ರೋಗಬಾಧೆ: ಬೆಂಗಳೂರಿನಲ್ಲಿ ವೃದ್ಧ ವೈದ್ಯ ಆತ್ಮಹತ್ಯೆ

ಮೂಲತಃ ತಮಿಳುನಾಡಿನವರಾದ ಡಾ. ಚಂದ್ರಶೇಖರ ಪಟ್ಟಾಭಿರಾಮನ್ ಅವರು ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (NIC) ನಲ್ಲಿ ದಿಲ್ಲಿ ಮತ್ತು ಪುಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಿವೃತ್ತಿಯ ಬಳಿಕ ಪತ್ನಿ ಭಾನುಮತಿಯ ಜತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ಮೃತರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಒಬ್ಬರು (ವಿದ್ಯಾ) ವೈಟ್ ಫೀಲ್ಡಿನಲ್ಲಿ ವಾಸವಾಗಿದ್ದರೆ ಮತ್ತೊಬ್ಬರು (ಸುಜಾತಾ)ಸಿಂಗಾಪುರದಲ್ಲಿದ್ದಾರೆ.
ಚಂದ್ರಶೇಖರ ಪಟ್ಟಾಭಿರಾಮನ್ ದಂಪತಿ ಅನ್ಶುಮಾನ್ ಅಪಾರ್ಟ್ ಮೆಂಟಿನ ಎರಡನೆಯ ಮಹಡಿಯಲ್ಲಿ ವಾಸವಾಗಿದ್ದರು. ಆದರೆ ನಿನ್ನೆ ಮಧ್ಯಾಹ್ನ ಪತ್ನಿ ಹೊರಹೋಗಿದ್ದಾಗ ನಾಲ್ಕನೆಯ ಮಹಡಿಗೆ ಹತ್ತಿಹೋದ ಡಾ. ಚಂದ್ರಶೇಖರ ಪಟ್ಟಾಭಿರಾಮನ್ ಅವರು ಅಲ್ಲಿಂದ ನೇರವಾಗಿ ಕೆಳಗೆ ಹಾರಿಬಿದ್ದು ಪ್ರಾಣಬಿಟ್ಟಿದ್ದಾರೆ.
ಕೆಳಗೆ ಬಿದ್ದ ರಭಸಕ್ಕೆ ಅವರ ತಲೆ ಛಿದ್ರವಾಗಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೂಸೈಡ್ ನೋಟ್ ಬರೆದಿಟ್ಟು ಸತ್ತಿರುವ ಡಾ. ಚಂದ್ರಶೇಖರ ಪಟ್ಟಾಭಿರಾಮನ್ ತನ್ನ ಸಾವಿಗೆ ಬೇರೆ ಯಾರೂ ಕಾರಣರಲ್ಲ. ಅನಾರೋಗ್ಯದಿಂದಾಗಿ ಸಾವನ್ನಪ್ಪುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಾಧೆಗೊಳಗಾಗಿದ್ದ ಚಂದ್ರಶೇಖರ ಪಟ್ಟಾಭಿರಾಮನ್ ಅದೇ ವಿಷಯವಾಗಿ ಖಿನ್ನತೆಗೀಡಾಗಿದ್ದರು. ಹಾಗಾಗಿ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಎಂದು ಕುಟುಂಬದ ಮೂಲಗಳನ್ನು ಉಲ್ಲೇಖೀಸಿ, ಪೊಲೀಸರು ತಿಳಿಸಿದ್ದಾರೆ.


Click it and Unblock the Notifications
