ಒನ್ಇಂಡಿಯಾ ಫೇಸ್ಬುಕ್ ಸಮೀಕ್ಷೆ: ಆರ್ ಆರ್ ನಗರದಲ್ಲಿ ಜೆಡಿಎಸ್ ಗೆ ಜಯ
ಬೆಂಗಳೂರು, ಮೇ 06: ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಓದುಗರ ಅಭಿಪ್ರಾಯ ಸಂಗ್ರಹ ಮಾಡುವ ಉದ್ದೇಶದಿಂದ ಒನ್ಇಂಡಿಯಾ ತನ್ನ ಫೇಸ್ ಬುಕ್ ಪುಟದಲ್ಲಿ ಫೇಸ್ಬುಕ್ ಲೈವ್ ಪೋಲ್ ನಡೆಸುತ್ತಿದೆ. ಬೆಂಗಳೂರಿನ ಪ್ರತಿಷ್ಠಿತ ರಾಜರಾಜೇಶ್ವರಿನಗರದ ವಿಧಾನಸಭಾ ಕ್ಷೇತ್ರಕ್ಕಾಗಿ ನಡೆಸಿದ ಸಮೀಕ್ಷೆ ಫಲಿತಾಂಶ ಇಲ್ಲಿದೆ.
ರಾಜರಾಜೇಶ್ವರಿ ನಗರ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಹೊಸ ಕ್ಷೇತ್ರವಾಯಿತು. 2008ರಲ್ಲಿ ಬಿಜೆಪಿ, 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
ರಾಜರಾಜೇಶ್ವರಿನಗರದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕಾಂಗ್ರೆಸ್ಸಿನ ನಿರ್ಮಾಪಕ ಮುನಿರತ್ನ ಅವರು ಹಾಲಿ ಶಾಸಕರು. ಈ ಬಾರಿ ಬಿಜೆಪಿಯ ಮುನಿರಾಜು ಗೌಡ ಹಾಗೂ ಮುನಿರತ್ನ ನಡುವೆ ತೀವ್ರ ಹಣಾಹಣಿ ನಡೆಯಲಿದೆ ಎಂದೆನಿಸಲಾಗಿದೆ. ಇತ್ತೀಚೆಗೆ ಜೆಡಿಎಸ್ ಸೇರಿರುವ ಚಿತ್ರನಟಿ ಅಮೂಲ್ಯ ಅವರ ಮಾವ ಜಿ.ಎಚ್ ರಾಮಚಂದ್ರ ಅವರು ಜಯ ಗಳಿಸುವ ನಿರೀಕ್ಷೆ ಹುಟ್ಟಿದೆ.

ಫೇಸ್ಬುಕ್ ಲೈವ್ ಮತದಾನ: ಇದರಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಆಯ್ಕೆಗಳನ್ನು ನೀಡಲಾಗಿರುತ್ತದೆ. ಉದಾಹರಣೆಗೆ ಚಾಮುಂಡೇಶ್ವರಿ ಕ್ಷೇತ್ರದ ಲೈವ್ ಪೋಲ್ ನಲ್ಲಿ ಮೂವರು ಪ್ರಮುಖ ಅಭ್ಯರ್ಥಿಗಳಿಗೂ ಪ್ರತ್ಯೇಕ ಚಿಹ್ನೆ(ಎಮೋಜಿ) ಬಳಸಲಾಗಿದೆ. ವೀಕ್ಷಕರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಸರಿ ಹೊಂದುವ ಎಮೋಜಿಯನ್ನು ಒತ್ತುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಬಹುದು.
ಫಲಿತಾಂಶ: ಸುಮಾರು ಎರಡೂವರೆ ಗಂಟೆ ಅವಧಿಯ ಚುಟುಕು ಸಮೀಕ್ಷೆ ಇದಾಗಿತ್ತು. ಈ ವೇಳೆಯಲ್ಲಿ ನೂರಾರು ಬಾರಿ ಶೇರ್ ಆಗಿದ್ದು, ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಗಮನಿಸಿ ಅಭ್ಯರ್ಥಿಗಳಿಗೆ ನೀಡಿರುವ ಎಮೋಜಿಗಳನ್ನು ಒತ್ತಿದರೆ ಮಾತ್ರ ನಿಮ್ಮ ಮತ ಲೆಕ್ಕಕ್ಕೆ ಸಿಗಲಿದೆ.
ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ಅವರಿಗೆ 229 ಮತಗಳು ಲಭಿಸಿದ್ದರೆ, ಕಾಂಗ್ರೆಸ್ಸಿನ ಮುನಿರತ್ನ ಅವರಿಗೆ 60 ಮತಗಳು ಸಿಕ್ಕಿವೆ. ಇನ್ನು ಜೆಡಿಎಸ್ ಜಿಎಚ್ ರಾಮಚಂದ್ರ ಅವರಿಗೆ 315 ಮತಗಳು ಬಂದಿದೆ. ಪಕ್ಷೇತರರಾಗಿ ನಿಂತಿರುವ ಹುಚ್ಚ ವೆಂಕಟ್ ಅಲಿಯಾಸ್ ವೆಂಕಟ್ ರಾಮ್ ಅವರಿಗೆ 60 ಮತಗಳು ಬಂದಿವೆ.












Click it and Unblock the Notifications