BMTC Student Pass: ವಿದ್ಯಾರ್ಥಿ ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸುವ ವಿಧಾನ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸರ್ಕಾರದ ನಿರ್ದೇಶನದಂತೆ ಉಚಿತ / ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸುಗಳನ್ನು ವಿತರಿಸಲು ಮುಂದಾಗಿದೆ. ಅದರಂತೆ 2023-24ನೇ ಸಾಲಿನ ವಿದ್ಯಾರ್ಥಿ ಪಾಸಿಗಾಗಿ ಇಂದಿನಿಂದ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿ ಪಾಸುಗಳನ್ನು ಬೆಂಗಳೂರು ಒನ್ ಕೇಂದ್ರದ ಮೂಲಕ ವಿತರಿಸಲಾಗುತ್ತದೆ.
2023-24ನೆ ಸಾಲಿನ ವಿದ್ದ್ಯಾರ್ಥಿ ಪಾಸಿನ್ ಆನ್‌ಲೈನ್ ಅರ್ಜಿಯನ್ನು ಸೇವಾಸಿಂಧು ಮತ್ತು ಬಿಎಂಇಸಿ ವೆಬ್‌ಸೈಟ್ ಮೂಲಕ ಸಲ್ಲಿಸಲಬಹುದಾಗಿದೆ. ಬೆಂಗಳೂರು ಒನ್ ಕೇಂದ್ರ ಮೂಲಕವೂ ವಿದ್ಯಾರ್ಥಿ ಪಾಸಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಶಕ್ತಿ ಯೋಜನೆಯಡಿ ಕರ್ನಾಟಕ ರಾಜ್ಯದ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಸಾಮಾನ್ಯ ಸೇವೆಗಳ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದ್ದು, ಅದರಂತೆ ಕರ್ನಾಟಕ ರಾಜ್ಯದ ವಿದ್ಯಾರ್ಥಿನಿಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯಬಹುದಾಗಿದೆ.

ವಿದ್ಯಾರ್ಥಿ ಪಾಸುಗಳನ್ನು ಬೆಳಗ್ಗೆ 8 ಗಂಟೆಯಿಂದ ಸಂಜೆ 6.30ರವರೆಗೆ ವಾರದ ಎಲ್ಲಾ ದಿನಗಳಲ್ಲಿ ಬೆಂಗಳೂರು ಒನ್ ಕೇಂದ್ರಗಳಲ್ಲಿ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೆಂಪೇಗೌಡ ಬಸ್ ನಿಲ್ದಾಣ, ಕೆಂಗೇಟಿ ಟಿಟಿಎಂಸಿ, ಹೊಸಕೋಟೆ, ಎಲೆಕ್ಟ್ರಾನಿಕ್ ಸಿಟಿ ಘಟಕ-19, ಶಾಂತಿನಗರ ಟಿಟಿಎಂಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್ ಟಿಸಿ) ಆನೇಕಲ್ ಬಸ್ ನಿಲ್ದಾಣದ ಬಳಿ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ
https://sevasindhu.karnataka.gov.in,http://student.mybmtc.com:8280/bmtc/login/secure# ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬಿಎಂಟಿಸಿ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿ ಬಸ್‌ಪಾಸ್‌ಗಳ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಮತ್ತೊಂದು ವಿಂಡೋ ತೆರೆಯಲಿದೆ. ಇಲ್ಲಿ ನಿಮ್ಮ ನಿಮ್ಮ ವ್ಯಾಸಂಗದ ಆಯ್ಕೆಯನ್ನು ಕ್ಲಿಕ್ಕಿಸಿದರೆ ಅರ್ಜಿ ನಮೂನೆ ತೆರೆಯಲಿದೆ. ಅಲ್ಲಿ ಕೇಳಿದ ವಿವರಗಳನ್ನು ನಮೂದಿಸಿ, ನಿಮ್ಮ ಫೋಟೊ, ಶಾಲಾ/ಕಾಲೇಜು ರಸೀತಿ, ಅರ್ಜಿ ನಮೂನೆಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ/ಸರ್ಕಾರ/ವಿಶ್ವ ವಿದ್ಯಾಲಯ/ ಸಂಬಂಧಿಸಿದ ಸರ್ಕಾರಿ ಇಲಾಖೆಯಿಂದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪಾಸು ಪಡೆಯಲು ಅರ್ಹರಿರುತ್ತಾರೆ. ನಿಗದಿಪಡಿಸಿದ ಅರ್ಜಿಯನ್ನು ಭರ್ತಿ ಮಾಡಿ ಶಾಲೆಯ ಮುಖ್ಯಸ್ಥರಿಂದ ದೃಢೀಕರಿಸಿ ಸಲ್ಲಿಸಬೇಕಾಗುತ್ತದೆ. ನಿಗದಿತ ಅರ್ಜಿ ನಮೂನೆ ವೆಬ್‌ಸೈಟನಲ್ಲಿ ಲಭ್ಯವಿದೆ.

ಸಿಬಿಎಸ್‌ಸಿ/ಐಸಿಎಸ್‌ಇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 1. ವಿದ್ಯಾರ್ಥಿಯ ಭಾವಚಿತ್ರ. 2.ಶಾಲಾ/ಕಾಲೇಜಿನ ಶುಲ್ಕ ರಸೀದಿ. 3.ಆಧಾರ್ ಕಾರ್ಡ್ ಅನ್ನು ಅರ್ಜಿ ಸಲ್ಲಿಕೆ ವೇಳೆ ನೀಡಬೇಕಾಗುತ್ತದೆ.
ಪಿಯುಸಿ ಮತ್ತು ಪದವಿ, ವೃತ್ತಿಪರ, ತಾಂತ್ರಿಕ, ವೈದ್ಯಕೀಯ, ಪಿಹೆಚ್‌ಡಿ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಲು 1. ವಿದ್ಯಾರ್ಥಿಯ ಭಾವಚಿತ್ರ. 2.ಶಾಲಾ/ಕಾಲೇಜಿನ ಶುಲ್ಕ ರಸೀದಿ. 3.ಆಧಾರ್ ಕಾರ್ಡ್ ದಾಖಲೆಗಳು ಬೇಕಾಗುತ್ತದೆ.
ಸೇವಾಶುಲ್ಕ 200 ರೂಪಾಯಿ ನಿಗದಿಪಡಿಸಿದ್ದು, ಆನ್‌ಲೈನ್ ಅರ್ಜಿ ಸಲ್ಲಿಸಲು ಯಾವುದೇ ಸೇವಾಶುಲ್ಕ ಇರುವುದಿಲ್ಲ. ಅರ್ಜಿ ಸ್ವೀಕರಿಸಿದ 7 ದಿನಗಳ ಒಳಗಾಗಿ ಸ್ಮಾರ್ಟ್ ಪಾಸ್ ಅನ್ನು ವಿತರಿಸಲಾಗುತ್ತದೆ. ನಿಮ್ಮ ಅರ್ಜಿಯ ಸ್ಟೇಟಸ್ ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮೂಲಕ ತಿಳಿಸಲಾಗುತ್ತದೆ.
ಪಾಸ್ ದರ ಹೀಗಿದೆ
ಪ್ರೈಮರಿ ವಿದ್ಯಾರ್ಥಿಗಳಿಗೆ ಉಚಿತ
ಪ್ರೌಢಶಾಲೆ ವಿದ್ಯಾರ್ಥಿಗಳಿಗೆ - 600 ರೂಪಾಯಿ
ಪಿಯುಸಿ ವಿದ್ಯಾರ್ಥಿಗಳಿಗೆ - 900 ರೂಪಾಯಿ
ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ
ಪದವಿ/ವೃತ್ತಿಪರ ವಿದ್ಯಾರ್ಥಿಗಳಿಗೆ - 960 ರೂಪಾಯಿ
ವೈದ್ಯಕೀಯ/ತಾಂತ್ರಿಕ ವಿದ್ಯಾರ್ಥಿಗಳಿಗೆ - 1400 ರೂಪಾಯಿ
ಸಂಜೆ ಕಾಲೇಜು/ ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ - 1235 ರೂಪಾಯಿ
ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸಹಾಯವಾಣಿ ಸಂಖ್ಯೆ-08022483777 ಗೆ ಸಂಪರ್ಕಿಸಹುದಾಗಿದೆ. ಅಥವಾ ಸಂಸ್ಥೆಯ ವೆಬ್‌ಸೈಟ್ ಮೂಲಕ ಮಾಹಿತಿ ಪಡೆಯಬಹುದಾಗಿದೆ.












Click it and Unblock the Notifications