ಬೆಂಗಳೂರಿನಲ್ಲಿ ಏಷ್ಯಾದ ಅತಿ ಎತ್ತರದ ಮೆಟ್ರೋ ನಿಲ್ದಾಣ: ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು, ಅಕ್ಟೋಬರ್‌ 05: ಏಷ್ಯಾದಲ್ಲೇ ಅತಿ ದೊಡ್ಡ , ಅತಿ ಎತ್ತರದ ಮೆಟ್ರೋ ಸ್ಟೇಷನ್ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಿರ್ಮಾಣವಾಗುತ್ತಿದೆ. ಡಬಲ್ ಎಲಿವೇಟೆಡ್ ಜೊತೆಗೆ ಆರು ಹಂತಗಳನ್ನು ಹೊಂದಿರುವ ಮೆಟ್ರೋ ಸ್ಟೇಷನ್‌ಅನ್ನು ಮೆಟ್ರೋ ನಿಗಮ ನಿರ್ಮಾಣ ಮಾಡುತ್ತಿದ್ದು, ಇದು ಮಾದರಿ ಮೆಟ್ರೋ ನಿಲ್ದಾಣವಾಗಿ ಹೊರಹೊಮ್ಮುತ್ತಿದೆ.

ನಗರದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಮೆಟ್ರೋ ಈಗ ಹೊಸ ಮೈಲಿಗಲ್ಲಿಗೆ ಸಜ್ಜಾಗಿದೆ. ಏಷ್ಯಾದಲ್ಲೇ ಅತಿ ದೊಡ್ಡ , ಅತಿ ಎತ್ತರದ ಹಾಗೂ ಹೈಟೆಕ್ ಮೆಟ್ರೋ ನಿಲ್ದಾಣವನ್ನು ಮೆಟ್ರೋ ನಿಗಮ‌ ನಿರ್ಮಾಣ ಮಾಡುತ್ತಿದೆ. ಅದೇ ಜಯದೇವ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣ.

Asias Tallest Metro Station Under Construction In Bengaluru

ಇದು ಏಷ್ಯಾದ ಮೊದಲ ಡಬಲ್ ಎಲಿವೇಟೆಡ್ ಹಾಗೂ ಇಂಟರ್ ಚೇಂಜ್ ಮೆಟ್ರೋ ನಿಲ್ದಾಣವಾಗಿದ್ದು, ಈ ನಿಲ್ದಾಣದಲ್ಲಿ ರಸ್ತೆ ಮಾರ್ಗ ಹಾಗೂ ಮೆಟ್ರೋ ರೈಲು ಮಾರ್ಗವೂ ಸೇರಿದಂತೆ ಒಟ್ಟು ಆರು ಹಂತಗಳಿದ್ದು, ಈ ಆರು ಹಂತಗಳಲ್ಲೂ ಸಂಚಾರ ವ್ಯವಸ್ಥೆ ಮುಂದುವರೆಯಲಿದೆ. ಈ ಮೆಟ್ರೋ ನಿಲ್ದಾಣಕ್ಕೆ ಸಂಸದ ತೇಜಸ್ವಿ ಸೂರ್ಯ ಹಾಗೂ ಜಯನಗರ ಕ್ಷೇತ್ರದ ಶಾಸಕ ರಾಮಮೂರ್ತಿ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

ಆರು ಹಂತದಲ್ಲಿ ನಿರ್ಮಾಣವಾಗುತ್ತಿರುವ ನಿಲ್ದಾಣದ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಮೆಟ್ರೋ ಅಧಿಕಾರಿಗಳು ಹಾಗೂ ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಸಂಸದ ತೇಜಸ್ವಿ,'ಫೆಬ್ರವರಿ 2024ರ ಒಳಗೆ ಆರ್.ವಿ ರೋಡ್ - ಬೊಮ್ಮಸಂದ್ರ ಪೂರ್ಣಗೊಳಿಸೋದಾಗಿ ಮೆಟ್ರೋ ಗುರಿ ಹೊಂದಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೆಲಸ ಮಾಡಬೇಕಿದೆ. ಈ ಸಂಬಂಧ ನಾನು ಕೂಡ ಸಿಎಂ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದರು.

ಸದ್ಯ ಜಯದೇವ ಮೆಟ್ರೋ ಸ್ಟೇಷನ್‌ ನಲ್ಲಿ ಶೇಕಡ 70%ರಷ್ಟು ಕೆಲಸ ಮುಗಿದಿದ್ದು, ಸ್ಟೇಷನ್ ಸಂಪೂರ್ಣಗೊಂಡ ನಂತರ ದೇಶಕ್ಕೆ ಮಾದರಿ ಮೆಟ್ರೋ ಸ್ಟೇಷನ್ ಆಗಿ ಹೊರಹೊಮ್ಮಲಿದೆ. ಈ ಅದ್ಬುತ ಮೆಟ್ರೋ ನಿಲ್ದಾಣಕ್ಜೆ 200 ಕೋಟಿಗೂ ಅಧಿಕ ವೆಚ್ಚ ತಗುಲಲಿದೆ.

Asias Tallest Metro Station Under Construction In Bengaluru

ಈ ನಿಲ್ದಾಣದ ಆರು ಹಂತಗಳನ್ನ ನೋಡುವುದಾದರೆ ಮೊದಲನೇ ಹಂತದಲ್ಲಿ ಬನ್ನೇರುಘಟ್ಟದಿಂದ ಡೈರಿ ಸರ್ಕಲ್ ವರೆಗಿನ ಅಂಡರ್ ಪಾಸ್, ಎರಡನೇ ಹಂತದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗಿನ ರಸ್ತೆ, ಮೂರನೇ ಹಂತದಲ್ಲಿ ಇದೇ ಮಾರ್ಗದಲ್ಲಿ ಫ್ಲೈಓವರ್. ನಾಲ್ಕನೇ ಹಂತ ಮೆಟ್ರೋ ಕಾನ್ ಕೋರ್ಸ್ ಲೆವಲ್, ಐದನೇ ಹಂತ ಆರ್ .ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ರೀಚ್ 5, ಆರನೇ ಹಂತದಲ್ಲಿ ಕಾಳೆನ ಅಗ್ರಹಾರ ನಾಗವಾರದವರೆಗಿನ ರೀಚ್ 6ನ ಮೆಟ್ರೋ ರೈಲು ಓಡಾಡಲಿದೆ.

18 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ 16 ನಿಲ್ದಾಣಗಳಿದ್ದು ನಿತ್ಯ ಎರಡೂವರೆ ಲಕ್ಷ ರೈಡರ್ ಶಿಫ್ ಆಗುವ ನಿರೀಕ್ಷೆ ಇದೆ‌ .‌ಜೊತೆಗೆ ಜಯನಗರ ಕ್ಷೇತ್ರದ ಸುತ್ತಮುತ್ತಲಿನ ಟ್ರಾಫಿಕ್‌ಗೂ ಬ್ರೇಕ್ ಬೀಳಲಿದೆ.

Asias Tallest Metro Station Under Construction In Bengaluru

ಒಟ್ಟಾರೆ ಈ ಭಾಗದ ಬಹುನೀರಿಕ್ಷಿತ ಮಾರ್ಗ ಡೆಡ್ ಲೈ‌ನ್ ಪ್ರಕಾರ ಮುಂಬರುವ ಫೆಬ್ರವರಿ ಒಳಗಾಗಿ ಸಂಚಾರಕ್ಕೆ ಮುಕ್ತಾವಾದರೆ, ನಗರದ ಒಂದು ಭಾಗದ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬೀಳಲಿದೆ. ಆದರೆ ಅಂದುಕೊಂಡಂತೆ ಸಮಯವಕಾಶದ ಒಳಗಾಗಿ ಕಾಮಗಾರಿ ಮುಗಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+