B Khata to A Khata: ಬಿ - ಖಾತಾದಿಂದ ಎ -ಖಾತಾಗೆ ಈ ದಾಖಲೆಗಳು ಕಡ್ಡಾಯ, ಎ - ಖಾತಾ ಮಾಡಿಕೊಳ್ಳುವುದು ಹೇಗೆ ?

B-Khata to A-Khata Conversion: ಬಿ ಖಾತಾ ಇರುವ ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಬಿ ಖಾತಾ ಇರುವ ಆಸ್ತಿದಾರರು ಭಾರೀ ಸಂಕಷ್ಟ ಅನುಭವಿಸಿದ್ದರು. ಇದೀಗ ಬಿ - ಖಾತಾದಿಂದ ಎ - ಖಾತಾಗೆ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ ಆಸ್ತಿ ಇದ್ದರೂ ಅದರ ಲಾಭವಾಗದೆ ಹಾಗೂ ಆಸ್ತಿ ಮೌಲ್ಯ ಇಲ್ಲದೆ ಪರದಾಡುತ್ತಿದ್ದ ಬಿ - ಖಾತಾದಾರರಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಹಾಗಾದರೆ ಬಿ - ಖಾತಾದಿಂದ ಎ ಖಾತಾಗೆ ಆಸ್ತಿ / ನಿವೇಶನಗಳನ್ನು ಬದಲಾಯಿಸಬೇಕಾದರೆ ಬೇಕಾಗುವ ದಾಖಲೆಗಳೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬಿ - ಖಾತಾ ಇರುವ ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಸರಳ ಹಾಗೂ ಕೆಲವೇ ಕೆಲವು ಪ್ರಮುಖ ದಾಖಲೆಗಳಿದ್ದರೆ ಸಾಕು ನೀವು ಬಿ - ಖಾತಾದಿಂದ ಎ - ಖಾತಾ ಮಾಡಿಸಿಕೊಳ್ಳಬಹುದಾಗಿದೆ. ಬಿ - ಖಾತಾದಿಂದ ಎ - ಖಾತಾ ಮಾಡಿಸಿಕೊಳ್ಳಲು ಯಾವೆಲ್ಲಾ ದಾಖಲೆಗಳು ಬೇಕು ಎನ್ನುವ ವಿವರ ನೋಡೋಣ.

B-Khata to A-Khata Conversion Mandatory Documents and Step-by-Step Process Explained

ಬಿ - ಖಾತೆಯಿಂದ ಎ - ಖಾತಾ ಬದಲಾಯಿಸಲು ಬೇಕಾಗುವ ಪ್ರಮುಖ ದಾಖಲೆಗಳಲ್ಲಿ ಬಾಕಿ ಆಸ್ತಿ ತೆರಿಗೆ ಪಾವತಿಸಿದ ರಸೀದಿ, ಆಸ್ತಿ ಪತ್ರದ ದಾಖಲೆ, ಕಟ್ಟಡ ನಿರ್ಮಾಣ ಯೋಜನೆ ನಕ್ಷೆ ಹಾಗೂ ಎಲ್ಲಾ ಮಾಲೀಕರ ಆಧಾರ್ ದೃಢೀಕರಣ. ಇದರೊಂದಿಗೆ ಅರ್ಜಿ ಸಲ್ಲಿಸುವಾಗ ಸ್ಥಳ ಹಾಗೂ ಕೆಲವೊಂದು ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಳ್ಳುವಾಗ ಈ ನಿರ್ದಿಷ್ಟ ಆಸ್ತಿಗೆ ಇ - ಖಾತಾ ಮಾಡಿಸಿಕೊಳ್ಳುವುದು ಸಹ ಕಡ್ಡಾಯ ಮಾಡಲಾಗಿದೆ.

ಬಾಕಿ ಆಸ್ತಿ ತೆರಿಗೆ ಪಾವತಿಸಿದ ರಸೀದಿ: ನಿಮ್ಮ ಬಿ ಖಾತೆಯ ಎಲ್ಲಾ ಆಸ್ತಿ ತೆರಿಗೆಯನ್ನು ಪಾವತಿಸಿರುವುದು ಇದರಲ್ಲಿ ಮುಖ್ಯವಾಗಿದೆ. ಅಲ್ಲದೇ ಆಸ್ತಿಯ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆ ಸಲ್ಲಿಕೆ ಮಾಡಿರಬೇಕು. ಕಟ್ಟಡ ನಿರ್ಮಾಣ ಯೋಜನೆ ನಕ್ಷೆ & ಎಲ್ಲಾ ಮಾಲೀಕರ ಆಧಾರ್ ಕಾರ್ಡ್‌ಗಳು. ಸ್ಥಳೀಯ ಆಡಳಿತ ಸಂಸ್ಥೆ (ಉದಾ: ಗ್ರೇಟರ್ ಬೆಂಗಳೂರು ಆಡಳಿತ)ಯಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ ಇದಕ್ಕೆ ಇದೀಗ ಸರ್ಕಾರವು ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿ ಪರಿಚಯಿಸಲಾಗಿದೆ.

ಬಿ ಖಾತಾದಿಂದ ಎ ಖಾತಾ ಮಾಡಿಕೊಳ್ಳುವುದು ಹೇಗೆ ?

1. ಆನ್‌ಲೈನ್ ಮೊಬೈಲ್ ಮತ್ತು ಒಟಿಪಿ ಆಧಾರಿತ ಲಾಗಿನ್ https://BBMP.karnataka.gov.in/BtoAKhata ಮಾಡಬೇಕು.

2. ಎ ಖಾತಾ ಆಗಿ ಪರಿವರ್ತಿಸಬೇಕಾದ ಅಂತಿಮ ಬಿ-ಖಾತಾದ ePID ನಮೂದಿಸಬೇಕು

3. ಎಲ್ಲಾ ಆಧಾರ್ ದೃಢೀಕರಣ ಮಾಡಬೇಕು

4. ಸೈಟ್‌ ಮುಂಭಾಗದ ರಸ್ತೆ "ಸಾರ್ವಜನಿಕ ರಸ್ತೆ" ಆಗಿರಬೇಕು ಮತ್ತು ಅದು "ಖಾಸಗಿ ರಸ್ತೆ" ಆಗಿರುವ ನಾಗರಿಕರು "ಸಾರ್ವಜನಿಕ ರಸ್ತೆ" ಗೆ ಪರಿವರ್ತಿಸಲು ಒಪ್ಪಿಗೆ ಸೂಚಿಸುವುದು.

5. ಪರಿವರ್ತಿತ ಮತ್ತು ಪರಿವರ್ತಿಸಿದ (ಆದಾಯ ಸೈಟ್‌ಗಳು) ಎರಡೂ ರೀತಿಯ ಸೈಟ್‌ಗಳಿಗೆ ಅರ್ಜಿ ಸಲ್ಲಿಸಬಹುದು (ಫ್ಲಾಟ್‌ಗಳು ಅರ್ಹವಲ್ಲ)

6. ಸ್ಥಳ ಮತ್ತು ಇತರ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು.

7. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿಲ್ಲ.

8. ಸ್ವೀಕೃತಿಯನ್ನು ಮುದ್ರಿಸಿ.

9. ನಗರ ಪಾಲಿಕೆಯಿಂದ ಸ್ಥಳ ಭೇಟಿ ಮತ್ತು ದೃಢೀಕರಣ, ಅಗತ್ಯವಿದ್ದರೆ ಖಾಸಗಿ ರಸ್ತೆ ಸಾರ್ವಜನಿಕ ರಸ್ತೆ ಎಂದು ಘೋಷಿಸುವುದು.

10. ಅರ್ಹತೆ ಇದ್ದರೆ ಸೈಟ್‌ನ ಮಾರ್ಗದರ್ಶನ ಮೌಲ್ಯದ 5% ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸುವುದು.

11. ನಗರ ನಿಗಮ ಆಯುಕ್ತರ ಅನುಮೋದನೆಯ ನಂತರ ಸಾಫೈರ್ ವ್ಯವಸ್ಥೆಯಿಂದ ಸ್ವಯಂಚಾಲಿತ ಅನುಮೋದನೆ.

12. ಇದೆಲ್ಲ ವಿಧಾನ ಪೂರ್ಣಗೊಳ್ಳುತ್ತಿದ್ದಂತೆ ಬಿ-ಖಾತಾದಿಂದ ಎ-ಖಾತಾಗೆ ಸ್ವಯಂಚಾಲಿತ ಪರಿವರ್ತನೆ ಆಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+