ನೋಕಿಯಾದ ನಕಲಿ ಮೊಬೈಲ್ ಮಾರಾಟಗಾರರ ಸೆರೆ
ಬೆಂಗಳೂರು ಸೆ. 22 : ಮಿಂಚಿನ ದಾಳಿ ನಡೆಸಿರುವ ರಾಜರಾಜೇಶ್ವರಿನಗರ ಪೊಲೀಸರು ಐವರು ನೋಕಿಯಾ ಕಂಪನಿಯ ನಕಲಿ ಮೊಬೈಲ್ ಮಾರಾಟಗಾರರನ್ನು ಬಂಧಿಸಿ ಏಳು ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸುಮಾರು 195 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಕುಣಿಗಲ್-ನೆಲಮಂಗಲ ರಸ್ತೆಯ ಬದಿ ಜೋಪಡಿಯಲ್ಲಿ ವಾಸಿಸುತ್ತಿದ್ದ ಮಹಾರಾಷ್ಟ್ರದ ಜಲಗಾವ್ ಜಿಲ್ಲೆಯ ಐವರನ್ನು ಬಂಧಿಸಲಾಗಿದೆ. ಶಾಂತಾ(35), ಜಮುನಾ(30), ಸರ್ದಾರ್(36), ಕಿಶೋರ್(26) ಮತ್ತು ಪಿಓಟಿ ಮೋಹನ್ ಬಂಧಿತರು.(ವೈಷ್ಣೋದೇವಿ ಹುಂಡಿಯಲ್ಲಿ ನಕಲಿ ಚಿನ್ನ ಬೆಳ್ಳಿ ಆಭರಣ)

ಆರೋಪಿಗಳಿಂದ ಗೋಮ್ಯಾಕ್ ಕಂಪನಿಯ 110, ಡರಾಗೋ ಕಂಪನಿಯ 53 ಮತ್ತು ನೋಕಿಯಾದ 22 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಮುಂಬೈನ ಮನೀಶ್ ಮಾರ್ಕೆಟ್‌ನಲ್ಲಿ ಕಳವು ಮಾಡಿದ್ದ ಮೊಬೈಲ್‌ಗಳಿಗೆ ನೋಕಿಯಾ ಕಂಪನಿ ಸ್ಟಿಕರ್ ಅಂಟಿಸಿ ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.(ಶಿವಮೊಗ್ಗː ಮಾಚೇನಹಳ್ಳಿ ಎಸ್‌ಬಿಎಂ ಬ್ಯಾಂಕ್ ದರೋಡೆ)
ಕಾರ್ಯಾಚರಣೆಯಲ್ಲಿ ರಾಜರಾಜೇಶ್ವರಿನಗರ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಮಂಜುನಾಥ್, ಪಿಎಸ್‌ಐ ನರೇಶ್ ನಾಯ್ಕ್, ಕೆ.ಎಸ್.ಗಂಗಾಧರ್, ಮಹದೇವಯ್ಯ, ಸೋಮಶೇಖರ್, ಇಲಿಯಾಜ್ ಖಾನ್, ಅಶೋಕ್ ಕೆ.ಎಚ್, ಅಶೋಕ್ ಕುಮಾರ್, ಜಗದೀಶ್, ನಾಗರಾಜು, ಅನಸೂಯ ಮತ್ತು ಕುಮಾರಿ ಭಾಗವಹಿಸಿದ್ದರು.












Click it and Unblock the Notifications