ಆಬ್ರೀ ಚಾಕ್ಲೇಟ್ ಬೇಕಾ? ನಡೀ ವೈಯಾಲಿಕಾವಲ್‌ಗೆ
ಬೆಂಗಳೂರು.ಏ.25: ಬೆಂಗಳೂರಿನ ಐಪಿಎಲ್ ಮತ್ತು ಚಾಕಲೇಟ್ ಅಭಿಮಾನಿಗಳಿಗೆ ಗುಡ್‌ನ್ಯೂಸ್. ಇದೇ ಮೊದಲ ಬಾರಿಗೆ ಕ್ರಿಕೆಟ್ ಪ್ರೇಮಿಗಳಿಗಾಗಿ ಆಬ್ರೀ ಚಾಕಲೇಟ್ ಸಂಸ್ಥೆ ಐದುವರೆ ಅಡಿ ಎತ್ತರದ 70 ಕೆ.ಜಿ ತೂಕದ ದೊಡ್ಡ ಚಾಕಲೇಟ್ ಬ್ಯಾಟ್‌ನ್ನು ತಯಾರಿಸಿದೆ.ಕೇವಲ ಬ್ಯಾಟ್ ಅಷ್ಟೇ ಅಲ್ಲ ವಿಕೆಟ್, ಕ್ರಿಕೆಟ್ ಬಾಲ್, ಐಪಿಎಲ್ ತಂಡಗಳ ಮಾದರಿ ಲೋಗೋಗಳು ಎಲ್ಲವೂ ಚಾಕಲೇಟ್‌ನಲ್ಲಿ ಇಲ್ಲಿ ಸಿಗಲಿದೆ.
ಕಳೆದ ಮೂರು ವರ್ಷಗಳಿಂದ ಪೌಷ್ಟಿಕಾಂಶಯುಕ್ತ ಚಾಕಲೇಟ್‌ಗಳನ್ನು ತಯಾರಿಸುತ್ತಿರುವ 'ಆಬ್ರೀ' ಚಾಕಲೇಟ್ ಸಂಸ್ಥೆ ಮೊದಲ ಬಾರಿಗೆ ಮಲ್ಲೇಶ್ವರಂ ಬಳಿಯ ವೈಯಾಲಿಕಾವಲ್‌ನಲ್ಲಿ ತನ್ನ ಮೊದಲ ವಿನೂತನ ಔಟ್‌ಲೆಟ್ ಮಳಿಗೆಯನ್ನು ಆರಂಭಿಸಿದೆ. ಮುಂದಿನ ಪುಟದಲ್ಲಿ ಈ ಮಳಿಗೆ ಮತ್ತು ಚಾಕಲೇಟ್ ಬ್ಯಾಟ್ ವಿಶೇಷತೆಯನ್ನು ವಿವರಿಸಲಾಗಿದೆ.

ಚಾಕಲೇಟ್ ಬ್ಯಾಟ್:
ಐದುವರೆ ಅಡಿ ಎತ್ತರದ, 70 ಕೆ.ಜಿ ತೂಕದ ಚಾಕಲೇಟ್ ಬ್ಯಾಟ್‌ನ್ನು ಏಳು ಜನ ಸಿಬ್ಬಂದಿಗಳು ಎರಡು ದಿನದಲ್ಲಿ ಸಿದ್ದಪಡಿಸಿದ್ದಾರೆ.

ಚಾಕಲೇಟ್‌ಗಳ ಬೆಲೆ:
18 ರೂ.ಗಳಿಂದ ಆರಂಭವಾಗಿ 10 ಸಾವಿರ ರೂ.ಬೆಲೆಯ ಚಾಕಲೇಟ್‌ಗಳು ಇಲ್ಲಿ ಲಭ್ಯವಿದೆ.

ಮೊಟ್ಟೆ ರಹಿತ ಚಾಕಲೇಟ್:
ಸಂಪೂರ್ಣವಾಗಿ ಮೊಟ್ಟೆ ರಹಿತವಾಗಿ ಚಾಕಲೇಟ್ ತಯಾರಿಸುವುದು ಇಲ್ಲಿನ ವಿಶೇಷತೆ. ಚಾಕಲೇಟ್ ತಯಾರಿಕೆಗೆ ಬಳಸುವ ಬಣ್ಣ, ಫ್ಲೇವರ್,ವಸ್ತುಗಳ ಪ್ರಮಾಣ, ಪ್ಯಾಕಿಂಗ್ ಪ್ರತಿಯೊಂದಕ್ಕೂ ಗುಣಮಟ್ಟದ ಆದ್ಯತೆ ನೀಡಿ ಚಾಕಲೇಟ್‌ಗಳನ್ನು ತಯಾರಿಸಲಾಗುತ್ತದೆ.

ಇಷ್ಟ ಬಂದ ವಿನ್ಯಾಸದಲ್ಲಿ ಚಾಕಲೇಟ್ ರೆಡಿ:
ಗ್ರಾಹಕರು ತಮಗೆ ಬಗೆಯ ಚಾಕಲೇಟ್ ಬೇಕೋ ಆ ವಿನ್ಯಾಸದ ಚಾಕಲೇಟ್‌ನ್ನು ಆರ್ಡರ್ ಮಾಡಿದ್ದಲ್ಲಿ 'ಆಬ್ರೀ' ತಯಾರಿಸಿ ಕೊಡಲಿದೆ.

ವಿಳಾಸ :
ಬೆಳಗ್ಗೆ 9 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಆಬ್ರೀ ಮಳಿಗೆ ತೆರೆದಿರುತ್ತದೆ.
ವಿಳಾಸ:41/1, 2ನೇ ಮುಖ್ಯ ರಸ್ತೆ, ವೈಯಾಲಿಕವಲ್ ಬೆಂಗಳೂರು.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು:aubree.in












Click it and Unblock the Notifications