B Khata to A Khata: ಬಿ ಖಾತಾದಿಂದ ಎ ಖಾತಾಗೆ ಬದಲಾವಣೆ ಈಗ ಸುಲಭ: ಹೊಸ ಗೈಡ್‌ಲೈನ್ಸ್‌ ವ್ಯಾಲ್ಯೂ ನಿಯಮ ಏನು?

B Khata to A Khata: ಬೆಂಗಳೂರಿನ ಆಸ್ತಿದಾರರಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಬಿ ಖಾತಾ ಆಸ್ತಿ ಹೊಂದಿರುವವರಿಗೆ ಗುಡ್‌ನ್ಯೂಸ್ ಕೊಡಲಾಗಿದೆ. ಬಿ ಖಾತಾದಿಂದ ಎ ಖಾತಾ ಪರಿವರ್ತನೆಯ ಗೈಡ್‌ಲೈನ್ಸ್‌ ವ್ಯಾಲ್ಯೂ ಪ್ರಮಾಣವನ್ನು ಶೇ5ರಿಂದ ಶೇ 2ಕ್ಕೆ ಇಳಿಕೆ ಮಾಡಲಾಗಿದೆ. ಹಾಗಾದರೆ ಏನಿದು ಬಿ ಖಾತಾದಿಂದ ಎ ಖಾತಾ ಪರಿವರ್ತನೆಯಲ್ಲಿನ ಪ್ರಕ್ರಿಯೆ ಹಾಗೂ ಗೈಡ್‌ಲೈನ್ಸ್‌ ವ್ಯಾಲ್ಯೂ ಲೆಕ್ಕಾಚಾರ ಹೇಗೆ ನಡೆಯುತ್ತದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಕರ್ನಾಟಕ ಸರ್ಕಾರವು ಅವಕಾಶ ಮಾಡಿಕೊಟ್ಟಿದೆಯಾದರೂ, ಈ ಹಿಂದೆ ಖಾತಾ ಪರಿವರ್ತನೆಗೆ ಬರೋಬ್ಬರಿ ಆಸ್ತಿಯ ಶೇ 5ರಷ್ಟು ಗೈಡ್‌ಲೈನ್ಸ್‌ ವ್ಯಾಲ್ಯೂ ಕೊಡಬೇಕಾಗಿತ್ತು. ಗೈಡ್‌ಲೈನ್ಸ್ ವ್ಯಾಲ್ಯೂ (Guidance Value) ಎಂದರೆ ಕರ್ನಾಟಕ ಸರ್ಕಾರವು ಆಸ್ತಿ ನೋಂದಣಿ (Registration) ಮತ್ತು ಮುದ್ರಾಂಕ ಶುಲ್ಕಕ್ಕಾಗಿ (Stamp duty) ನಿಗದಿಪಡಿಸಿರುವ ಆಸ್ತಿಯ ಕನಿಷ್ಠ ಮೌಲ್ಯವಾಗಿದೆ.

B Khata to A Khata

ಬಿ ಖಾತಾ ಆಸ್ತಿ ಎ ಖಾತಾಗೆ ಪರಿವರ್ತಿಸುವ ಶುಲ್ಕ ಲೆಕ್ಕಾಚಾರ ಹೇಗಿದೆ

ಸರ್ಕಾರದ ಹೊಸ ನಿಯಮಾವಳಿಗಳ ಪ್ರಕಾರ, ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಆಸ್ತಿಯ ಒಟ್ಟು ಗೈಡ್‌ಲೈನ್ಸ್‌ ವ್ಯಾಲ್ಯೂ ಮೇಲೆ ಶೇ. 2% ದಂಡ / ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಶುಲ್ಕವನ್ನು ಆಸ್ತಿಯ ಒಟ್ಟು ವಿಸ್ತೀರ್ಣ - ಪ್ರತಿ ಚದರ ಅಡಿಗೆ ಸರ್ಕಾರದ ಗೈಡ್‌ಲೈನ್ಸ್‌ವ್ಯಾಲ್ಯೂ = ಆಸ್ತಿಯ ಒಟ್ಟು ಮೌಲ್ಯ.

ಬಿ ಟು ಎ ಖಾತಾ ಪರಿವರ್ತನಾ ಶುಲ್ಕ: ಆಸ್ತಿಯ ಒಟ್ಟು ಮೌಲ್ಯ X 0.02 (2%). ಉದಾಹರಣೆಗೆ: ನಿಮ್ಮ ಆಸ್ತಿಯ ಒಟ್ಟು ಗೈಡ್‌ಲೈನ್ಸ್ ಮೌಲ್ಯವು 50 ಲಕ್ಷ ಆಗಿದ್ದರೆ, ಅದಕ್ಕೆ ಶೇ2% ರಷ್ಟು ಲೆಕ್ಕ ಹಾಕಿದರೆ 1 ಲಕ್ಷ ಪರಿವರ್ತನಾ ಶುಲ್ಕವಾಗುತ್ತದೆ.

Bengaluru Property: ಬೆಂಗಳೂರು ಆಸ್ತಿದಾರರಿಗೆ ಗುಡ್‌ನ್ಯೂಸ್: ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ.5 ರಿಂದ ಶೇ.15ಕ್ಕೆ ಹೆಚ್ಚಳ
Bengaluru Property: ಬೆಂಗಳೂರು ಆಸ್ತಿದಾರರಿಗೆ ಗುಡ್‌ನ್ಯೂಸ್: ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ.5 ರಿಂದ ಶೇ.15ಕ್ಕೆ ಹೆಚ್ಚಳ

ಇನ್ನು ಬಿ ಖಾತಾದಿಂದ ಎ ಖಾತಾ ಪರಿವರ್ತನೆಯೊಂದಿಗೆ ಇತರ ಶುಲ್ಕಗಳು ಸಹ ಅನ್ವಯಿಸುತ್ತದೆ. ಪರಿವರ್ತನಾ ಶುಲ್ಕದ ಜೊತೆಗೆ ಆನ್‌ಲೈನ್ ಅರ್ಜಿ ಶುಲ್ಕ, ಅಭಿವೃದ್ಧಿ ಶುಲ್ಕ (Betterment charges) ಹಾಗೂ ಇತರೆ ಸರ್ಕಾರಿ ಶುಲ್ಕಗಳು ಅನ್ವಯಿಸುತ್ತವೆ. ಅರ್ಹ ಆಸ್ತಿಯನ್ನು ಬಿ ಖಾತಾದಿಂದ ಎ ಖಾತಾಗೆ ಬದಲಾಯಿಸಲು ಆನ್‌ಲೈನ್ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರದ B to A Khata ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

B Khata to A Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ: ಗೈಡ್‌ಲೈನ್ಸ್‌ ವ್ಯಾಲ್ಯೂ ಇಳಿಕೆ - ಡಿ.ಕೆ ಶಿವಕುಮಾರ್‌ ಗುಡ್‌ನ್ಯೂಸ್
B Khata to A Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ: ಗೈಡ್‌ಲೈನ್ಸ್‌ ವ್ಯಾಲ್ಯೂ ಇಳಿಕೆ - ಡಿ.ಕೆ ಶಿವಕುಮಾರ್‌ ಗುಡ್‌ನ್ಯೂಸ್

B Khata to A Khata:ಬಿ ಖಾತಾ ಮತ್ತು ಎ ಖಾತಾ ಎಂದರೇನು

ಎ ಖಾತಾ (A Khata): ಎ ಖಾತಾ ಆಸ್ತಿ ಎಂದರೆ ಅದು ಕಾನೂನುಬದ್ಧವಾದ ಆಸ್ತಿಯಾಗಿದೆ. ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸಿದೆ ಮತ್ತು ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ - ಇಂದಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಿದ್ದಿರಿ ಹಾಗೂ ಎಲ್ಲವೂ ಕಾನೂನಿನ ಪ್ರಕಾರ ಇದೆ ಎನ್ನುವುದು ಎ ಖಾತಾ ಆಸ್ತಿಯ ಸಂಕೇತವಾಗಿದೆ.

ಬಿ ಖಾತಾ (B Khata): ಬಿ ಖಾತಾ ಎನ್ನುವುದು ತೆರಿಗೆ ಪಾವತಿಗಾಗಿ ನೀಡುವ ತಾತ್ಕಾಲಿಕ ದಾಖಲೆಯಾಗಿದೆ. ಆದರೆ, ಈ ಆಸ್ತಿಗಳಲ್ಲಿ ದಾಖಲೆಗಳ ಕೊರತೆ, ನಿಯಮ ಉಲ್ಲಂಘನೆ ಅಥವಾ ಅನಧಿಕೃತ ಬಡಾವಣೆಗಳ ಸಮಸ್ಯೆಗಳನ್ನು ಒಳಗೊಂಡಿರುತ್ತವೆ. ನಿಮ್ಮ ಆಸ್ತಿಯ ನಿಖರವಾದ ಗೈಡೆನ್ಸ್ ಮೌಲ್ಯವನ್ನು ತಿಳಿಯಲು https://kaveri.karnataka.gov.in/landing-page ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+