ಅಂದೇ ಖರೀದಿ, ಅಂದೇ ಡೆಲಿವರಿ; ಹೊಸ ಇ-ಮಂತ್ರ

ಬೆಂಗಳೂರು, ಏ. 29: ಇ-ಕಾಮರ್ಸ್, ಇ ಶಾಪಿಂಗ್ ಎಂಬುದು ದಿನೇ ದಿನೆ ವೈವಿಧ್ಯಮಯವಾಗುತ್ತಿದ್ದು, ಜನರನ್ನು ಪರಿಣಾಮಕಾರಿಯಾಗಿ ತಲುಪುತ್ತಿದೆ. ಬೆಂಗಳೂರಿನ Flipkart ಕಂಪನಿ ಸಹ ತನ್ನ ಗ್ರಾಹಕರಿಗೆ ಮೌಲ್ಯಾಧಾರಿತ ಸೇವೆ ಒದಗಿಸಲು ಹಲವು ತಂತ್ರಗಳನ್ನು ಅಳವಡಿಸಿಕೊಂಡಿದೆ.

ಮುಖ್ಯವಾಗಿ ಅಂದೇ ಡ್ರಾ- ಅಂದೇ ಫಲಿತಾಂಶ ಅನ್ನುವಂತೆ 'ಗ್ರಾಹಕರು ಯಾವುದೇ ಉತ್ಪನ್ನವನ್ನು ಆರ್ಡರ್ ಮಾಡಿದ ದಿನವೇ ಅದನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತೇವೆ' ಎಂದು ಕಂಪನಿ ಹೇಳಿದೆ.

ಓಕೆ ಫೈನ್. ಅಕಸ್ಮಾತ್ ಅಂದೇ ಸರಕು ಡೆಲಿವರು ಆಗಲಿಲ್ಲಾಂದ್ರೆ ಏನಪ್ಪಾ ಅಂದರೆ ಮಾರನೆಯ ದಿನ ಆ ಸರಕು ನಿಮ್ಮ ಮನೆಯ ಬಾಗಿಲು ತಲುಪುತ್ತದೆ. ಆದರೆ ಸಂಪೂರ್ಣ ಉಚಿತವಾಗಿ! ಅಂದರೆ ಕಂಪನಿ ತನ್ನ ವಾಗ್ದಾನವನ್ನು ಉಳಿಸಿಕೊಳ್ಳಲಿಲ್ಲಾಂದ್ರೆ ಅದಕ್ಕೆ ದಂಡ ರೂಪದಲ್ಲಿ ಉಚಿತವಾಗಿ ಸರಕನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದಾಗಿ ತಿಳಿಸಿದೆ.

Same Day Guarantee Delivery:

bangalore-flipkart-e-commerce-same-day-guarantee-delivery-service

ಇದು ಬೆಂಗಳೂರು ಸೇರಿದಂತೆ ಒಟ್ಟು 10 ನಗರಗಳಲ್ಲಿ ಪ್ರಾಯೋಗಿಕವಾಗಿ ಸೋಮವಾರದಿಂದ ಜಾರಿಗೆ ಬಂದಿದೆ. ಯಾವುದೇ ದಿನ ಮಧ್ಯಾಹ್ನ 12 ಗಂಟೆಯೊಳಗಾಗಿ ಆರ್ಡರ್ ಪ್ಲೇಸ್ ಮಾಡಿದರೆ ಅಂದೇ (ರಾತ್ರಿ 9 ಗಂಟೆಯೊಳಗಾಗಿ) ಸರಕನ್ನು ಪಡೆಯಬಹುದು. ಆದರೆ ಇದಕ್ಕಾಗಿ 200 ರೂ ಹೆಚ್ಚು ಜ=ಹಣ ನೀಡಬೇಕಾಗುತ್ತದೆ.

Bangalore, Delhi, Mumbai, Kolkata, Noida, Gurgaon, Faridabad, Manesar, Navi Mumbai ಮತ್ತು Thaneಯಲ್ಲಿ ಈ ಸೇವೆ ಲಭ್ಯವಾಗುತ್ತಿದೆ. ಇದರ ಯಶಸ್ಸನ್ನು ನೋಡಿಕೊಂಡು ಇನ್ನೂ ಕೆಲವು ನಗರಗಳಿಗೆ ಸೇವೆಯನ್ನು ವಿಸ್ತರಿಸುವುದಾಗಿ ಕಂಪನಿ ಹೇಳಿದೆ.

ನಾಳೆಯೊಳಗೆ ಡೆಲಿವರಿ ಸೇವೆಯೂ ಇದೆ: ಅಂದರೆ ಇಂದು ಆರ್ಡರ್ ಪ್ಲೇಸ್ ಮಾಡಿದರೆ ನಾಳೆಯೊಳಗೆ ಸರಕು ಡೆಲಿವರಿ ಮಾಡುವ ಸೌಲಭ್ಯವೂ ಇದೆ. ಅದು ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ 25ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+