ಸಿಬಿಎಸ್‌ಇ ಪ್ರಥಮ ಸ್ಥಾನ: ಬೆಂಗಳೂರಿನ ಸೃಷ್ಟಿ ಸಂದರ್ಶನ

ಸಿಬಿಎಸ್‌ಇ ಫಲಿತಾಂಶ ಪ್ರಕಟಗೊಂಡಿದೆ. ಬೆಂಗಳೂರಿನ ಇಂದಿರಾನಗರದ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ವಿದ್ಯಾರ್ಥಿನಿ ಸೃಷ್ಟಿ ಸಿನ್ಹಾ ಸಿಬಿಎಸ್‌ಇ 12ನೇ ತರಗತಿಯಲ್ಲಿ ಟಾಪರ್‌ ಆಗಿ ಹೊರ ಹೊಮ್ಮಿದ್ದಾರೆ.

ಮುಂದೆ ಅಮೆರಿಕದಲ್ಲಿ ಶಿಕ್ಷಣ ಮುಂದುವರೆಸಲಿರುವ ಸೃಷ್ಟಿಯವರನ್ನು careerindia.com ಮಾತನಾಡಿಸಿದ್ದು ಅವರ ಸಾಧನೆಯ ಯಶಸ್ಸಿನ ಗುಟ್ಟನ್ನು ಹೇಳಿದ್ದಾರೆ.

ಸೃಷ್ಟಿಯವರು ಸಿಬಿಎಸ್‌ಇಯಲ್ಲಿ 12 ತರಗತಿಯಲ್ಲಿ ಶೇ. 98.2 ಅಂಕಗಳಿಸಿ ಉತ್ತೀರ್ಣ‌ರಾಗಿದ್ದಾರೆ. ಇಂಗ್ಲಿಷ್‌‌ 95, ಗಣಿತ 99, ಭೌತಶಾಸ್ತ್ರ 98, ರಾಸಾಯನ ಶಾಸ್ತ್ರ 100, ಕಂಪ್ಯೂಟರ್‌ ಸೈನ್ಸ್‌ 99 ಅಂಕಗಳಿಸಿದ್ದಾರೆ.

Srishti Sinha cbse topper

ಮುಂದೆ ಎಲ್ಲಿ ಓದಬೇಕು ಎಂದು ನಿರ್ಧರಿಸಿದ್ದೀರಿ?
ಜಾನ್‌ ಜೆ ಸ್ಕಾಲರ್‌ ಶಿಪ್‌ ಸಿಕ್ಕಿರುವುರಿಂದ ಮುಂದೆ ನ್ಯೂಯಾರ್ಕ್‌‌ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಲಿಬರಲ್‌ ಆರ್ಟ್ಸ್‌ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಪದವಿ ಮಾಡಬೇಕೆಂದಿದ್ದೇನೆ.

ಬೇರೆ ಯಾವುದಾದರೂ ಕಾಲೇಜುಗಳನ್ನು ಸಂಪರ್ಕ ಮಾಡಿದ್ದೀರಾ?
ಹೌದು. Cornell, UC Berkeley, UCL, ಬೋಸ್ಟನ್‌ ವಿಶ್ವವಿದ್ಯಾಲಯ,ಯುಎಸ್‌ಸಿ ಕಾಲೇಜುಗಳನ್ನು ಸಂಪರ್ಕಿ‌ಸಿದ್ದೆ.

ಪಾಠ್ಯೇತರ ಚಟುವಟಿಕೆ?
ಚರ್ಚೆ‌, ಗಿಟಾರ್‌‌ ನುಡಿಸುತ್ತೇನೆ. ಕಾಲೇಜಿನ ಸಾಹಿತ್ಯ ಸಂಘಟನೆಯಲ್ಲಿ ಅಧ್ಯಕ್ಷೆಯಾಗಿದ್ದೆ.

ಸಾಧನೆಗೆ ಏನು ಕಾರಣ?
ಫಲಿತಾಂಶಕ್ಕಾಗಿ ಚಿಂತೆ ಮಾಡುತ್ತಿರಲಿಲ್ಲ. ಚೆನ್ನಾಗಿ ಓದಿಕೊಳ್ಳುತ್ತಿದ್ದೆ. ಆ ಫಲದಿಂದಾಗಿ ಈ ಫಲಿತಾಂಶ ಬಂದಿದೆ.

ಸಾಧನೆಗೆ ಪ್ರೇರಣೆ ಏನು?
ನನ್ನ ಸಾಧನಗೆ ಪೋಷಕರೇ ಕಾರಣ. ಅವರ ಪ್ರೋತ್ಸಾಹ ಇಲ್ಲದಿದ್ದಲ್ಲಿ ಈ ಸಾಧನೆಗೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಜೊತಗೆ
ರಾಸಾಯನ ಶಾಸ್ತ್ರ ಮತ್ತು ಇಂಗ್ಲಿಷ್‌ ಟೀಚರ್‌ ಸಹಾಯವನ್ನು ಈ ಸಂದರ್ಭದಲ್ಲಿ ಮರೆಯಲು ಸಾಧ್ಯವಿಲ್ಲ.

ಕಿರಿಯರಿಗೆ ಸಲಹೆ
ಭವಿಷ್ಯದ ಬಗ್ಗೆ ಸರಿಯಾದ ನಿರ್ಧಾರವಿಲ್ಲ ಎಂದು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಸಿಕ್ಕಿದ ಅವಕಾಶಗಳನ್ನು ಚೆನ್ನಾಗಿ ಬಳಸಿ. ಜೊತೆಗೆ ಕಲಿಕೆಯ ವೇಳೆ ಎಂಜಾಯ್‌ ಮಾಡಲು ಮರೆಯದಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+