OYO: ಬೆಂಗಳೂರಿನಲ್ಲೂ ಓಯೋ ರೂಮ್ಸ್‌ನಲ್ಲಿ ಪ್ರೇಮಿಗಳಿಗೆ ಜಾಲಿ ಮಾಡಲು ಬಿಡ್ಬೇಡಿ: ಆಯುಕ್ತರಿಗೆ ಮನವಿ, ಧಂಗಾದ ಪ್ರೇಮಿಗಳು
OYO Room: 2025ರ ಹೊಸ ವರ್ಷದ ದಿನದಂದು ದಾಖಲೆ ಮಟ್ಟದಲ್ಲಿ ಓಯೋ ರೂಂಗಳ ಬುಕಿಂಗ್ ಹಾಗೂ ಹೆಚ್ಚು ಕಾಂಡೋಮ್ ಮಾರಾಟವಾಗಿವೆ ಎಂದು ವರದಿ ಹೊರಬಿದ್ದಿತ್ತು. ಈ ವರದಿ ಬಂದ ಬೆನ್ನಲ್ಲೇ ಉತ್ತರ ಪ್ರದೇಶದ ಹಲವೆಡೆ ಅವಿವಾಹಿತರಿಗೆ ಓಯೋ ರೂಮ್ ಪ್ರವೇಶಕ್ಕೆ ನಿರ್ಬಂಧದ ನಿಯಮ ಹೊರಡಿಸಲಾಗಿತ್ತು. ಇದೀಗ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಕೂಡ ಇದೇ ಮಾತು ಕೇಳಿಬರುತ್ತಿದೆ.
ಹೊಸ ವರ್ಷ ಬಂತೆಂದರೆ ಸಾಕು ಅದೆನೋ ಗೊತ್ತಿಲ್ಲ ಸಾಮಾನ್ಯ ದಿನಗಳಿಗಿಂತಲೂ ದಾಖಲೆ ಮಟ್ಟದಲ್ಲಿ ಓಯೋ ರೂಮ್ಸ್ ಬುಕಿಂಗ್ ಆಗುತ್ತವೆ ಎನ್ನುವ ವರದಿ ಹೊರಬೀಳುತ್ತಲೇ ಇದೆ. ಇನ್ನು ದೇಶದ ಬಹುತೇಕ ರಾಜ್ಯಗಳಲ್ಲಿ ಒಯೋ ಸಂಸ್ಥೆ ರೂಮ್ಸ್‌ಗಳನ್ನು ಒಳಗೊಂಡಿದೆ. ಒಂದು ಕಡೆ ನೋಡುವುದಾದರೆ, ಬೇರೆಡೆಯಿಂದ ಬಂದವರಿಗೆ ಉಳಿದುಕೊಳ್ಳಲು ಇದು ಒಂದು ಉತ್ತಮ ವ್ಯವಸ್ಥೆ ಅಂತಲೂ ಹೇಳಬಹುದಾಗಿದೆ.

ಪ್ರೇಮಿಗಳು, ದಂಪತಿ ಸೇರಿದಂತೆ ಎಲ್ಲರಿಗೂ ಕಡಿಮೆ ದರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸುವ ಓಯೋ ಹೆಚ್ಚಾಗಿ ಅವಿವಾಹಿತ ಪ್ರೇಮಿಗಳಿಗೆಂದೇ ಪ್ರಸಿದ್ಧಿಯಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ನೋಡುವುದಾದರೆ, ಇದು ದೂರದ ಊರುಗಳಿಂದ ಬಂದಂತಹವರಿಗೆ ಕಡಿಮೆ ದರದಲ್ಲಿ ರೂಮ್ಸ್‌ಗಳನ್ನು ಒದಗಿಸುವ ಸಂಸ್ಥೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಅವಿವಾಹಿತರೇ ಓಯೋ ರೂಮ್‌ಗಳನ್ನು ಬಾಡಿಗೆ ತೆಗೆದುಕೊಂಡು ಲೈಂಗಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಎನ್ನುವ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆ ಓಯೋ ಸಂಸ್ಥೆ ಕೂಡ ತನ್ನ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
2025ರ ಹೊಸ ವರ್ಷದಿಂದ ಓಯೋ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಅವಿವಾಹಿತರಿಗೆ ಓಯೋ ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ನೀಡುವಂತೆ ಹೊಸ ನಿಯಮವನ್ನು ಜಾರಿ ಮಾಡಿದೆ. ಈ ಬೆನ್ನಲ್ಲೇ ಬೆಂಗಳೂರಿನಲ್ಲಿಯೂ ಸಹ ಈ ನಿಯಮವನ್ನು ಜಾರಿಗೆ ತರುವಂತೆ ಒತ್ತಾಯಗಳು ಕೇಳಿಬಂದಿವೆ.
ಬೆಂಗಳೂರಿನಲ್ಲೂ ಕೂಡ ಇಂತಹ ನಿರ್ಧಾರ ಕೈಗೊಳ್ಳುವಂತೆ ಭಜರಂಗದಳ ಕಾರ್ಯಕರ್ತರು ಬಿಬಿಎಂಪಿ ಆಯುಕ್ತರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
"ಹೋಂ ಸ್ಟೇ, ಲಾಡ್ಜ್, ಸರ್ವೀಸ್ ಅಪಾರ್ಟ್ಮೆಂಟ್‌ಗಳು, ಹೋಟೆಲ್‌ಗಳಲ್ಲಿ ಅವಿವಾಹಿತರಿಗೆ ಅವಕಾಶ ನೀಡಬಾರದು. ಅವಿವಾಹಿತರಿಗೆ ಉಳಿದುಕೊಳ್ಳಲು ಅವಾಕಾಶ ನೀಡುವುದರಿಂದ ಯುವಜನತೆ ತಪ್ಪು ದಾರಿ ಹಿಡಿಯುವ ಸಾಧ್ಯತೆಯಿದೆ. ಇದರಿಂದ ಪವಿತ್ರ ಸ್ಥಳಗಳು ಅನೈತಿಕ ಚಟುವಟಿಕೆಗಳ ತಾಣ ಆಗಿಬಿಡುತ್ತದೆ. ಆದ್ದರಿಂದ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದೊದೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ಪರಿಷ್ಕೃತ ಚೆಕ್ ಇನ್ ನಿಯಮಗಳನ್ನು ಜಾರಿಗೊಳಿಸಿದ ಒಯೋ ಸಂಸ್ಥೆ, ಇದೇ ನಿಯಮವನ್ನು ಮುಂದಿನ ದಿನಗಳಲ್ಲಿ ದೇಶಾದ್ಯಂತ ಜಾರಿಗೆ ತರುವುದಾಗಿ ಸಂಸ್ಥೆ ಘೋಷಿಸಿದೆ. ಹೊಸ ಓಯೋ ರೂಂ ಚೆಕ್ ಇನ್ ನಿಯಮದ ಪ್ರಕಾರ, ವಿವಾಹಿತರು ಯಾವ ಐಡಿ ಪ್ರೂಫ್ ನೀಡಬೇಕೆಂಬ ಬಗ್ಗೆ ಸಂಸ್ಥೆ ಇನ್ನೂ ಸ್ಪಷ್ಟನೆ ನೀಡಿಲ್ಲ. ಈಗಾಗಲೇ ಈ ನಿಯಮದ ವಿರುದ್ಧ ಯುವಪ್ರೇಮಿಗಳು ರೊಚ್ಚಿಗೆದ್ದ ಘಟನೆಗಳು ಕೂಡ ಹಲವೆಡೆ ನಡೆದಿವೆ. ಒಂದು ವೇಳೆ ದೇಶಾದ್ಯಂತ ಈ ನಿಯಮ ಜಾರಿಯಾದ್ರೆ, ಪ್ರೇಮಿಗಳಿಗೆ ತುಂಬಾ ಕಷ್ಟವೋ ಕಷ್ಟ.












Click it and Unblock the Notifications