ಬೆಂಗಳೂರಿಗೆ ಬರುವ-ಹೊರಡುವ ಹಲವು ರೈಲುಗಳು ಜನವರಿ 1-5ವರೆಗೆ ಭಾಗಶಃ ರದ್ದು, ಪಟ್ಟಿ ಇಲ್ಲಿದೆ

ಬೆಂಗಳೂರು: ಹೊಸ ವರ್ಷದ ಅರಂಭದಲ್ಲಿ (ಜನವರಿ 1-5ವರೆಗೆ) ಬೆಂಗಳೂರಿನಿಂದ ವಿವಿಧೆಡೆ ಹೊರಡುವ ಕೆಲವು ರೈಲುಗಳ ಸಂಚಾರವು ಕಾಮಗಾರಿ ಕಾರಣಕ್ಕೆ ಭಾಗಶಃ ರದ್ದಾಗಿದೆ. ಇನ್ನೂ ಕೆಲವು ರೈಲುಗಳು ಸಂಚಾರದ ಅರಂಭಿಕ ಸ್ಥಳ ಬದಲಾವಣೆ ಆಗಿದೆ ಎಂದು ನೈಋತ್ಯ ರೈಲ್ವೆ (South Western Railway) ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ. ಯಾವೆ ರೈಲುಗಳಲ್ಲಿ ಬದಲಾವಣೆ ಆಗಿದ್ದ, ರದ್ದಾಗಿವೆ ಎಂಬ ಮಾಹಿತಿ ಇಲ್ಲಿದೆ.

ಬಾನಸವಾಡಿ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ಮಾರ್ಗದಲ್ಲಿ ನಾನ್ ಇಂಟರ್‌ಲಾಕಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರ ಪರಿಣಾಮ ಒಟ್ಟು 27 ರೈಲುಗಳ ಮೇಲಾಗಲಿದೆ. ಅದರಲ್ಲಿ ಕೆಲವು ಮಾರ್ಗ ಬದಲಾವಣೆ ಮತ್ತು ಕೆಲವು ಭಾಗಶಃ ರದ್ದಾಗಿವೆ. ಯಾವೆಲ್ಲ ಮಾರ್ಗದ ರೈಲುಗಳು, ಅವುಗಳ ಸಂಖ್ಯೆ, ನಿಲ್ದಾಣಗಳ ವಿವರ ಇಲ್ಲಿದೆ.

Banaswadi-SMVT Bengaluru Rail Route Emergency work Many Train Partially Cancelled

ಎಸ್‌ಎಂವಿಟಿ ಬೆಂಗಳೂರು ನಿಲ್ದಾಣ ಮೂಲಕವಾಗಿ ಸಂಚರಿಸಬೇಕಿದ್ದ ಹಲವು ರೈಲುಗಳು ತಾತ್ಕಾಲಿಕವಾಗಿ ಬೆಂಗಳೂರು ಕಂಟೋನ್ಮೆಂಟ್, ಬೈಯಪ್ಪನಹಳ್ಳಿ, ಯಲಹಂಕ ಹಾಗೂ ಯಶವಂತಪುರ ರೈಲು ನಿಲ್ದಾಣಗಳಿಂದ ಹೊರಡುವಂತೆ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳು ನಿಗದಿತ ಸಮಯದಲ್ಲೇ ಆದರೆ ಬೇರೆ ನಿಲ್ದಾಣಗಳಿಂದ ಪ್ರಯಾಣ ಆರಂಭಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾಗಶಃ ರದ್ದಾದ ರೈಲುಗಳು ಪಟ್ಟಿ ಇಲ್ಲಿದೆ

ಈ ಕೆಳಗಿನ ರೈಲುಗಳು ಕೃಷ್ಣರಾಜಪುರಂ - ಎಸ್‌ಎಂವಿಟಿ ಬೆಂಗಳೂರು ನಡುವೆ ಭಾಗಶಃ ರದ್ದಾಗಿವೆ. ಅವುಗಳ ಪಟ್ಟಿ ಇಲ್ಲಿದೆ.

1. ಟಾಟಾನಗರ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (12889)

2. ಹೌರಾ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (12863)

3. ದಾನಾಪುರ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (12296)

4. ತಿರುಪತಿ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (22617)

5. ಎಸ್‌ಎಂವಿಟಿ ಬೆಂಗಳೂರು - ಟಾಟಾನಗರ ಎಕ್ಸ್‌ಪ್ರೆಸ್ ರೈಲು (12890)

ಎಸ್‌ಎಂವಿಟಿ ಬೆಂಗಳೂರು - ಬೈಯಪ್ಪನಹಳ್ಳಿ ನಡುವೆ ಭಾಗಶಃ ರದ್ದಾದ ರೈಲುಗಳ ವಿವರ

6. ಎಸ್‌ಎಂವಿಟಿ ಬೆಂಗಳೂರು - ಹೌರಾ ಎಕ್ಸ್‌ಪ್ರೆಸ್ ರೈಲು (12864)

7. ಎಸ್‌ಎಂವಿಟಿ ಬೆಂಗಳೂರು - ದಾನಾಪುರ ಎಕ್ಸ್‌ಪ್ರೆಸ್ ರೈಲು (12295)

8. ಎಸ್‌ಎಂವಿಟಿ ಬೆಂಗಳೂರು - ಕಾಕಿನಾಡಾ ಎಕ್ಸ್‌ಪ್ರೆಸ್ ರೈಲು (17209)

9. ಎಸ್‌ಎಂವಿಟಿ ಬೆಂಗಳೂರು - ನಾಗರಕೋಯಿಲ್ ಎಕ್ಸ್‌ಪ್ರೆಸ್ ರೈಲು (17235)

10. ಎಸ್‌ಎಂವಿಟಿ ಬೆಂಗಳೂರು - ತಿರುವನಂತಪುರಂ ನಾರ್ಥ್ ಎಕ್ಸ್‌ಪ್ರೆಸ್ ರೈಲು (16320)

11. ಎಸ್‌ಎಂವಿಟಿ ಬೆಂಗಳೂರು - ಕಾರೈಕಲ್ ಎಕ್ಸ್‌ಪ್ರೆಸ್ ರೈಲು (16529)

ಸಂಚಾರ ನಿಲ್ದಾಣ ಬದಲಿಸಿದ ರೈಲುಗಳ ವಿವರ

12. ಎಸ್‌ಎಂವಿಟಿ ಬೆಂಗಳೂರು - ತಿರುಪತಿ ಎಕ್ಸ್‌ಪ್ರೆಸ್ ರೈಲು (22618)

13. ಎಸ್‌ಎಂವಿಟಿ ಬೆಂಗಳೂರು - ಪಾಟ್ನಾ ಎಕ್ಸ್‌ಪ್ರೆಸ್ ರೈಲು (22354)

14. ಎಸ್‌ಎಂವಿಟಿ ಬೆಂಗಳೂರು - ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು (16377)

15. ನಾಗರಕೋಯಿಲ್ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (17236)

16. ಕಾಕಿನಾಡಾ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (17210)

17. ತಿರುವನಂತಪುರಂ ನಾರ್ಥ್ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (16319)

18. ಕಾರೈಕಲ್ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (16530)

19. ಎರ್ನಾಕುಲಂ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (16378)

20. ಕಲಬುರಗಿ - ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22231)

21. ಗ್ವಾಲಿಯರ್ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (11086)

22. ಬೀದರ್ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (06540)

23. ಎಸ್‌ಎಂವಿಟಿ ಬೆಂಗಳೂರು - ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (22232)

24. ಎಸ್‌ಎಂವಿಟಿ ಬೆಂಗಳೂರು - ಬೀದರ್ ಎಕ್ಸ್‌ಪ್ರೆಸ್ ರೈಲು (06539)

25. ಎಸ್‌ಎಂವಿಟಿ ಬೆಂಗಳೂರು - ಗ್ವಾಲಿಯರ್ ಎಕ್ಸ್‌ಪ್ರೆಸ್ ರೈಲು (11085)

26. ಹೌರಾ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (12245)

27. ಜಾಸಿದಿಹ್ ಜಂಕ್ಷನ್ - ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (22306)

ಕಾಮಗಾರಿ ಹಿನ್ನೆಲೆ ತಾತ್ಕಾಲಿಕವಾಗಿ ಹೀಗೆ ಬದಲಾವಣೆ ಆಗಿದ್ದು, ಪ್ರಯಾಣಿಕರು ಪ್ರಯಾಣಕ್ಕೂ ಮೊದಲು ಹತ್ತಬೇಕಾದ ರೈಲುಗಳ ಸಂಖ್ಯೆ, ಆರಂಭಿಕ ನಿಲ್ದಾಣ ಹಾಗೂ ಸಮಯವನ್ನು ಅಧಿಕೃತ ರೈಲ್ವೆ ವೆಬ್‌ಸೈಟ್ (https://www.indianrail.gov.in/enquiry/SEAT/SeatAvailability.html?locale=en) ಅಥವಾ ಐಆರ್‌ಸಿಟಿಸಿ ಆಪ್ ಮೂಲಕ ಪರಿಶೀಲಿಸಬೇಕು. ಕಾಮಗಾರಿ ಪೂರ್ಣವಾದ ನಂತರ ರೈಲುಗಳ ಸಂಚಾರ ಮೊದಲಿನಂತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+