B Khata: ಬಿ - ಖಾತಾದಿಂದ ಎ - ಖಾತಾ ಪರಿವರ್ತನೆ ಆಸ್ತಿದಾರರಿಗೆ ಈ ಕಾರಣಕ್ಕೆ ಬಿಸಿತುಪ್ಪ!
B Khata: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಿ ಖಾತಾದಿಂದ ಎ ಖಾತಾ ವರ್ಗಾವಣೆಗೆ ರಾಜ್ಯ ಸರ್ಕಾರವು ಅವಕಾಶ ನೀಡಿದೆ. ಆದರೆ ಇದೀಗ ಆಸ್ತಿದಾರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಳ್ಳುವುದಕ್ಕೆ ರಾಜ್ಯ ಸರ್ಕಾರವು ಅವಕಾಶ ನೀಡಿದೆಯಾದರೂ ಇದಕ್ಕೆ 100 ದಿನಗಳ ಅಭಿಯಾನದ ಹೆಸರಿನಲ್ಲಿ ಗಡುವು ನಿಗದಿ ಆಗಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಬಿ ಖಾತಾದಿಂದ ಎ ಖಾತಾ ಆಸ್ತಿ ಪರಿವರ್ತನೆ ಈಗಾಗಲೇ ಪ್ರಾರಂಭವಾಗಿದೆ. ಇನ್ನು ಬಿ ಖಾತಾದಿಂದ ಎ ಖಾತಾ ವರ್ಗಾವಣೆಗೆ ಚಾಲನೆ ನೀಡಿದ ಮೇಲೆ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಸಿಕ್ಕಂತಾಗಿದೆ. ವಿವಿಧ ಭಾಗದಲ್ಲಿ ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಬಿ ಖಾತಾದಿಂದ ಎ ಖಾತಾ ಮಾಡಿಸಿಕೊಳ್ಳುವುದು ಆಸ್ತಿದಾರರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಹಲವು ವರ್ಷಗಳಿಂದ ಆಸ್ತಿದಾರರು ಬಿ ಖಾತಾದಿಂಎ ಎ ಖಾತಾ ಮಾಡಿಸಿಕೊಳ್ಳಬೇಕು ಎಂದು ಪರದಾಡುತ್ತಿದ್ದಾರೆ. ಅಲ್ಲದೇ ಬಿಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದು ಅವರಲ್ಲಿ ಸಂತೋಷವನ್ನೂ ಉಂಟು ಮಾಡಿದೆ. ಆದರೆ ಇದೀಗ ಈ ಖಾತಾ ಪರಿವರ್ತನೆಗೆ ಲಕ್ಷ ಲಕ್ಷ ಕಟ್ಟಬೇಕು ಎನ್ನುವುದು ಸಣ್ಣ ಆಸ್ತಿದಾರರು ಅಥವಾ ಕಡಿಮೆ ಜಾಗವಿದ್ದು ಅದೂ ಸಹ ಬಿ ಖಾತಾ ಆಸ್ತಿಯನ್ನು ಹೊಂದಿರುವವರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಇನ್ನು ಮೂರು ತಿಂಗಳ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಹೊಂದಾಣಿಕೆ ಮಾಡುವುದು ಸವಾಲಿನ ಕೆಲಸವಾದಂತಾಗಿದೆ.
ಬಿ ಖಾತಾದಿಂದ ಎಖಾತಾಗೆ ಖಾತಾ ವರ್ಗಾವಣೆ ಮಾಡಿಕೊಂಡು ಮನೆ ನಿರ್ಮಾಣ ಮಾಡಬೇಕು, ಬ್ಯಾಂಕ್‌ಗಳಿಂದ ಸಾಲ ಪಡೆದುಕೊಳ್ಳುವುದು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎನ್ನುವುದು ಸೇರಿದಂತೆ ಹಲವು ಪ್ರಮುಖ ಕಾರಣಗಳಿಗೆ ಬಿ ಖಾತಾ ಆಸ್ತಿದಾರರು ಕಳೆದ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ, ಅದಕ್ಕೆ ಅವಕಾಶ ಈಗ ಸಿಕ್ಕಂತಾಗಿದೆ. ಆದರೆ ಇದರಲ್ಲೂ ಕರ್ನಾಟಕ ಸರ್ಕಾರವು ಕಡಿಮೆ ಸಮಯ ಕೊಟ್ಟಿರುವುದು ಆಸ್ತಿದಾರರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ ಬಿಖಾತಾ ಆಸ್ತಿ ಪರಿವರ್ತನೆಯ ಸಂದರ್ಭದಲ್ಲಿ ಶೇ 5% ಗೈಡ್‌ಲೈನ್ ವ್ಯಾಲ್ಯೂ ಸಹ ನಿಗದಿ ಆಗಿರುವುದು ಆಸ್ತಿದಾರರಿಗೆ ಬಿಸಿ ತುಪ್ಪವಾಗಿ ಖಾತಾ ಪರಿವರ್ತನೆ ವಿಷಯ ಬದಲಾಗಿದೆ.
ಲಕ್ಷ ಲಕ್ಷ ಕಷ್ಟ: ಇನ್ನು ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡುವುದಕ್ಕೆ ಕೆಲವೇ ದಿನಗಳಲ್ಲಿ ಲಕ್ಷ ಲಕ್ಷ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟ ಎಂದು ಆಸ್ತಿದಾರರು ಹೇಳುತ್ತಿದ್ದಾರೆ. ಬಿ ಖಾತಾಗೆ ಕೇವಲ 100 ದಿನ ಅವಕಾಶ ಎನ್ನುವ ಬಗ್ಗೆ ಅಧಿಕೃತವಾಗಿ ಇನಷ್ಟೇ ಸರ್ಕಾರದಿಂದ ಅಧಿಕೃತ ಅಪ್ಡೇಟ್ಸ್ ಬರಬೇಕಿದೆ. ಆದರೆ, ಇದಕ್ಕೂ ಹೆಚ್ಚಿನ ಅವಧಿ ವಿಸ್ತರಣೆ ಮಾಡುವ ಸಾಧ್ಯತೆ ಕಡಿಮೆ ಇದೆ ಎಂದೂ ಹೇಳಲಾಗುತ್ತಿದೆ.












Click it and Unblock the Notifications