ಮಾರುಕಟ್ಟೆಗೆ ಬಂದಿವೆ ಮೋದಿ- ಕೇಜ್ರಿವಾಲ್ ಐಟಂಗಳು
ವಾರಣಾಸಿ,
ಏ.24: ಹಾಲಿ ಲೋಕಸಭಾ ಚುನಾವಣೆಯ ಮತ್ತೊಂದು ಮುಖ ಅನಾವರಣಗೊಂಡಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ, ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರುಗಳು ವಾರಣಾಸಿಯಿಂದಷ್ಟೇ ಪರಸ್ಪರ ಕದನಕ್ಕೆ ಇಳಿದಿಲ್ಲ. ಇವರಿಒಬ್ಬರ ನಡುವಣ ಕದನ ಕುತೂಹಲವು ಅಂತರ್ಜಾಲದಲ್ಲೂ ಇಣುಕಿದೆ. ಅದರಲ್ಲೂ e-commerceನಲ್ಲಿ. id="toptextpromo"> id='are-slot-1' class='oiad oi-axt oiadv'>ಇತ್ತೀಚೆಗಂತೂ
e-shopping ದೊಡ್ಡ ಫ್ಯಾಷನ್ ಆಗಿದೆ. ಇದರ ನಾಡಿಮಿಡಿತ ಅರಿತಿರುವ ಬೆಂಗಳೂರು ಮೂಲದ Flipkart ಕಂಪನಿ ಮೋದಿ ಮತ್ತು ಕೇಜ್ರಿವಾಲ್ ಹೆಸರಿನಲ್ಲಿ ಒಂದಷ್ಟು ಸರಕುಗಳನ್ನು ಮಾರಾಟಕ್ಕೆ ಬಿಟ್ಟಿದೆ. ಚುನಾವಣೆ ಸಮಯದಲ್ಲಿ ಬಿರುಬೇಸಿಗೆಯಲ್ಲಿ ಇಂತಹ ಉತನ್ನಗಳು ಬಿಸಿಬಿಸಿ ದೋಸೆಯಂತೆ ಖರ್ಚಾಗುತ್ತಿವೆ ಎನ್ನುತ್ತಾರೆ ಫ್ಲಿಪ್ ಕಾರ್ಟ್ ಕಂಪನಿಯ ಮಂದಿ.ನಿಮಗೂ ಇದು ಆಕರ್ಷಕವಾಗಿದ್ದು, ಆಸಕ್ತಿಯಿದ್ದರೆ ಒಮ್ಮೆ ಟ್ರೈ ಮಾಡಿ...ಅದಕ್ಕೂ ಮುನ್ನ trendy and stylish ಉತ್ಪನ್ನಗಳು ಹೇಗಿರುತ್ತವೆ ಎಂಬುದನ್ನು ಇಲ್ಲಿ ನೋಡಿ...(ಕೋಟಿಗಳಲ್ಲಿ ಎಣಿಸುತ್ತಿರುವ Flipkart ಸಂಸ್ಥಾಪಕರು)
id='are-slot-2' class='oiad oi-axt oiadv'>

ನಮೋ ಕಾಫಿ ಮಗ್
ತ್ರಿವರ್ಣ ಧ್ವಜರೂಪದಲ್ಲಿ ಕಂಗೊಳಿಸುತ್ತಿರುವ ನಮೋ ಕಾಫಿ ಮಗ್ ನಿಮಗಾಗಿ ಇಲ್ಲಿದೆ.
ಬೆಲೆ: 249 ರೂ. ಆದರೆ ಶೇ. 20ರ ರಿಯಾಯಿತಿಯೊಂದಿಗೆ 199 ರೂ. ಗೆ ಲಭ್ಯವಾಗುತ್ತದೆ.

ಕೇಜ್ರಿವಾಲ್ ಕಾಫಿ ಮಗ್
ಅರವಿಂದ ಕೇಜ್ರಿವಾಲ್ ಅವರು ನಿಮ್ಮ ನೆಚ್ಚಿನ ನಾಯಕರಾಗಿದ್ದರೆ ತಡವೇಕೆ ಈ ಕಾಫಿ ಮಗ್ ಮಾಡಿ.
ಬೆಲೆ: 395 ರೂ. ಆದರೆ ಶೇ. 22ರ ರಿಯಾಯಿತಿಯೊಂದಿಗೆ 295 ರೂ. ಗೆ ಲಭ್ಯ.

ನಮೋ ಮಗ್
ಇದು ನಿಮಗಾಗಿ. ನರೇಂದ್ರ ಮೋದಿ ಮಗ್.
ಬೆಲೆ: 249 ರೂ. ಆದರೆ ಶೇ. 20ರ ರಿಯಾಯಿತಿಯೊಂದಿಗೆ 199 ರೂ. ಗೆ ಲಭ್ಯವಾಗುತ್ತದೆ.

ಈ ಮಗ್ ಟ್ಯಾಗ್ ಲೈನ್ - ನಾನೂ ಆಮ್ ಆದ್ಮಿ!
ಪಕ್ಷದ ಆದರ್ಶಗಳಿಗೆ ಅನುಗುಣವಾಗಿ ಜನಸಾಮಾನ್ಯರ ಚಹಾ ಕಪ್. ಮಗ್ ಟ್ಯಾಗ್ ಲೈನ್ ನಾನೂ ಆಮ್ ಆದ್ಮಿ! ನೀವೂ ಆಮ್ ಆದ್ಮಿ ಆಗಿದ್ದರೆ ಇದನ್ನು ಖರೀದಿಸಬಹುದು.
ಬೆಲೆ: 395 ರೂ. ಆದರೆ ಶೇ. 25ರ ರಿಯಾಯಿತಿಯೊಂದಿಗೆ 295 ರೂ. ಗೆ ಲಭ್ಯವಾಗುತ್ತದೆ.

ಮೋದಿ ನೋಟ್ ಬುಕ್
ನರೇಂದ್ರ ಮೋದಿಯ ಕಟ್ಟಾ ಅಭಿಮಾನಿಗಳಿಗಾಗಿ ಸ್ಪೈರಲ್ ನೋಟ್ ಬುಕ್ ಇಲ್ಲಿದೆ.
ಬೆಲೆ: 199 ರೂ + ರೂ 30 (Delivery charges)

ಕಾಫಿ ಮಗ್ ನಲ್ಲಿ ಭ್ರಷ್ಟಾಚಾರ ವಿರೋಧಿ ಅಲೆ
ಮತ್ತೆ ಹೇಳಬೇಕೆಂದರೆ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಕಮ್ ರಾಜಕಾರಣಿ ಅರವಿಂದ ಕೇಜ್ರಿವಾಲ್ ಅವರ ಹಾದಿಯಲ್ಲಿ ಸಾಗಬೇಕೆಂದರೆ ಮತ್ತು ಭ್ರಷ್ಟಾಚಾರವನ್ನು ದೇಶದಿಂದ
ನಿರ್ಮೂಲನೆ ಮಾಡಬೇಕೆಂದರೆ ಇಲ್ಲಿಂದಲೇ ನಿಮ್ಮ ಹೋರಾಟ ಆರಂಭವಾಗಲಿ!
ಬೆಲೆ: 395 ರೂ. ಆದರೆ ಶೇ. 25 ಡಿಸ್ಕೌಂಟ್ ನೊಂದಿಗೆ 295 ರೂ. ಗೆ ಲಭ್ಯವಿದೆ.

ಲ್ಯಾಪ್ ಟಾಪ್ ಮೇಲೆ ನಮೋ
ಮ್ಯಾಟ್ ಶೀಟ್ ನಲ್ಲಿ ನಮೋ ಚಿತ್ರವಿರುವ ಲ್ಯಾಪ್ ಟಾಪ್ ಮೋದಿ ಭಕ್ತರಿಗಾಗಿ...ಮೊದಲು ಭಾರತ ಎಂಬ ಘೋಷ ವಾಕ್ಯವೂ ಝಗಮಗಾಯಿಸುತ್ತಿದೆ.
ಬೆಲೆ: 299 ರೂ. ಆದರೆ ಶೇ. 1ರ ಡಿಸ್ಕೌಂಟ್ ನೊಂದಿಗೆ 295 ರೂ. ಗೆ ಲಭ್ಯವಿದೆ.

ಹ್ಯಾರಿ ಪಾಟರ್ ಸ್ಟೈಲಿನಲ್ಲಿ ಕೇಜ್ರಿವಾಲ್!
ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಅವರೇ ನಿಮ್ಮ ಸೂಪರ್ ಹೀರೊ ಆಗಿದ್ದರೆ ಈ ಪೋಸ್ಟರ್ ಅನ್ನು ನೀವು ಖರೀದಿಸಲೇಬೇಕು.
ಬೆಲೆ: 495 ರೂ. ಆದರೆ ಶೇ. 30 ಡಿಸ್ಕೌಂಟ್ ನೊಂದಿಗೆ 345 ರೂ. ಗೆ ಲಭ್ಯವಿದೆ.

ಸಂದೇಶದೊಂದಿಗೆ ಮೋದಿ ಪೋಸ್ಟರ್!
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಆಟೋಗ್ರಾಫ್ ಮತ್ತು ದೇಶಭಕ್ತಿಯ ಸಂದೇಶದೊಂದಿಗೆ ಇದು ಬೇಕೆಂದರೆ
ಬೆಲೆ: 299 ರೂ. ಆದರೆ ಶೇ. 43ರ ಡಿಸ್ಕೌಂಟ್ ನೊಂದಿಗೆ 169 ರೂ. ಗೆ ಲಭ್ಯವಿದೆ.

ಆಮ್ ಆದ್ಮಿಗಳಿಗೆ ಕುಷನ್ ಸಹ ಲಭ್ಯ
ಒಂದಷ್ಟು ವಿಶ್ರಮಿಸೋಣ ಅನ್ನುವವರಿಗೆ ಈ ಹಳದಿ ಬಣ್ಣದ ಸರಕು
ಬೆಲೆ: 495 ರೂ. ಆದರೆ ಶೇ. 20 ಡಿಸ್ಕೌಂಟ್ ನೊಂದಿಗೆ 395 ರೂ. ಗೆ ಲಭ್ಯವಿದೆ.












Click it and Unblock the Notifications