ಸಹೋದ್ಯೋಗಿ ಮೇಲೆ ಅತ್ಯಾಚಾರವೆಸಗಿದ್ದ ಆರ್ಮಿ ಮೇಜರ್‌ ಬಂಧನ

ಬೆಂಗಳೂರು, ಮಾರ್ಚ್ 15: ಪಾರ್ಟಿ ಮುಗಿಸಿ ಮನೆಗೆ ಬಿಡುತ್ತೇನೆ ಎಂದು ಕರೆದುಕೊಂಡು ಹೋಗಿ ಸಹೋದ್ಯೋಗಿ ಮೇಲೆ ಅತ್ಯಾಚಾರವೆಸಗಿದ್ದ ಆರ್ಮಿ ಮೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಪಾರ್ಟಿಗೆ ಕರೆದೊಯ್ಯುವುದಾಗಿ ಹೇಳಿ ಹಳೇಯ ಏರ್‌ಪೋರ್ಟ್ ರಸ್ತೆಯಲ್ಲಿ ಕಾರಿನಲ್ಲೇ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಮೀತ್ ಚೌದ್ರಿ ಅತ್ಯಾಚಾರವೆಸಗಿದ ಮೇಜರ್. ಬಾಸ್ ಮನೆಗೆ ಪಾರ್ಟಿಗೆಂದು ಹೋಗಿದ್ದೆ. ಬಳಿಕ ಬಾಸ್ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರಿನಲ್ಲೇ ಅಮೀತ್ ಚೌದ್ರಿ ಅತ್ಯಾಚಾರ ಎಸಗಿದ್ದಾನೆ ಎಂದು ನೊಂದ ಯುವತಿ ಆರೋಪಿಸುತ್ತಿದ್ದಾಳೆ.

ಪೊಲೀಸರು ಆರೋಪಿ ಅಮೀತರ್ ಚೌದ್ರಿಯನ್ನು ವಶಕ್ಕೆ ಪಡೆದು ತನಿಖೆ ಮಾಡಿದ್ದಾರೆ. ಈ ಪ್ರಕರಣ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆದ್ರೆ ಇದೀಗ ಕೇಸ್ ಹಲಸೂರು ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದೆ.

Army Major takes colleague on drive, rapes her in Bengaluru

ಹಲಸೂರು ಪೊಲೀಸ್ ಠಾಣೆಯ ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಆರೋಪಿ ಅಮೀತ್ ಚೌದ್ರಿಗೆ ಜಾಮೀನು ನೀಡಿದ್ದಾರೆ.

ಘಟನೆ ನಡೆದು 2 ದಿನಗಳ ಬಳಿಕ ಅವರ ಪೋಷಕರಿಗೆ ಈ ವಿಷಯ ತಿಳಿದು ಗಾಬರಿಗೊಂಡಿದ್ದಾರೆ.ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಪೊಲೀಸರು ಇದೀಗ ಹಲಸೂರು ಠಾಣೆಗೆ ಪ್ರಕರಣ ವರ್ಗಾಯಿಸಿದ್ದಾರೆ. ಮೇಲಧಿಕಾರಿಗಳಿಗೂ ಮೌಖಿಕ ದೂರು ನೀಡಿದ್ದಾರೆ. ಅವರ ಮೇಲೆ ಐಪಿಸಿ ಸೆಕ್ಷನ್ 376 ಹಾಗೂ 323ರಲ್ಲಿ ಪ್ರಕರಣ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+