ಫ್ರೀಡಂಪಾರ್ಕ್ ನಲ್ಲಿ ಬಣ್ಣ-ಬಣ್ಣದ ಮೀನುಗಳ ಪ್ರದರ್ಶನ
ಬೆಂಗಳೂರು, ಏ. 19 : ಬೆಂಗಳೂರಿನಲ್ಲಿ ಮಕ್ಕಳೊಂದಿಗೆ ವೀಕೆಂಡ್ ಕಳೆಯುವುದು ಹೇಗೆ ಎಂದು ಚಿಂತಿಸುತ್ತಿರುವ ಜನರಿಗಾಗಿಯೇ ಆಕ್ವಾ ಲೈಫ್ ಮತ್ಯ್ಸಮೇಳವನ್ನು ಆಯೋಜಿಸಿದೆ. ಶುಕ್ರವಾರ ಫ್ರೀಡಂ ಪಾರ್ಕ್‌ನಲ್ಲಿ ಆರಂಭವಾದ ಈ ಮೇಳ ಏ.22ರವರೆಗೆ ನಡೆಯಲಿದೆ. [ಬಣ್ಣ-ಬಣ್ಣದ ಮೀನುಗಳ ಪ್ರದರ್ಶನ]
ಪುಣೆ, ಮುಂಬೈ, ಅಹಮದಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 15ಕ್ಕೂ ಹೆಚ್ಚು ಪ್ರದರ್ಶನಗಳನ್ನು ಏರ್ಪಡಿಸಿರುವ 'ಆಕ್ವಾಫ್ರೈಫ್' ಹಾಗೂ ಲೌಕಿಕ್ ಕ್ರಿಯೇಷನ್ಸ್ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಮತ್ಸ್ಯಮೇಳವನ್ನು ಆಯೋಜಿಸಿದೆ. ಶುಕ್ರವಾರ ಮೇಳ ಆರಂಭವಾಗಿದ್ದು ವೈವಿಧ್ಯಮಯ ಮೀನುಗಳು, ಪ್ರಾಣಿ, ಪಕ್ಷಿಗಳ ಪ್ರದರ್ಶನವನ್ನು ನೀವು ಏ.22ರ ವರೆಗೆ ನೋಡಬಹುದಾಗಿದೆ.

ಪ್ರದರ್ಶನದಲ್ಲಿ ಕೇವಲ ಮೀನುಗಳು ಮಾತ್ರವಲ್ಲದೇ, ವಿದೇಶಿ ಬೆಕ್ಕು, ಎಮು ಪಕ್ಷಿ, ಗಿನಿಪಿಗ್, ಗ್ರೇ ಪ್ಯಾರಟ್ ನಂತಹ ಪ್ರಾಣಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪ್ರದರ್ಶನ ವೀಕ್ಷಿಸಲು ರೂ.60 ಪ್ರವೇಶದರವನ್ನು ಪಾವತಿ ಮಾಡಬೇಕಾಗಿದೆ.
ಬಂದಿವೆ ಫೆಂಗ್ ಶುಯಿ ಮೀನು : ಫೆಂಗ್ ಶುಯಿ ಮೀನು ಮನೆಯಲ್ಲಿದ್ದರೆ ಸಕಾರಾತ್ಮಕ ವಾತಾವರಣ ನಿರ್ಮಾಣ ವಾಗುತ್ತದೆ ಎಂಬ ನಂಬಿಕೆ ಇದೆ. ಮೇಳದಲ್ಲಿ ಈ ಮೀನುಗಳನ್ನು ಮಾರಾಟಕ್ಕೆ ಇಡಲಾಗಿದೆ. ಬ್ಯಾಂಕಾಕ್‌ನಿಂದ ತರಿಸಿರುವ ಈ ಮೀನೊಂದರ ಬೆಲೆ 10 ರಿಂದ 15 ಸಾವಿರ ರೂ.
ಮನೆಯಂಗಳದಲ್ಲಿ ಪುಟ್ಟದಾಗಿ ಕೊಳವನ್ನು ನಿರ್ಮಾಣಮಾಡಿಕೊಳ್ಳುವ ಆಸಕ್ತಿ ಇದ್ದರೆ ಅದಕ್ಕೂ ಪ್ರದರ್ಶನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೆಲವು ಸಂಸ್ಥೆಗಳು ಪ್ರದರ್ಶನದಲ್ಲಿ ತಮ್ಮ ಮಳಿಗೆಗಳನ್ನು ತೆರೆದಿದ್ದು, ನಿಮ್ಮ ಮನೆ ಬಾಗಿಲಿಗೆ ಬಂದು ಸೇವೆ ಒದಗಿಸಲಿವೆ. ಮತ್ಸ್ಯಮೇಳದ ವಿಶೇಷತೆಯನ್ನು ತಿಳಿಯಲು ಒಮ್ಮೆ ಭೇಟಿ ಕೊಟ್ಟು ಬನ್ನಿ.












Click it and Unblock the Notifications