಅವರ ಮಕ್ಕಳಾದ ಲಕ್ಷ್ಮೀಶ ಮತ್ತು ರಾಮನ್ ಮುಂದುವರಿಸಿಕೊಂಡು ಬಂದಿದ್ದಾರೆ. ಲಕ್ಷ್ಮೀಶ ಇಂಜಿನಿಯರ್ ಆಗಿದ್ದರೆ ರಾಮನ್ ಎಂಬಿಎ ಓದಿಕೊಂಡಿದ್ದಾರೆ. ಸುಮ್ಮನೆ ಬ್ರಾಂಚುಗಳನ್ನು ಆರಂಭಿಸುವ ಬದಲು ಆನ್ ಲೈನ್ ಮಳಿಗೆ ತೆರೆಯುವುದು ಸೂಕ್ತ. ಇದರಿಂದ ಗ್ರಾಹಕರನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಬಹುದು ಅನ್ನುತ್ತಾರೆ ಲಕ್ಷ್ಮೀಶ.












Click it and Unblock the Notifications