ದಾವತ್ ಬಾರ್ ಅಂಡ್ ಪಬ್ ಮಾಲಿಕನಿಗೆ ಪೊಲೀಸರ 'ದಾವತ್'

ಬೆಂಗಳೂರು, ಜುಲೈ, 09 : ಅನೈತಿಕ ಚಟುವಟಿಕೆ ಪ್ರಚೋದನೆಯ ಹಿನ್ನೆಲೆಯಲ್ಲಿ ಮಾರುತಿ ಪ್ಲಾಜಾದ ಬಳಿ ಇರುವ ದಾವತ್ ಫ್ಯಾಮಿಲಿ ರೆಸ್ಟೋರೆಂಟ್, ಬಾರ್ ಮತ್ತು ಪಬ್ ಮೇಲೆ ಧಾಳಿ ನಡೆಸಿದ ಕೋರಮಂಗಲದ ಪೊಲೀಸರು ಮಾಲೀಕರನ್ನು ಬಂಧಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಪಬ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯು 'ಅಕ್ರಮ ಹಣ ಸಂಪಾದನೆ ವಿಷಯವನ್ನು ಪೊಲೀಸರ ಗಮನಕ್ಕೆ ತರುತ್ತೇನೆ ಎಂದು ಹೇಳಿದಕ್ಕೆ ಬಲವಂತವಾಗಿ ಕೂಡಿ ಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ. ಇಲ್ಲಿರುವ ಮಹಿಳೆಯರನ್ನು ದೈಹಿಕವಾಗಿ, ಮಾನಸಿಕವಾಗಿ ಸಾಕಷ್ಟು ಹಿಂಸಿಸುತ್ತಿದ್ದಾರೆ' ಎಂದು ಮಾಲೀಕರ ವಿರುದ್ದ ದೂರು ದಾಖಲಿಸಿದ್ದರು[ಗೋವಾ ವರ್ಜಿನ್ ನೈಟ್ ಕ್ಲಬ್ ನರ್ತಕಿಯರ ರಕ್ಷಣೆ]

attack on the pub detention of the owner

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರಿಗೆ ಮಾಲೀಕರು ಹಲವು ಮಹಿಳೆಯರನ್ನು ಹೊರ ರಾಜ್ಯದಿಂದ ಕರೆಸಿಕೊಂಡು ತಮ್ಮ ರೆಸ್ಟೊರೆಂಟ್ ನಲ್ಲಿ ಕೆಲಸಕ್ಕೆ ಇಟ್ಟುಕೊಂಡಿರುವುದು, ಅಸಭ್ಯ ಉಡುಪುಗಳನ್ನು ಧರಿಸುವಂತೆ ಒತ್ತಾಯಿಸುತ್ತಾ, ಲೈಂಗಿಕತೆಗೆ ಪ್ರಚೋದನೆ ನೀಡುವಂತೆ ಒತ್ತಡ ಹೇರುತ್ತಿರುವುದು, ಅಲ್ಲದೇ ಅವರಿಂದ ಅಸಹ್ಯಕರವಾಗಿ ನೃತ್ಯ ಮಾಡಿಸುತ್ತಾ ಗ್ರಾಹಕರನ್ನು ಆಕರ್ಷಿಸಿ ಅಕ್ರಮವಾಗಿ ಹಣ ಸಂಪಾದನೆಯ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

ಕೊನೆಗೆ ಪಬ್ ಹುಡುಗಿಯ ಮಾಹಿತಿ ಮೇರೆಗೆ ಪಬ್ ಗೆ ತೆರಳಿದ ಪೊಲೀಸರು 26 ಹುಡುಗಿಯರನ್ನು ರಕ್ಷಿಸಿ, 16 ಜನ ನೌಕರರನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮವಾಗಿ ಸಂಪಾದಿಸಿದ್ದ 46,000 ರೂಗಳನ್ನು, 2 ಮೊಬೈಲ್ ಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+